For Quick Alerts
  ALLOW NOTIFICATIONS  
  For Daily Alerts

  ಕೀರ್ತಿ ಸುರೇಶ್ ಹುಟ್ಟುಹಬ್ಬಕ್ಕೆ ಸಮಂತಾ ಅಕ್ಕಿನೇನಿಯ ಪ್ರೀತಿಯ ವಿಶ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಇತ್ತೀಚಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟಿ ಕೀರ್ತಿ ಸುರೇಶ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಹ ವಿಶ್ ಮಾಡಿ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

  ಮಹೇಶ್ ಬಾಬು, ನಿತಿನ್, ಸಮಂತಾ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಕೀರ್ತಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ನಟಿ ಸಮಂತಾ ಅಕ್ಕಿನೇನಿ ಗೆಳತಿ ಕೀರ್ತಿ ಸುರೇಶ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿರುವ ಸಮಂತಾ, ಕೀರ್ತಿ ಸುರೇಶ್ ಫೋಟೋ ಶೇರ್ ಮಾಡಿ ಹೃದಯ ಪೂರ್ವಕ ಸಂದೇಶ ರವಾನಿಸಿದ್ದಾರೆ. ಮುದೆ ಓದಿ...

  ಡ್ರಗ್ಸ್ ಪ್ರಕರಣ: ರಕುಲ್ ಮತ್ತು ಸಾರಾ ಅಲಿ ಖಾನ್ ಪರ ನಿಂತ ನಟಿ ಸಮಂತಾ

  ಕೀರ್ತಿ ಹುಟ್ಟುಹಬ್ಬಕ್ಕೆ ಸಮಂತಾ ಪ್ರೀತಿಯ ಸಂದೇಶ

  ಕೀರ್ತಿ ಹುಟ್ಟುಹಬ್ಬಕ್ಕೆ ಸಮಂತಾ ಪ್ರೀತಿಯ ಸಂದೇಶ

  " ಜನ್ಮ ದಿನದ ಶುಭಾಶಯಗಳು ಪ್ರೀತಿಯ ಕೀರ್ತಿ ಸುರೇಶ್. ನಿಮಗೆ ಸಂತೋಷ, ಯಶಸ್ಸು ಸಿಗಲಿ ಮತ್ತು ಹೆಚ್ಚು ಪ್ರೀತಿಯನ್ನು ಬಯಸುತ್ತೇನೆ. ಉತ್ತಮ ಹೃದಯ ಹೊಂದಿರುವ ವ್ಯಕ್ತಿ ನೀವು. ದೇವರು ಒಳ್ಳೆದು ಮಾಡಲಿ." ಎಂದು ಪ್ರೀತಿಯ ಗೆಳತಿಗೆ ವಿಶ್ ಮಾಡಿದ್ದಾರೆ. ಸಮಂತಾ ವಿಶ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಸಂತಸ ಪಡುತ್ತಿದ್ದಾರೆ.

  ಒಂದೇ ಸಿನಿಮಾದಲ್ಲಿ ಅಭಿನಯ

  ಒಂದೇ ಸಿನಿಮಾದಲ್ಲಿ ಅಭಿನಯ

  ಅಂದ್ಹಾಗೆ ಕೀರ್ತಿ ಸುರೇಶ್ ಮತ್ತು ಸಮಂತಾ ಅಕ್ಕಿನೇನಿ ಇಬ್ಬರು ಮಹಾನಟಿ ಸಿನಿಮಾದಲ್ಲಿ ನಟಿಸಿದ್ದಾರೆ. ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ ಇಬ್ಬರು ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸಿನಿಮಾನಂತರವೂ ಇಬ್ಬರ ಸ್ನೇಹ ಹಾಗೆ ಮುಂದುವರೆದಿದೆ.

  'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್: ಅನುಷ್ಕಾ ಬದಲು ಸಮಂತಾ ನಟನೆ

  ಮಹೇಶ್ ಬಾಬು ಸಿನಿಮಾದಲ್ಲಿ ಕೀರ್ತಿ ಸುರೇಶ್

  ಮಹೇಶ್ ಬಾಬು ಸಿನಿಮಾದಲ್ಲಿ ಕೀರ್ತಿ ಸುರೇಶ್

  ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್ ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೀರ್ತಿ ಹುಟ್ಟುಹಬ್ಬಕ್ಕೆ ನಟ ಮಹೇಶ್ ಬಾಬು ವಿಶ್ ಮಾಡುವ ಮೂಲಕ ಟ್ಯಾಲೆಂಟೆಡ್ ನಟಿಯನ್ನು ಸಿನಿಮಾಗೆ ಸ್ವಾಗತ ಮಾಡಿದ್ದಾರೆ. ಈ ಮೂಲಕ ಕೀರ್ತಿ ಸುರೇಶ್ ನಾಯಕಿ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada
  ಕೀರ್ತಿ ಬಳಿ ಇರುವ ಸಿನಿಮಾಗಳು

  ಕೀರ್ತಿ ಬಳಿ ಇರುವ ಸಿನಿಮಾಗಳು

  ಕೀರ್ತಿ ಸುರೇಶ್ ಬಳಿ ಕೈತುಂಬ ಸಿನಿಮಾಗಳಿವೆ. ಮಿಸ್ ಇಂಡಿಯಾ, ಗುಡ್ ಲಕ್ ಸಖಿ, ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆ ಅಣ್ಣಾತೆ, ರಂಗ್ ದೇ ಸೇರಿದಂತೆ ಅನೇಕ ಚಿತ್ರಗಳಿವೆ. ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿವೆ. ಇತ್ತೀಚಿಗೆ ಕೀರ್ತಿ ಅಭಿನಯದ ಪೆಂಗ್ವಿನ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.

  English summary
  Samantha Akkineni birthday wishes to Mahanati fame actress Keerthy Suresh. She pens heartfelt note on keerthy birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X