ಎಲ್ಲ ಸ್ಟಾರ್‌ಗಳನ್ನೂ ಮೀರಿಸಿದ ಸಮಂತಾ: ಖುಷಿ ಸುದ್ದಿ ಹಂಚಿಕೊಂಡ ನಟಿ

By Avani Malnad

ಮದುವೆಯಾದ ಬಳಿಕ ನಟಿಯರಿಗೆ ಬೇಡಿಕೆ ತಗ್ಗುತ್ತದೆ. ಅವರ ವರ್ಚಸ್ಸು ಕುಂದುತ್ತದೆ ಎಂಬ ಮಾತಿದೆ. ಅದನ್ನು ಸುಳ್ಳಾಗಿರಿಸಿರುವ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಒಬ್ಬರು. ಸಾಂಸಾರಿಕ ಬದುಕಿಗೆ ಕಾಲಿರಿಸಿದ್ದರೂ, ನಟಿಯರ ನಡುವಿನ ಪೈಪೋಟಿ ತೀವ್ರವಾಗಿದ್ದರೂ ಸಮಂತಾ ವರ್ಚಸ್ಸು ಕಡಿಮೆಯಾಗಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಚಿತ್ರೀಕರಣದ ಚಟುವಟಿಕೆಗಳು ನಡೆಯದೆ ಇದ್ದರೂ ಸಮಂತಾ ಸದಾ ಸುದ್ದಿಯಲ್ಲಿರುತ್ತಾರೆ.

Recommended Video

'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ | Rashmika Mandanna | FILMIBEAT KANNADA

ತೆಲುಗು ಮತ್ತು ತಮಿಳು ಎರಡೂ ಚಿತ್ರರಂಗಗಳಲ್ಲಿ ಸಮಂತಾ ಬೇಡಿಕೆ ಉಳಿಸಿಕೊಂಡಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಸಮಂತಾ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಹಾಗಾಗಿ ಅವರಿಗೆ ಹಿಂಬಾಲಕರ ಸಂಖ್ಯೆ ಹೆಚ್ಚು. ಮುಂದೆ ಓದಿ...

ದಾಖಲೆಯ ಸಾಧನೆ

ದಾಖಲೆಯ ಸಾಧನೆ

ಸೆಲೆಬ್ರಿಟಿಗಳ ನೆಚ್ಚಿನ ಸಾಮಾಜಿಕ ಜಾಲತಾಣವಾಗಿರುವ ಇನ್‌ಸ್ಟಾಗ್ರಾಂನಲ್ಲಿ ಸಮಂತಾ 10 ಮಿಲಿಯನ್ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರೂ ಇಷ್ಟು ಫಾಲೋವರ್‌ಗಳನ್ನು ಪಡೆದಿಲ್ಲ ಎನ್ನುವುದು ಮತ್ತೊಂದು ವಿಶೇಷ. ಕಾಜಲ್ ಅಗರವಾಲ್ 14 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಹತ್ತು ಮಿಲಿಯನ್ ಸಂಭ್ರಮ

ಹತ್ತು ಮಿಲಿಯನ್ ಸಂಭ್ರಮ

'ಯೇ 10 ಮಿಲಿಯನ್...' ಎಂದು ಸಮಂತಾ ತಮ್ಮ ಸಿನಿಮಾವೊಂದರಲ್ಲಿ ಜಿಗಿಯುವ ದೃಶ್ಯದ ಫೋಟೊವನ್ನು ಹಂಚಿಕೊಂಡಿದ್ದಾರೆ. ಹಾಲಿವುಡ್ ನಟಿ ನಟಾಲಿ ಪೋರ್ಟ್‌ಮನ್ ಅವರಿಂದ ಪ್ರೇರಣೆ ಪಡೆದು ಮಹತ್ಕಾರ್ಯ ಮಾಡಿರುವುದಾಗಿ ಸಮಂತಾ ತಿಳಿಸಿದ್ದಾರೆ.

ದೇಣಿಗೆ ನೀಡಿದ್ದ ನಟಾಲಿ

ದೇಣಿಗೆ ನೀಡಿದ್ದ ನಟಾಲಿ

ಹಾಲಿವುಡ್ ನಟಿ ನಟಾಲಿ ಪೋರ್ಟ್‌ಮನ್ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಏಳು ಮಿಲಿಯನ್ ಫಾಲೋವರ್‌ಗಳನ್ನು ಪಡೆದುಕೊಂಡಿದ್ದರು. ಈ ಖುಷಿಗಾಗಿ ಅವರು ಏಳು ಲಾಭರಹಿತ ಸಂಸ್ಥೆಗಳಿಗೆ ಒಂದಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದರು.

ಹತ್ತು ಎನ್‌ಜಿಒಗಳಿಗೆ ದೇಣಿಗೆ

ಹತ್ತು ಎನ್‌ಜಿಒಗಳಿಗೆ ದೇಣಿಗೆ

ಇದೇ ಮಾರ್ಗವನ್ನು ತಾವೂ ಅನುಸರಿಸಿರುವುದಾಗಿ ಸಮಂತಾ ತಿಳಿಸಿದ್ದಾರೆ. ನನ್ನ ಕುಟುಂಬ ಹತ್ತು ಮಿಲಿಯನ್‌ನಷ್ಟು ದೊಡ್ಡದಾದ ಗೌರವಾರ್ಥ ಹತ್ತು ಅದ್ಭುತ ಎನ್‌ಜಿಓಗಳಿಗೆ ದೇಣಿಗೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಎಷ್ಟು ಮೊತ್ತದ ದೇಣಿಗೆ ನೀಡಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ.

More from Filmibeat

English summary
Samantha Akkineni has reached 10 million followers on Instagram, donates to 10 NGO's for honour of that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X