For Quick Alerts
  ALLOW NOTIFICATIONS  
  For Daily Alerts

  ಸುದೀರ್ಘ ನಿದ್ದೆಯಿಂದ ಎದ್ದು ಪ್ರೀತಿಯ ನಾಯಿ ಜೊತೆ ನಟಿ ಸಮಂತಾ ಪ್ರತ್ಯಕ್ಷ

  |

  ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ 'ಜಾನು' ಸಿನಿಮಾದ ನಂತರ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅದರಲ್ಲೂ ಕಳೆದ ಒಂದು ತಿಂಗಳಿಂದ ಸಾಮಾಜಿಕ ಜಾಲತಾಣದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಕೊರೊನಾ ಲಾಕ್ ಡೌನ್ ನಂತರ ಸಮಂತಾ ಎಲ್ಲೋಗಿದ್ದಾರೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿತ್ತು.

  'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ | Rashmika Mandanna | FILMIBEAT KANNADA

  ಆದ್ರೀಗ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳ ಮುಂದೆ ಸಮಂತಾ ಪ್ರತ್ಯಕ್ಷರಾಗಿದ್ದಾರೆ. ಕಳೆದ ಮಾರ್ಚ್ 28ರ ನಂತರ ಸಾಮಾಜಿಕ ಜಾಲತಾಣ ಬಳಸಿರಲಿಲ್ಲ. ಮಾರ್ಚ್ 28ರ ವರೆಗೂ ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗಿದ್ದ ಸಮಂತಾ ಆ ನಂತರ ಎಲ್ಲೋಗಿದ್ರು, ಏನ್ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು.

  ಆದರೀಗ ಸಮಂತಾ ಪ್ರೀತಿಯ ನಾಯಿ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಿಯನ್ನು ಬಿಗಿದಪ್ಪಿಕೊಂಡಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗಿದ್ದಾರೆ. ಪೋಟೋದಲ್ಲಿ ಸಮಂತಾ ಮುಖ ಕಾಣದಿದ್ದರು, ಇದು ಸಮಂತಾ ಅವರೇ ಎಂದು ಗೊತ್ತಾಗುತ್ತಿದೆ. ಫೋಟೋ ಜೊತೆಗೆ ಸಮಂತಾ ಕ್ಯಾಪ್ಷನ್ ಕೂಡ ಹಾಕಿದ್ದಾರೆ.

  "ಸುದೀರ್ಘ ನಿದ್ದೆಯ ನಂತರ ವಾಪಸ್ ಆಗಿದ್ದೀನಿ. ಮನೆಯಲ್ಲಿ ಇರಿ, ಸುರಕ್ಷಿತವಾಗಿರಿ" ಎಂದು ಬರೆದುಕೊಂಡಿದ್ದಾರೆ.

  ನಟಿ ಸಮಂತಾ ಸದ್ಯ ವಿಘ್ನೇಶ್ ಶಿವನ್ ನಿರ್ದೇಶನದ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಸಮಂತಾ ಕನ್ನಡದ ಹಿಟ್ ದಿಯಾ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದೇನೆ ಇರ್ಲಿ ಸದ್ಯ ಸಮಂತಾ ದರ್ಶನ ನೀಡಿರುವುದು ಅಭಿಮಾನಿಗಳಿಗೆ ಸಂತಸ ವಾಗಿದೆ.

  English summary
  Tollywood Actress Samantha Akkineni Back on Social media after one month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X