twitter
    For Quick Alerts
    ALLOW NOTIFICATIONS  
    For Daily Alerts

    ಪ್ರತಿದಿನ ಊಟಕ್ಕೂ ಮುನ್ನ ಸಮಂತಾ ನೆನೆಸಿಕೊಳ್ಳುವುದು ಇವರನ್ನು...

    By Avani Malnad
    |

    ಲಾಕ್ ಡೌನ್ ಅವಧಿಯಲ್ಲಿ ಒಬ್ಬೊಬ್ಬ ಸೆಲೆಬ್ರಿಟಿಗಳು ಒಂದೊಂದು ಬಗೆಯ ಚಟುವಟಿಕೆಗಳಲ್ಲಿ ಸಮಯ ಕಳೆದಿದ್ದಾರೆ. ಹೆಚ್ಚಿನವರು ಬಗೆ ಬಗೆಯ ಅಡುಗೆ, ವರ್ಕೌಟ್ ಮಾಡುವುದರ ಜತೆಗೆ ಅವುಗಳ ಫೋಟೊ, ವಿಡಿಯೋ ಹಂಚಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ನಟಿ ಸಮಂತಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಆದರೆ ಬೇರೆ ನಟಿಯರಿಗಿಂತ ಅವರು ತುಸು ವಿಭಿನ್ನ.

    Recommended Video

    Sudeep might play villain against Mahesh Babu | Filmibeat Kannada

    ಕೆಲವರು ಮನೆಯಲ್ಲಿ ಸಮಯ ಕಳೆಯುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಸಮಂತಾ ಬೇರೆಯದೇ ಯೋಜನೆ ರೂಪಿಸಿದ್ದರು. ಅದರ ಪರಿಣಾಮವಾಗಿ ಅವರ ಮನೆಯ ತಾರಸಿ ಹಸಿರುಮಯವಾಗಿದೆ. ಅಷ್ಟೇ ಅಲ್ಲ, ಬಗೆ ಬಗೆಯ ತರಕಾರಿಗಳು ಗೊಂಚಲು ಗೊಂಚಲು ಬಿಡುತ್ತಿದ್ದು, ಅವುಗಳಲ್ಲೇ ವಿವಿಧ ಬಗೆಯ ಖಾದ್ಯ ತಯಾರಿಸಿ ಸಮಂತಾ ಸಂಭ್ರಮಿಸುತ್ತಿದ್ದಾರೆ. ವರ್ಕೌಟ್, ಬಗೆ ಬಗೆಯ ಅಡುಗೆ ತಯಾರಿಸುವುದಷ್ಟೇ ಸಮಯ ಕಳೆಯುವ ಸಾಧನ ಎಂದುಕೊಂಡವರಿಗೆ ಸಮಂತಾ, ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಹೇಗೆ ಎಂದು ಪಾಠ ಹೇಳಿಕೊಡುತ್ತಿದ್ದಾರೆ. ಮುಂದೆ ಓದಿ...

    ಮನೆಯಲ್ಲಿಯೇ ಗಾರ್ಡನ್

    ಮನೆಯಲ್ಲಿಯೇ ಗಾರ್ಡನ್

    ಲಾಕ್ ಡೌನ್ ಸಮಯದಲ್ಲಿ ಇನ್‌ಸ್ಟಾಗ್ರಾಂ ಸ್ಟೋರಿಗಳಲ್ಲಿ ಸಮಂತಾ ಹಲವು ಬಾರಿ ತಮ್ಮ ಗಾರ್ಡನ್ ಫೋಟೊಗಳನ್ನು ಹಾಕಿ ಖುಷಿಪಟ್ಟಿದ್ದಾರೆ. ತಾರಸಿ ಗಾರ್ಡನಿಂಗ್ ಬಗ್ಗೆ ಪರಿಣತಿ ಹೊಂದಿರುವ ತಂಡವೊಂದರ ನೆರವಿನಿಂದ ಮನೆಯ ತಾರಸಿ, ಬಾಲ್ಕನಿ ಮುಂತಾದೆಡೆ ಗಿಡಗಳನ್ನು ಬೆಳೆಸಿದ್ದಾರೆ.

    ಸಮಂತಾ ಅಥವಾ ರಶ್ಮಿಕಾ ಇಬ್ಬರಲ್ಲಿ ಯಾರು ಬೆಸ್ಟ್?: ಮಹೇಶ್ ಬಾಬು ಆಯ್ಕೆ ಇದುಸಮಂತಾ ಅಥವಾ ರಶ್ಮಿಕಾ ಇಬ್ಬರಲ್ಲಿ ಯಾರು ಬೆಸ್ಟ್?: ಮಹೇಶ್ ಬಾಬು ಆಯ್ಕೆ ಇದು

    ಗಾರ್ಡನಿಂಗ್ ಮಾಡಿ

    ಗಾರ್ಡನಿಂಗ್ ಮಾಡಿ

    ಈ ಸಂದರ್ಭದಲ್ಲಿ ನಮ್ಮಲ್ಲಿ ಎಲ್ಲರಿಗೂ ಸಮಯ ಸಿಗುತ್ತಿದೆ. ಆಸಕ್ತರಿಗೆ ಬಲವಾಗಿ ಶಿಫಾರಸು ಮಾಡುವುದೆಂದರೆ ಗಾರ್ಡನಿಂಗ್. ಭೂಮಿಯೊಂದಿಗೆ ನಾನು ಕಳೆದುಕೊಂಡ ಸಂಪರ್ಕವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಇದು ನನಗೆ ಬೇಕಾಗಿತ್ತು.

    ಊಟಕ್ಕೂ ಮೊದಲು ಧನ್ಯವಾದ

    ಊಟಕ್ಕೂ ಮೊದಲು ಧನ್ಯವಾದ

    ನನ್ನನ್ನು ಪೋಷಿಸುತ್ತಿರುವ ಪ್ರತಿಯೊಂದಕ್ಕೂ ಊಟ ಮಾಡುವ ಮೊದಲು ಸ್ಮರಿಸಿಕೊಂಡು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಊಟದ ಮೇಜಿನ ಮೇಲಿನ ಆಹಾರಕ್ಕೆ ಎಷ್ಟನ್ನು ಮಾತ್ರವೇ ಬಳಸಬೇಕು ಎಂಬುದನ್ನು ನಿಧಾನವಾಗಿ ತಿಳಿಯತೊಡಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಗಿಡಗಳನ್ನು ಪ್ರೀತಿಸುವ ಬಗೆಯನ್ನು ಹೇಳಿಕೊಟ್ಟಿದ್ದಾರೆ.

    10ನೇ ತರಗತಿಯಲ್ಲಿ ಸಮಂತಾ ಪಡೆದ ಮಾರ್ಕ್ಸ್ ಎಷ್ಟು ನೋಡಿ10ನೇ ತರಗತಿಯಲ್ಲಿ ಸಮಂತಾ ಪಡೆದ ಮಾರ್ಕ್ಸ್ ಎಷ್ಟು ನೋಡಿ

    ಒಂದು ಬೀಜ ಎಷ್ಟೆಲ್ಲ ಹೋರಾಡುತ್ತದೆ

    ಒಂದು ಬೀಜ ಎಷ್ಟೆಲ್ಲ ಹೋರಾಡುತ್ತದೆ

    ಮಣ್ಣಿನಿಂದ ಮೊಳಕೆಯೊಡೆದು ಹೊರಬಂದು ವಾರಗಟ್ಟಲೆ, ತಿಂಗಳುಗಟ್ಟಲೆ ಮತ್ತು ವರ್ಷಗಟ್ಟಲೆ ಬೆಳೆಯಲು ಆ ಸಣ್ಣ ಬೀಜ ಎಷ್ಟೆಲ್ಲ ಹೋರಾಟ ಮಾಡುತ್ತದೆ ಎಂಬುದನ್ನು ನೋಡಿದಾಗ ನಾವೆಲ್ಲರೂ ಹೇಗೆ ನಂಟು ಬೆಸೆದುಕೊಂಡಿದ್ದೇವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ. ನಾವು ಭೂಮಿಗೆ ಎಷ್ಟು ಕೃತಜ್ಞರಾಗಿದ್ದರೂ ಸಾಲದು ಎಂದದ್ದಾರೆ.

    ಅಡುಗೆ ಕಲಿಯುತ್ತಿರುವ ಸಮಂತಾ

    ಅಡುಗೆ ಕಲಿಯುತ್ತಿರುವ ಸಮಂತಾ

    ಬೆಳಿಗ್ಗೆ ಬೇಗನೆ ಎದ್ದು ತಾರಸಿಯ ಮೇಲೆ ಓಡಿ ಗಿಡಗಳು ನಿನ್ನೆಗಿಂತಲೂ ಇನ್ನಷ್ಟು ಚೆನ್ನಾಗಿವೆ ಎಂಬುದನ್ನು ನೋಡಲು ಬಹಳ ಖುಷಿಯಾಗುತ್ತದೆ ಎಂದಿರುವ ಸಮಂತಾ, ತಾರಸಿ ಗಾರ್ಡನ್ ಮೂಲಕ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಅವುಗಳನ್ನು ಯಾವ ರೀತಿ ಎಷ್ಟು ಪ್ರಮಾಣದಲ್ಲಿ ಬಳಸಿ ಹೇಗೆಲ್ಲ ಅಡುಗೆ ತಯಾರಿಸಬಹುದು ಎಂಬುದನ್ನೂ ಪರಿಣತರಿಂದ ಕಲಿಯುತ್ತಿದ್ದಾರೆ.

    ಮುಯ್ಯಿಗೆ ಮುಯ್ಯಿ: ಪೂಜಾ ಹೆಗ್ಡೆಯನ್ನು ಲೇವಡಿ ಮಾಡಿದ ಸಮಂತಾಮುಯ್ಯಿಗೆ ಮುಯ್ಯಿ: ಪೂಜಾ ಹೆಗ್ಡೆಯನ್ನು ಲೇವಡಿ ಮಾಡಿದ ಸಮಂತಾ

    English summary
    Samantha Akkineni said she recommend gardening people to connect back with the earth.
    Wednesday, June 10, 2020, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X