ಮಹಿಳಾ ಆಟೋ ಡ್ರೈವರ್‌ಗೆ ಕಾರು ಉಡುಗೊರೆ ನೀಡಿದ ಸಮಂತಾ
ನಟಿ ಸಮಂತಾ ಅಕ್ಕಿನೇನಿ ಸಿನಿಮಾದ ಜೊತೆ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಸಮಂತಾ ತಮ್ಮದೇ ಎನ್‌ಜಿಓ ನಡೆಸುತ್ತಿದ್ದಾರೆ. ತೀರಾ ಕಷ್ಟದಲ್ಲಿರುವ ಮಹಿಳೆಯವರು, ಮಕ್ಕಳಿಗೆ ಎನ್‌ಜಿಓ ಮೂಲಕ ಸಹಾಯ ಮಾಡ್ತಾರೆ.
ಇದೀಗ, ಮಹಿಳಾ ಆಟೋ ಡ್ರೈವರ್ ಒಬ್ಬರಿಗೆ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಆಟೋ ಚಾಲನೆ ಮಾಡುವ ಮೂಲಕ ತನ್ನ ಇಡೀ ಕುಟುಂಬವನ್ನು ಪೋಷಿಸುತ್ತಿರುವ ಮಹಿಳೆಗೆ ನೆರವಾಗಲಿ ಎಂಬ ಕಾರಣಕ್ಕೆ 12.5 ಲಕ್ಷ ಬೆಲೆ ಬಾಳುವ ಕಾರು ನೀಡಿದ್ದಾರೆ.
ಕವಿತಾ ಎಂಬ ಆಟೋ ಡ್ರೈವರ್ ತನ್ನ ಏಳು ಸಹೋದರಿಯರನ್ನು ಹಾಗೂ ಕುಟುಂಬವನ್ನು ಪೋಷಿಸುವ ಉದ್ದೇಶದಿಂದ ರಾತ್ರಿ-ಹಗಲು ಆಟೋ ಚಾಲನೆ ಮಾಡುತ್ತಿದ್ದಾರೆ. ಕವಿತಾ ಅವರ ಮೇಲೆ ಕೌಟುಂಬಿಕ ದೌರ್ಜನ್ಯ ಸಹ ನಡೆದಿದೆ. ಕವಿತಾ ಅವರ ಕಷ್ಟದ ಬಗ್ಗೆ ತಿಳಿದುಕೊಂಡಿದ್ದ ಸಮಂತಾ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.

ಈ ಮೊದಲೇ ನೀಡಿದ ಭರವಸೆಯಂತೆ ಕವಿತಾ ಅವರು ಸ್ವಂತ ಕ್ಯಾಬ್ ಚಾಲನೆ ಮಾಡಲಿ, ಅದರಿಂದ ಅಗತ್ಯ ಹಣ ಸಂಪಾದನೆ ಮಾಡಬಹುದು ಎಂಬ ಕಾರಣದಿಂದ ಕಾರು ಗಿಫ್ಟ್ ಮಾಡಿದ್ದಾರೆ ಸಮಂತಾ.
ಇನ್ನು ಸಮಂತಾ ಅವರ ಸಿನಿಮಾ ವಿಚಾರಕ್ಕೆ ಬಂದ್ರೆ ವಿಜಯ್ ಸೇತುಪತಿ, ನಯನತಾರ ಜೊತೆ ನಟಿಸುತ್ತಿರುವ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಶಕುಂತಲಾ' ಎಂಬ ಚಿತ್ರದಲ್ಲೂ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











