ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತಮನ್ನಾ; ಗೆಳತಿಗೆ ಸಮಂತಾ-ಕಾಜಲ್ ವಿಶ್ ಮಾಡಿದ್ದು ಹೀಗೆ

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತಮನ್ನಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 31ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ತಮನ್ನಾ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿ ಕೇಕ್ ಕತ್ತರಿಸಿ ಜನ್ಮ ದಿನ ಆಚರಣೆ ಮಾಡಿಕೊಂಡಿರುವ ತಮನ್ನಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಸ್ನೇಹಿತರು, ಚಿತ್ರದ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ.

ತೆಲುಗು ಸಿನಿಮಾರಂಗದ ಖ್ಯಾತ ನಟಿಯರಾದ ಕಾಜಲ್ ಮತ್ತು ಸಮಂತಾ ಸೇರಿದಂತೆ ಅನೇಕ ನಟಿಮಣಿರು ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ತಮನ್ನಾ ತೆಲುಗು ಸಿನಿಮಾರಂಗದ ಖ್ಯಾತ ನಟಿಯರ ಜೊತೆ ಉತ್ತಮ ಸ್ನೇಹ ಬಾಂಧವ್ಯವಿಟ್ಟುಕೊಂಡಿದ್ದಾರೆ. ನಟಿಮಣಿಯರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಪೈಪೋಟಿ, ಜಿದ್ದು ಎದ್ದು ಕಾಣುತ್ತಿರುತ್ತೆ. ಆದರೆ ತಮನ್ನಾ ಸಹನಟಿಯರ ಜೊತೆ ಉತ್ತಮ ಸ್ನೇಹದಿಂದ ಇದ್ದಾರೆ.

ಕಾಜಲ್ ಅಗರ್ವಾಲ್ ವಿಶ್

ಕಾಜಲ್ ಅಗರ್ವಾಲ್ ವಿಶ್

ಇತ್ತೀಚಿಗಷ್ಟೆ ಹಸೆ ಮಣೆ ಏರಿರುವ ನಟಿ ಕಾಜಲ್ ಅಗರ್ವಾಲ್ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. 'ಪ್ರೀತಿಯ ತಮ್ಮಿ ಹುಟ್ಟುಹಬ್ಬದ ಶುಭಾಶಯಗಳು. ಅದ್ಭುತವಾದ ದಿನ ನಿನ್ನದಾಗಲಿ. ಇನ್ನೂ ಉತ್ತಮವಾದ ಎಲ್ಲದು ಸಿಗಲಿ ಎಂದು ಆಶೀರ್ವಾದಿಸುತ್ತೇನೆ' ಎಂದು ಹೇಳಿದ್ದಾರೆ. ಕಾಜಲ್ ವಿಶ್ ಗೆ ಪ್ರತಿಕ್ರಿಯೆ ನೀಡಿರುವ ತಮನ್ನಾ ಧನ್ಯವಾದಗಳು ಕಾಜು ಎಂದು ಹೇಳಿದ್ದಾರೆ.

ತಮನ್ನಾಗೆ ಶುಭಾಶಯ ತಿಳಿಸಿದ ಶ್ರುತಿ ಹಾಸನ್

ತಮನ್ನಾಗೆ ಶುಭಾಶಯ ತಿಳಿಸಿದ ಶ್ರುತಿ ಹಾಸನ್

ಇನ್ನೂ ನಟಿ ಶ್ರುತಿ ಹಾಸನ್ ಸಹ ಗೆಳತಿ ತಮನ್ನಾಗೆ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ. ತಮನ್ನಾ ಕಾಮನ್ ಡಿಪಿ ರಿಲೀಸ್ ಮಾಡಿ, 'ಈ ಡಿಪಿ ರಿಲೀಸ್ ಮಾಡಲು ತುಂಬಾ ಸಂತೋಷವಾಗುತ್ತಿದೆ. ಹುಟ್ಟುಹಬ್ಬದ ಶುಭಾಶಯಗಳು ಸ್ವೀಟ್ ಹಾರ್ಟ್' ಎಂದು ವಿಶ್ ಮಾಡಿದ್ದಾರೆ.

ಗೆಳತಿಗೆ ಸಮಂತಾ ವಿಶ್

ಗೆಳತಿಗೆ ಸಮಂತಾ ವಿಶ್

ನನ್ನ ಪ್ರೀತಿಯ ಗೆಳತಿ ತಮನ್ನಾ ಅವರ ಕಾಮನ್ ಡಿಪಿ ರಿಲೀಸ್ ಮಾಡಲು ಹೆಮ್ಮೆಯಾಗುತ್ತೆ. ಹುಟ್ಟುಹಬ್ಬದ ಶುಭಾಶಯಗಳು. ಉತ್ತಮವಾದ ವರ್ಷ ನಿನ್ನದಾಗಲಿ. ಮುಂದಿನ ವರ್ಷ ರಿಲೀಸ್ ಆಗುವ ಎಲ್ಲಾ ಸಿನಿಮಾಗಳನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

Recommended Video

S Narayan ಗೆ ಗೌರವ ಡಾಕ್ಟರೇಟ್ | Filmibeat Kannada
ತಮನ್ನಾ ಬಳಿ ಇರುವ ಸಿನಿಮಾಗಳು

ತಮನ್ನಾ ಬಳಿ ಇರುವ ಸಿನಿಮಾಗಳು

ತಮನ್ನಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಏಳೆಂಟು ಸಿನಿಮಾಗಳಲ್ಲಿ ಬ್ಯುಸಿ ಇರುವ ತಮನ್ನಾ ಕನ್ನಡದ ಸೂಪರ್ ಹಿಟ್ ಲವ್ ಮಾಕ್ ಟೇಲ್ ಸಿನಿಮಾದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಹಿಂದಿಯ ಸೂಪರ್ ಹಿಟ್ ಅಂಧಾಧುನ್ ಸಿನಿಮಾದ ರಿಮೇಕ್ ನಲ್ಲೂ ನಟಿಸುತ್ತಿದ್ದಾರೆ. ಸದ್ಯ ಲವ್ ಮಾಕ್ ಟೇಲ್ ರಿಮೇಕ್ ಮತ್ತು ಸೀತಿಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Tamannaah Birthday; Samantha Akkineni, Kajal Aggarwal and other stars birthday wish to Actress Tamannaah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X