For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?

  |

  ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಯಾರಿಗೆ ತಾನೆ ಇಷ್ಟ ಆಗಲ್ಲ. ಸಮಂತಾ ಸಿನಿಮಾ ನೋಡಲು ಅಭಿಮಾನಿಗಳು ಕಾರತದಿಂದ ಕಾಯುತ್ತಿರುತ್ತಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಸಮಂತಾ ಅನೇಕ ಸ್ಟಾರ್ ನಟರಿಗೂ ನೆಚ್ಚಿನ ನಟಿ. ಮುದ್ದು ಮುಖದ ಸಮಂತಾ ಅಭಿನಯಕ್ಕೆ ಫಿದಾ ಆಗದವರೆ ಇಲ್ಲ.

  ಅಂಬರೀಷ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ | Sumalatha Ambareesh | Filmibeat Kannada

  ಸಮಂತಾ ಕೇವಲ ದಕ್ಷಣ ಭಾರತೀಯ ಸಿನಿಮಾರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಫೇಮಸ್. ಹಿಂದಿಯಲ್ಲಿ ಸಮಂತಾ ನಟಿಸಿರುವುದು ಒಂದೇ ಒಂದು ಸಿನಿಮಾ. ಆದರೂ ಸಮಂತಾ ಅವರನ್ನು ಇಷ್ಟಪಡುವವರು ಅನೇಕರಿದ್ದಾರೆ. ಸಮಂತಾ ಬಗ್ಗೆ ಬಾಲಿವುಡ್ ನಟ ಅರ್ಜುನ್ ಕಪೂರ್ 3 ವರ್ಷದ ಹಿಂದೆಯೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಈಗ ವೈರಲ್ ಆಗುತ್ತಿದೆ. ಮುಂದೆ ಓದಿ...

  ವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾ

  3 ವರ್ಷದ ಹಿಂದೆ ಅರ್ಜುನ್ ಕಪೂರ್ ಮಾಡಿರುವ ಟ್ವೀಟ್

  3 ವರ್ಷದ ಹಿಂದೆ ಅರ್ಜುನ್ ಕಪೂರ್ ಮಾಡಿರುವ ಟ್ವೀಟ್

  ಬಾಲಿವುಡ್ ನಟ ಅರ್ಜುನ್ ಕಪೂರ್ 3 ವರ್ಷದ ಹಿಂದೆ ಸಮಂತಾ ಬಗ್ಗೆ ಮಾಡಿರುವ ಟ್ವೀಟ್ ಇದಾಗಿದೆ. ಈ ಟ್ವೀಟ್ ಗೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ಸಮಂತಾ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಸಮಂತಾ ಗೆ ಸಿಕ್ಕ ಅವಕಾಶವನ್ನು ಕಿತ್ತುಕೊಂಡರೇ ರಶ್ಮಿಕಾ ಮಂದಣ್ಣಸಮಂತಾ ಗೆ ಸಿಕ್ಕ ಅವಕಾಶವನ್ನು ಕಿತ್ತುಕೊಂಡರೇ ರಶ್ಮಿಕಾ ಮಂದಣ್ಣ

  ಸೌತ್ ಸುಂದರಿ ಸಮಂತಾ ಅಂದರೆ ಇಷ್ಟ

  ಸೌತ್ ಸುಂದರಿ ಸಮಂತಾ ಅಂದರೆ ಇಷ್ಟ

  ಅಷ್ಟಕ್ಕು ಅರ್ಜುನ್ ಕಪೂರ್ ಸಮಂತಾ ಬಗ್ಗೆ ಹೇಳಿದ್ದೇನು ಅಂತೀರಾ. 2017 ಜುಲೈನಲ್ಲಿ ಅರ್ಜುನ್ ಕಪೂರ್ 'ಆಸ್ಕ್ ಮೀ ಎನಿಥಿಂಗ್' ಎಂದು ಅಭಿಮಾನಿಗಳಲ್ಲಿ ಕೇಳಿದ್ದರು. ಟ್ವಿಟ್ಟರ್ ನಲ್ಲಿ ಅರ್ಜುನ್ ಗೆ ಸಾಕಷ್ಟು ಪ್ರಶ್ನೆಗಳು ಹರಿದುಬಂದಿತ್ತು. ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ದಕ್ಷಿಣ ಭಾರತದ ನಟಿಯಾರು ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಅರ್ಜುನ್ ಸಮಂತಾ ಮತ್ತು ನಯನತಾರಾ ಎಂದು ಹೇಳಿದ್ದರು.

  ಸಮಂತಾ ಪ್ರತಿಕ್ರಿಯೆ ಹೀಗಿದೆ

  ಸಮಂತಾ ಪ್ರತಿಕ್ರಿಯೆ ಹೀಗಿದೆ

  ಮೂರು ವರ್ಷದ ಹಿಂದೆ ಅರ್ಜುನ್ ಮಾಡಿರುವ ಟ್ವೀಟ್ ಈಗ ವೈರಲ್ ಆಗುತ್ತಿದೆ. ಅರ್ಜುನ್ ಟ್ವೀಟ್ ಗೆ ಸಮಂತಾ ಈಗ ಪ್ರತಿಕ್ರಿಯೆ ನೀಡಿದ್ದಾರೆ. "ನೀವು ತುಂಬಾ ಕೂಲೆಸ್ಟ್, ತುಂಬಾ ಧನ್ಯವಾದಗಳು" ಎಂದಿದ್ದಾರೆ. ಸಮಂತಾ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆ ನಂತರ ವಿಘ್ನೇಶ್ ಶಿವನ್ ನಿರ್ದೇಶನದ ತಮಿಳು ಸಿನಿಮಾದಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದರೆ ಸಿನಿಮಾ ಜೊತೆಗೆ ಸಮಂತಾ ವೆಬ್ ಸೀರಿಸ್ ಲೋಕಕ್ಕೂ ಎಂಟ್ಕಿ ಕೊಟ್ಟಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Samantha Akkineni reaction to Bollywood Actor Arjun Kapoor tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X