For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ ಜೊತೆ ಓಡಿಹೋದ ನಟ ನಾಗ ಚೈತನ್ಯ: ಸಮಂತಾ ಪ್ರತಿಕ್ರಿಯೆ ಹೀಗಿದೆ

  |

  ನಟಿ ಸಾಯಿ ಪಲ್ಲವಿ ಜೊತೆ ಓಡಿಹೋದ ಟಾಲಿವುಡ್ ಖ್ಯಾತ ನಟ ನಾಗ ಚೈತನ್ಯ ಎನ್ನುವ ಸುದ್ದಿ ಅಚ್ಚರಿ ಮೂಡಿಸಿದರೂ ಇದು ನಿಜ. ಆದರೆ ಇದು ಸಿನಿಮಾದಲ್ಲಿ. ಹೌದು, ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟನೆಯ ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

  ಟೀಸರ್ ನಲ್ಲಿ ನಾಗ ಚೈತನ್ಯ ಜೊತೆ ಸಾಯಿ ಪಲ್ಲವಿ ಪರಾರಿಯಾಗುವ ದೃಶ್ಯ ವೈರಲ್ ಆಗಿದೆ. ಲವ್ ಸ್ಟೋರಿ ಸಿನಿಮಾದ ಟೀಸರ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದ್ದು, ಚಿತ್ರಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಲವ್ ಸ್ಟೋರಿ ನೋಡಿ ಚೈ ಪತ್ನಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.

  ಬರಿಗಾಲಲ್ಲಿ ಪ್ರಿಯಕರನ ಜೊತೆ ಸಾಯಿ ಪಲ್ಲವಿ ಪರಾರಿ: 'ಲವ್‌ಸ್ಟೋರಿ'ಬರಿಗಾಲಲ್ಲಿ ಪ್ರಿಯಕರನ ಜೊತೆ ಸಾಯಿ ಪಲ್ಲವಿ ಪರಾರಿ: 'ಲವ್‌ಸ್ಟೋರಿ'

  ಟೀಸರ್ ನೋಡಿ ಫಿದಾ ಆಗಿರುವ ಸಮಂತಾ ಪತಿಯ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಅನ್ನು ಶೇರ್ ಮಾಡಿ, 'ಈ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರು ಮಾಡಲು ಸಾಧ್ಯವಿಲ್ಲ. ಇನ್ನಷ್ಟು ಸಾಧನೆ ಮಾಡಿರಿ' ಎಂದು ಬರೆದುಕೊಂಡು ಲಿಂಕ್ ಶೇರ್ ಮಾಡಿದ್ದಾರೆ.

  ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ 'ಲವ್ ಸ್ಟೋರಿ' ಸಿನಿಮಾಗೆ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹಳಿದ್ದಾರೆ. ಸುಂದರ-ಸರಳ ಪ್ರೇಮಕತೆಯಾದ 'ಲವ್ ಸ್ಟೋರಿ' ಸಿನಿಮಾದ ಟೀಸರ್ ಗೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಚಿತ್ರದಲ್ಲಿ ನಾಗ ಚೈತನ್ಯ ಸಾಮಾನ್ಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನ ಕೊನೆಯಲ್ಲಿ ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಬರಿಗಾಲಿನಲ್ಲಿ ಓಡಿಹೋಗುತ್ತಿರುವ ದೃಶ್ಯವಿದೆ. ಈ ದೃಶ್ಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಂದಹಾಗೆ ನಿರ್ದೇಶಕ ಶೇಖರ್ ಕಮ್ಮುಲ ಜೊತೆಗೆ ಸಾಯಿ ಪಲ್ಲವಿಗೆ ಇದು ಎರಡನೇ ಸಿನಿಮಾ. ಈ ಮೊದಲು 'ಫಿದಾ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು ಸಾಯಿ ಪಲ್ಲವಿ. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. 'ಲವ್‌ಸ್ಟೋರಿ' ಸಿನಿಮಾ ಸಹ ಸೂಪರ್ ಹಿಟ್ ಆಗುವ ಸಾಧ್ಯತೆ ಇದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  English summary
  Actress Samantha Akkineni praises her husband Naga Chaitanya and Sai Pallavi's love story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X