For Quick Alerts
  ALLOW NOTIFICATIONS  
  For Daily Alerts

  ಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ ತೆಲುಗು ನಟಿ ಸಮಂತಾ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಯರಲ್ಲಿ ಸಮಂತಾ ಅಕ್ಕಿನೇನೆ ಕೂಡ ಒಬ್ಬರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಮಂತಾ ದಕ್ಷಿಣ ಭಾರತದಲ್ಲಿ ದೊಡ್ಡ ಅಬಿಮಾನಿ ಬಳಗ ಹೊಂದಿದ್ದಾರೆ. 10 ವರ್ಷಗಳಿಂದ ಚಿತ್ರರಂಗ ಆಳಿರುವ ನಟಿ ಸಮಂತಾಗೆ ಈಗ ಪ್ಲಾಪ್ ನಟಿ ಎಂದು ಟೀಕಿಸುತ್ತಿದ್ದಾರೆ. ಫ್ಲಾಪ್ ನಟಿ ಎಂದವರಿಗೆ ಸಮಂತಾ ಖಡಕ್ ಉತ್ತರ ನೀಡಿದ್ದಾರೆ.

  ಇತ್ತೀಚಿಗೆ ಜಾನು ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ತಮಿಳಿನ ಸೂಪರ್ ಹಿಟ್ 96 ಸಿನಿಮಾದ ರಿಮೇಕ್. ಜಾನು ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಹೀಗಾಗಿ ಕೆಲವರು ಸಮಂತಾ ಅವರನ್ನು ಫ್ಲಾಪ್ ನಟಿ ಎಂದು ಹೇಳುತ್ತಿದ್ದಾರೆ. ಫ್ಲಾಪ್ ಎಂದವರ ವಿರುದ್ಧ ಸಿಟ್ಟಿಗೆದ್ದ ಸಮಂತಾ ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?

  ಹೀರೋಗಳು ಫ್ಲಾಪ್ ಆದರೆ ನೋಡುತ್ತೀರಾ

  ಹೀರೋಗಳು ಫ್ಲಾಪ್ ಆದರೆ ನೋಡುತ್ತೀರಾ

  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸಮಂತಾ ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಸಿನಿಮಾದಲ್ಲಿ ಸ್ಟಾರ್ ನಟರು ಸಿನಿಮಾದಲ್ಲಿ ಗಮನಾರ್ಹವಾಗಿ ಏನು ಮಾಡದಿದ್ದರು, ಸೂಪರ್ ಎಂದು ಎನ್ನುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಪ್ರಶಂಸೆ ಮಾಡಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ದೋಷಿಸುತ್ತಾರೆ" ಎಂದು ಹೇಳಿದ್ದಾರೆ.

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾ

  ನಟರ ಸಿನಿಮಾ ಫ್ಲಾಪ್ ಆದರು ನೋಡುತ್ತೀರಿ

  ನಟರ ಸಿನಿಮಾ ಫ್ಲಾಪ್ ಆದರು ನೋಡುತ್ತೀರಿ

  ನೆಚ್ಚಿನ ಸ್ಟಾರ್ ನಟರ ಮೂರು ಸಿನಿಮಾಗಳು ಫ್ಲಾಪ್ ಆದರೂ ನಾಲ್ಕನೆ ಸಿನಿಮಾ ನೋಡಲು ಹೋಗುತೀರಿ. ಜೈ ಎನ್ನುತ್ತೀರಿ. ಆದರೆ ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ನಟಿ ಎಂದು ಕರೆಯುತ್ತಾರೆ. ನಟಿಯರಿಗೆ ಯಾಕೆ ಹೀಗೆ ಹೇಳುತ್ತೀರಿ ಎಂದು ಸಮಂತಾ ಕಿಡಿಕಾರಿದ್ದಾರೆ.

  ಸೋತ 'ಜಾನು' ಸಿನಿಮಾ

  ಸೋತ 'ಜಾನು' ಸಿನಿಮಾ

  ಸಮಂತಾ ಇತ್ತೀಚಿಗೆ ‘ಜಾನು' ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ಸಮಂತಾಗೆ ನಾಯಕನಾಗಿ ಶರ್ವಾನಂದ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಸಿನಿಮಾ ಟಾಲಿವುಡ್ ಅಂಗಳದಲ್ಲಿ ನಿರೀಕ್ಷಿತ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಆದರಿಂದ ಕೆಲವರು ಸಮಂತಾರಿಂದಲೇ ಸಿನಿಮಾ ಫ್ಲಾಪ್ ಆಯ್ತು, ಅವರು ಫ್ಲಾಪ್ ನಟಿ ಎಂದು ಟೀಕಿಸಿದ್ದರು.

  ಆಕ್ಟಿಂಗ್ ಅಲ್ಲ, ರಿಯಾಲಿಟಿ ಶೋನೂ ಅಲ್ಲ...ಸಮಂತಾ ದಂಪತಿಯ ಹೊಸ ಪ್ಲಾನ್ಆಕ್ಟಿಂಗ್ ಅಲ್ಲ, ರಿಯಾಲಿಟಿ ಶೋನೂ ಅಲ್ಲ...ಸಮಂತಾ ದಂಪತಿಯ ಹೊಸ ಪ್ಲಾನ್

  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಬಳಿ ಸದ್ಯ ಎರಡು ಸಿನಿಮಾಗಳಿವೆ. ಒಂದು ತಮಿಳು ಸಿನಿಮಾ ಮತ್ತು ಮತ್ತೊಂದು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಲ ಜೊತೆಗೆ ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Telugu Actress Samantha Akkineni response to called as a flop Actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X