'ನಾಗ ಚೈತನ್ಯಗೆ ವಿಚ್ಛೇದನ ನೀಡಿ, ನನ್ನನ್ನು ಮದುವೆಯಾಗಿ' ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

By ಫಿಲ್ಮ್ ಡೆಸ್ಕ್

ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಪ್ರತಿ ದಿನ ಒಂದಲ್ಲೊಂದು ಪೋಸ್ಟ್ ಗಳನ್ನು ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟಿ ಸಮಂತಾ ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

ಸದ್ಯ ಫಿಟ್ ನೆಸ್ ಕಡೆ ಹೆಚ್ಚು ಗಮನ ವಹಿಸಿರುವ ಸಮಂತಾ ವರ್ಕೌಟ್ ಮಾಡುತ್ತಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗೆ ಸಮಂತಾ ಶೇರ್ ಮಾಡಿರುವ ಫೋಟೋಗೆ ಫಿದಾ ಆಗಿರುವ ನೆಟ್ಟಿಗನೊಬ್ಬ ನಾಗಚೈತನ್ಯಗೆ ವಿಚ್ಛೇದನ ನೀಡಿ, ತನ್ನನ್ನು ಮದುವೆ ಆಗುವಂತೆ ಕೇಳಿಕೊಂಡಿದ್ದಾರೆ. ಮುಂದೆ ಓದಿ..

ನಾಗಚೈತನ್ಯಗೆ ವಿಚ್ಛೇದನ ನೀಡಿ ಎಂದ ಅಭಿಮಾನಿ

ನಾಗಚೈತನ್ಯಗೆ ವಿಚ್ಛೇದನ ನೀಡಿ ಎಂದ ಅಭಿಮಾನಿ

ಸಮಂತಾ 'ಫೀಲಿಂಗ್ ಗುಡ್' ಎಂದು ಕ್ಯಾಪ್ಷನ್ ನೀಡಿ ಫೋಟೋ ಶೇರ್ ಮಾಡಿದ್ದರು. ಈ ಫೋಟೋಗೆ ಕಾಮೆಂಟ್ ಮಾಡಿರುವ ಅಭಿಮಾನಿ, 'ನೀವು ನಾಗಚೈತನ್ಯಗೆ ವಿಚ್ಛೇದನ ನೀಡಿ, ಆಗ ನಾನು ನಿಮ್ಮನ್ನು ಮದುವೆ ಆಗಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಸಮಂತಾ ಅಚ್ಚರಿ ಪಟ್ಟಿದ್ದಾರೆ. ಕಾಮೆಂಟ್ ನೋಡಿ ಸುಮ್ಮನಾದ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.

ಸಮಂತಾ ಪ್ರತಿಕ್ರಿಯೆ ಹೀಗಿದೆ

ಸಮಂತಾ ಪ್ರತಿಕ್ರಿಯೆ ಹೀಗಿದೆ

ಅಭಿಮಾನಿಯ ಪ್ರಶ್ನೆಗೆ ಸಿಟ್ಟಾಗದೆ, ಕಿರಿಕಿರಿ ಮಾಡಿಕೊಳ್ಳದೆ ತಮಾಷೆಯ ಉತ್ತರ ನೀಡಿದ್ದಾರೆ. ಇದು ಕಷ್ಟ, ನನ್ನನ್ನು ಕೇಳುವ ಬದಲು ಮೊದಲು ನಾಗಚೈತನ್ಯನನ್ನು ಕೇಳಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಪ್ರತಿಕ್ರಿಯೆ ಅಭಿಮಾನಿಗಳಿಗೆ ಮೆಚ್ಚುಗೆ ವ್ಯಕ್ತವಡಿಸುತ್ತಿದ್ದಾರೆ.

ಸಮಂತಾ ಜಾಣತನದ ಉತ್ತರಕ್ಕೆ ಅಭಿಮಾನಿಗಳ ಮೆಚ್ಚುಗೆ

ಸಮಂತಾ ಜಾಣತನದ ಉತ್ತರಕ್ಕೆ ಅಭಿಮಾನಿಗಳ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ನಟಿಮಣಿಯರಿಗೆ ಇಂತಹ ಪ್ರಶ್ನೆಗಳು ಎದುರಾಗುವುದು ಸಹಜ ಆದರೆ ಅದನ್ನು ಹೇಗೆ ನಿಭಾಯಿಸಬೇಕು, ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎನ್ನುವುದು ನಟಿಯರಿಗೆ ತಿಳಿದಿರಬೇಕು. ಸಮಂತಾ ಇಲ್ಲಿ ಜಾಣತನದ ಉತ್ತರ ನೀಡಿ ಮೆಚ್ಚುಗೆ ಗಳಿಸಿದ್ದಾರೆ.

Recommended Video

ಆತ್ಮೀಯ ಗೆಳೆಯನಿಗೆ ವಿಶ್ ಮಾಡಿದ D Boss | Filmibeat Kannada
ಸಮಂತಾ ಬಳಿ ಇರುವ ಸಿನಿಮಾಗಳು

ಸಮಂತಾ ಬಳಿ ಇರುವ ಸಿನಿಮಾಗಳು

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ತೆಲುಗಿನ ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಎನ್ನುವ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಲಾಕ್ ಡೌನ್ ಬಳಿಕ ಸಮಂತಾ ಇನ್ನೂ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಇತ್ತೀಚಿಗಷ್ಟೆ ಸಮಂತಾ ಬಿಗ್ ಬಾಸ್ ಶೋ ನಿರೂಪಣೆ ಮಾಡಿ ಅಚ್ಚರಿ ಮೂಡಿಸಿದ್ದರು.

More from Filmibeat

English summary
Telugu Actress Samantha Akkineni funny reply to who ask her to Divorce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X