For Quick Alerts
  ALLOW NOTIFICATIONS  
  For Daily Alerts

  ದಶಕದ ಬಳಿಕ ನನ್ನ ಕನಸಿನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ: ನಟಿ ಸಮಂತಾ

  |

  ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಚಿತ್ರರಂಗದಲ್ಲಿ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಬಣ್ಣದ ಲೋಕದ ದಶಕದ ಪಯಣದಲ್ಲಿ ಸಮಂತಾ ತರಹೇವಾರಿ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸಮಂತಾ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

  10 ವರ್ಷದ ಪಯಣದಲ್ಲಿ ಬಹುಬೇಡಿಕೆಯ ನಟಿಯಾಗಿ, ತಮಿಳು ಮತ್ತು ತೆಲುಗಿನ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡಿದ್ದಾರೆ. ಆದರೆ ಇದುವರೆಗೂ ಸಮಂತಾಗೆ ತನ್ನ ಕನಸಿನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಆದರೀಗ ತನ್ನ ಕನಸಿನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಕನಸು ನನಸು ಮಾಡಿದ್ದು ಶಕುಂತಲಂ ಪೌರಾಣಿಕ ಸಿನಿಮಾ. ದಿಲ್ ರಾಜು ಮತ್ತು ಗುಣಶೇಖರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಶಕುಂತಲಂ ಸಿನಿಮಾದಲ್ಲಿ ಸಮಂತಾ, ಶಕುಂತಲ ಆಗಿ ಬಣ್ಣ ಹಚ್ಚುತ್ತಿದ್ದಾರೆ.

  ಸಾಯಿ ಪಲ್ಲವಿ ಜೊತೆ ಓಡಿಹೋದ ನಟ ನಾಗ ಚೈತನ್ಯ: ಸಮಂತಾ ಪ್ರತಿಕ್ರಿಯೆ ಹೀಗಿದೆ

  ಇಂದು (ಮಾರ್ಚ್ 15) ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು, ಪೂಜೆ ಮೂಲಕ ಪೌರಾಣಿಕ ಚಿತ್ರ ಶಕುಂತಲಂಗೆ ಚಾಲನೆ ನೀಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಸಮಂತಾ, '50 ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದೇನಿ. ದಿ ಫ್ಯಾಮಿಲಿ ಮ್ಯಾನ್ ನಲ್ಲಿ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ವಿಲನ್ ಆಗಿಯೂ ನಟಿಸಿದ್ದೀನಿ. ಆದರೆ ನನ್ನ ಕನಸಿನ ಪಾತ್ರ ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಮತ್ತು ರಾಜಕುಮಾರಿ ಪಾತ್ರಗಳು'

  'ನನ್ನ ವೃತ್ತಿ ಜೀವನದ ಈ ಹಂತದಲ್ಲಿ ದಿಲ್ ರಾಜು ಸರ್ ಮತ್ತು ಗುಣ ಸರ್ ನನಗೆ ಉತ್ತಮ ಉಡುಗೊರೆ ನೀಡಿದ್ದಾರೆ. ಈ ರೀತಿಯ ಪಾತ್ರವನ್ನು ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ಕನಸು ಈಗ ನನಸಾಗಿದೆ. ನಾನು ಈ ಪಾತ್ರಕ್ಕೆ ನ್ಯಾಯ ಒದಗಿಸಲು 100 ಪರ್ಸೆಂಟ್ ಪ್ರಯತ್ನ ಮಾಡುತ್ತೇನೆ' ಎಂದು ಹೇಳಿದ್ದಾರೆ.

  ಶಕುಂತಲಂ ಪಾತ್ರಕ್ಕಾಗಿ ಸಮಂತಾ ನಾಲ್ಕು ತಿಂಗಳು ತಯಾರಿ ನಡೆಸಿದ್ದಾರೆ. ಬೇರೆ ಸಿನಿಮಾಗಳ ಶೂಟಿಂಗ್ ನಡುವೆಯೂ ಸಮಂತಾ ತನ್ನ ಕನಸಿನ ಪಾತ್ರಕ್ಕಾಗಿ ಶಾಸ್ತ್ರೀಯ ತರಬೇತಿ ಪಡೆಯುವ ಜೊತೆಗೆ ಸಾಕಷ್ಟು ಶ್ರಮಿಸಿದ್ದಾರೆ.

  ಶಕುಂತಲಂ ಸಿನಿಮಾದಲ್ಲಿ ದಷ್ಯಂತ ಆಗಿ ದೇವ್ ಮೋಹನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಮಲಯಾಳಂ ಸೂಪರ್ ಹಿಟ್ ಸೂಫಿಯುಂ ಸುಜಾತಯುಂ ಸಿನಿಮಾದಲ್ಲಿ ನಟಿಸಿದ್ದ ದೇವ್ ಮೋಹನ್ ಶಕುಂತಲಂ ಸಿನಿಮಾ ಮೂಲಕ ತೆಲುಗು ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.

  ಶಕುಂತಲಂ ಸಿನಿಮಾದಲ್ಲಿ ಹೆಸರೇ ಹೇಳುವ ಹಾಗೆ ವಿಶ್ವಮಿತ್ರ ಮತ್ತು ಮೇನಕಾ ಮಗಳಾದ ಶಾಕುಂತಲ ಕತೆಯೇ ಹೈಲೆಟ್. ದುಷ್ಯಂತ ಮತ್ತು ಶಾಕುಂತಲ ಅವರ ಅಮರ ಪ್ರೇಮಕಥೆಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಶಕುಂತಲಾ ಆಗಿ ಸಮಂತಾ ಹೇಗೆ ಕಾಣಿಸಲಿದ್ದಾರೆ ಎಂದು ಕಾದುನೋಡಬೇಕು.

  Kichcha Sudeep's 25Y Celebration : ಬೆಳ್ಳಿಹಬ್ಬದ ಸಂಭ್ರಮದಲ್ಲಿ ಶಿವಣ್ಣ,ರವಿಚಂದ್ರನ್ ಬಗ್ಗೆ ಕಿಚ್ಚ ಹೇಳಿದ್ದೇನು
  English summary
  Telugu Actress Samantha Akkineni reaction about her next movie Shakunthalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X