ದಕ್ಷಿಣದತ್ತ ಬಂದ ಸಲ್ಮಾನ್ ಖಾನ್: ಸ್ಟಾರ್ ನಟನೊಂದಿಗೆ ನಟನೆ

ನಟ ಸಲ್ಮಾನ್ ಖಾನ್ ಬಾಲಿವುಡ್‌ನ ದೊಡ್ಡ ಸ್ಟಾರ್. ಅವರ ಸಿನಿಮಾ ಬಿಡುಗಡೆ ಆದರೆ ಸಾಕು ಬಾಕ್ಸ್ ಆಫೀಸ್ ಧೂಲಿಪಟ. ಸಲ್ಮಾನ್ ನಟನೆಯ ಕೆಟ್ಟ ಸಿನಿಮಾಗಳು ಸಹ 100 ಕೋಟಿ ಗಳಿಸಿಬಿಡುತ್ತವೆ, ಒಳ್ಳೆಯ ಸಿನಿಮಾ ಮಾಡಿಬಿಟ್ಟರಂತೂ ಮುಗಿಯಿತು ಕತೆ.

ಹಿಂದಿಯ ಹಲವು ಸಿನಿಮಾಗಳು ಕೈಲಿಟ್ಟುಕೊಂಡಿರುವ ಸಲ್ಮಾನ್ ಖಾನ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿ ನಿಂತಿರುವ ಸಂದರ್ಭದಲ್ಲಿಯೇ ಸಲ್ಮಾನ್ ಖಾನ್ ದಕ್ಷಿಣ ಭಾರತ ಸಿನಿಮಾಗಳತ್ತ ಬಂದಿದ್ದಾರೆ.

ದಕ್ಷಿಣ ಭಾರತದ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಎರಡೂ ಚಿತ್ರರಂಗದಲ್ಲಿ ಇಬ್ಬರು ದೊಡ್ಡ ಸ್ಟಾರ್ ನಟರ ಜೊತೆಗೆ ಸಲ್ಮಾನ್ ಖಾನ್ ತೆರೆ ಹಂಚಿಕೊಳ್ಳಲಿದ್ದಾರೆ.

ಸಲ್ಮಾನ್ ಖಾನ್ ತೆಲುಗಿನ ಸೂಪರ್ ಸ್ಟಾರ್ ನಟ ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳುವುದು ಬಹುತೇಕ ಖಾಯಂ ಆಗಿದೆ. ಚಿರಂಜೀವಿ ಅವರ ಮುಂದಿನ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೆಲವು ಮುಖ್ಯ ದೃಶ್ಯಗಳಲ್ಲಿ ನಟಿಸುವುದು ಮಾತ್ರವೇ ಅಲ್ಲದೆ ಎರಡು ಫೈಟ್ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್‌ಗಾಗಿ ಅದ್ಧೂರಿ ಎಂಟ್ರಿ ಮತ್ತು ಫೈಟ್ ದೃಶ್ಯಗಳನ್ನು ಸಂಯೋಜಿಸಲು ಚಿತ್ರತಂಡ ಈಗಾಗಲೇ ಯೋಜನೆ ಆರಂಭಿಸಿದೆ.

ಪೃಥ್ವಿರಾಜ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್

ಪೃಥ್ವಿರಾಜ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್

ಚಿರಂಜೀವಿ 153ನೇ ಸಿನಿಮಾದಲ್ಲಿ ಸಲ್ಮಾನ್ ನಟಿಸಲಿದ್ದು ಈ ಸಿನಿಮಾವು ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಲೂಸಿಫರ್'ನ ರಿಮೇಕ್ ಆಗಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದ ಪಾತ್ರದಲ್ಲಿ ತೆಲುಗಿನಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಚಿರಂಜೀವಿಯ ಬಲಗೈ ಭಂಟನ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಸಲ್ಮಾನ್ ಖಾನ್‌ಗೆ ಒಳ್ಳೆಯ ಬಿಲ್ಡಪ್ ದೃಶ್ಯಗಳು ಸಿನಿಮಾದಲ್ಲಿ ಇರಲಿವೆ. ಈ ಸಿನಿಮಾವನ್ನು ವಿವಿ ವಿನಾಯಕ್ ನಿರ್ದೇಶನ ಮಾಡುತ್ತಾರೆ ಎಂದಾಗಿತ್ತು ಆದರೆ ಕೊನೆಗೆ ತಮಿಳಿನ ಮೋಹನ್ ರಾಜ್ ಕೈಗೆ ಸಿನಿಮಾ ಹೋಗಿದೆ.

ಮೋಹನ್‌ಲಾಲ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ

ಮೋಹನ್‌ಲಾಲ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ

'ಲೂಸಿಫರ್' ಸಿನಿಮಾವು ರಾಜಕೀಯ, ಮಾಫಿಯಾ ಹಾಗೂ ಕುಟುಂಬ ಪ್ರೇಮದ ಕತೆಯಾಗಿದೆ. ಸಿನಿಮಾದಲ್ಲಿ ಮೋಹನ್‌ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ನಾಯಕಿ ಇಲ್ಲ. ಆದರೆ ನಾಯಕನ ತಂಗಿಯ ಪಾತ್ರ ಬಹಳ ಮುಖ್ಯದಾಗಿದ್ದು, ತೆಲುಗಿನಲ್ಲಿ ಈ ಪಾತ್ರಕ್ಕಾಗಿ ಮೊದಲಿಗೆ ಜೆನಿಲಿಯಾ ಅನ್ನು ಕೇಳಲಾಗಿತ್ತು ಆದರೆ ಅವರು ನಿರಾಕರಿಸಿದ ಕಾರಣ ಈ ಅವಕಾಶ ಮತ್ತೊಬ್ಬ ಸ್ಟಾರ್ ನಟಿಗೆ ಹೋಗಿದೆ ಎನ್ನಲಾಗುತ್ತಿದೆ. ಸ್ವತಃ ರಾಜಕಾರಣಿಯಾಗಿರುವ ಚಿರಂಜೀವಿಗೆ ಈ ಸಿನಿಮಾದ ಕತೆಯು ಹೇಳಿ ಮಾಡಿಸಿದ್ದಾಗಿದ್ದು, ಸಿನಿಮಾವನ್ನು ಚಿರಂಜೀವಿ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ತಮಿಳಿನ ಸಿನಿಮಾದಲ್ಲೂ ಸಲ್ಮಾನ್ ಅತಿಥಿ ಪಾತ್ರ

ತಮಿಳಿನ ಸಿನಿಮಾದಲ್ಲೂ ಸಲ್ಮಾನ್ ಅತಿಥಿ ಪಾತ್ರ

ತೆಲುಗು ಹೊರತಾಗಿ ತಮಿಳಿನ ಒಂದು ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಅದುವೇ ನಟ ವಿಜಯ್‌ ಅಭಿನಯದ 'ಬೀಸ್ಟ್' ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಸಲ್ಮಾನ್ ಖಾನ್‌ರ ಮುಂದಿನ ಸಿನಿಮಾದಲ್ಲಿ ವಿಜಯ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.

ಸಲ್ಮಾನ್ ಖಾನ್‌ ಕೈಯಲ್ಲಿವೆ ಹಲವು ಸಿನಿಮಾಗಳು

ಸಲ್ಮಾನ್ ಖಾನ್‌ ಕೈಯಲ್ಲಿವೆ ಹಲವು ಸಿನಿಮಾಗಳು

ಚಿರಂಜೀವಿ ಪ್ರಸ್ತುತ 'ಆಚಾರ್ಯ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಎರಡು ಹಾಡಿನ ಚಿತ್ರೀಕರಣ ಬಾಕಿ ಇದೆ. ಇನ್ನು ಸಲ್ಮಾನ್ ಖಾನ್ 'ಅಂತಿಮ್' ಹೆಸರಿನ ಸಿನಿಮಾದ ಚಿತ್ರೀಕರಣ ಮುಗಿಸಿ, 'ಟೈಗರ್ 3' ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಇದರ ಬಳಿಕ, 'ಕಭಿ ಈದ್ ಕಭಿ ದಿವಾಲಿ', 'ಬುಲ್‌ಬುಲ್ ಮ್ಯಾರೇಜ್ ಹಾಲ್', 'ಕಿಕ್ 2', 'ವಾಂಟೆಡ್ 2', 'ರಘು ರಾಜಾ ರಾಮ್', 'ನೋ ಎಂಟ್ರಿ 2', 'ಇನ್‌ಶಾ ಅಲ್ಲಾ', 'ಡ್ಯಾನ್ಸಿಂಗ್ ಡ್ಯಾಡ್', 'ಭಜರಂಗಿ ಭಾಯಿಜಾನ್ 2', 'ದಬಂಗ್ 4', 'ಢಾಕ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bollywood actor Salman Khan will act along with megastar Chiranjeevi in Telugu movie which is remake of Malayalam movie Lucifer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X