For Quick Alerts
  ALLOW NOTIFICATIONS  
  For Daily Alerts

  ಸಮಂತಾ 'ಸ್ಯಾಮ್ ಜಾಮ್' ಶೋ ನಿರೂಪಣೆಗೆ ಪಡೆದ ಸಂಭಾವನೆ ಇಷ್ಟೊಂದಾ?

  |

  ಸಮಂತಾ ಅಕ್ಕಿನೇನಿ, ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು. ಅಕ್ಕಿನೇನಿ ಕುಟುಂಬದ ಸೊಸೆ ಸದ್ಯ ಸಿನಿಮಾ ಜೊತೆಗೆ ಒಂದು ಟಾಕ್ ಶೋ ಸಹ ನಡೆಸಿಕೊಡುತ್ತಿದ್ದಾರೆ. ಸ್ಯಾಮ್ ಜಾಮ್ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಈ ಟಾಕ್ ಶೋ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಮದುವೆ ಬಳಿಕವೂ ಕೋಟಿ ಸಂಭಾವನೆ ಪಡೆಯುತ್ತಾ ಸಿನಿಮಾಗಳಲ್ಲಿ ಬ್ಯುಸಿ ಇರುವ ಸಮಂತಾ ಟಾಕ್ ಶೋ ನಡೆಸಿಕೊಡಲು ಭರ್ಜರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೌದು, ಸಮಂತಾ ಪಡೆದುಕೊಂಡಿರುವ ಸಂಭಾವನೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಸ್ಯಾಮ್ ಜಾಮ್ ಶೋನ 8 ಎಪಿಸೋಡ್ ಗಳನ್ನು ನಡೆಸಿಕೊಡಲು ಸಮಂತಾ ಬರೋಬ್ಬರಿ ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.

  ಆ ನಟನಿಗೆ ಮುತ್ತು ಕೊಡಬೇಕೆಂದು ಆಸೆಯಂತೆ ನಟಿ ತಮನ್ನಾಗೆ

  ಅಲ್ಲು ಅರವಿಂದ್ ಒಡೆತನದ 'ಆಹಾ' ಒಟಿಟಿ ಫ್ಲಾಟ್ ಫಾರ್ಮ್ ಗಾಗಿ ಸಮಂತಾ ಸ್ಯಾಮ್ ಜಾಮ್ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋ ನಡೆಸಿಕೊಡಲು ಸಮಂತಾ ಬರೋಬ್ಬರಿ 1 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಈಗಾಗಲೇ ಸಮಂತಾ ಈ ಟಾಕ್ ಶೋನಲ್ಲಿ ಮೆಗಾ ಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ರಾಕುಲ್ ಪ್ರೀತ್ ಸಿಂಗ್ ಹಾಗೂ ತಮನ್ನಾ ಸೇರಿದಂತೆ ಅನೇಕರು ಈಗಾಗಲೇ ಸಮಂತಾ ನಡೆಸಿಕೊಡುತ್ತಿರುವ ಸ್ಯಾಮ್ ಜಾಮ್ ಶೋನಲ್ಲಿ ಭಾಗಿಯಾಗಿದ್ದಾರೆ.

  ಇತ್ತೀಚಿಗೆ ಸಮಂತಾ ಬಿಗ್ ಬಾಸ್ ರಿಯಾಲಿಟಿ ಶೋ ಹೋಸ್ಟ್ ಮಾಡಿ ಸದ್ದು ಮಾಡಿದ್ದರು. ಮೊದಲ ಬಾರಿಗೆ ಸಮಂತಾ ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದರು. ಒಂದು ದಿನ ಶೋ ಹೋಸ್ಟ್ ಮಾಡಲು ಸಮಂತಾ ಭರ್ಜರಿ ಮೊತ್ತದ ಸಂಭಾವನೆ ಪಡೆದಿದ್ದರು ಎನ್ನುವ ಸುದ್ದಿ ಕೇಳಿಬಂದಿತ್ತು.

  ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾಗೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.

  English summary
  Actress Samantha Akkineni charges 1 crore for host Jam Jam talk show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X