For Quick Alerts
  ALLOW NOTIFICATIONS  
  For Daily Alerts

  ಸಮಂತಾ ಜಿಮ್‌ಗೆ ಹೋಗಲು ಶುರು ಮಾಡಿದ್ದು ಏಕೆ? ಸೀಕ್ರೆಟ್ ಬಿಚ್ಚಿಟ್ಟ ನಟಿ

  |

  ನಟ-ನಟಿಯರಿಗೆ ಫಿಟ್ನೆಸ್ ಬಹಳ ಮುಖ್ಯವಾಗುತ್ತದೆ. ತಮ್ಮ ದೇಹವನ್ನು ಎಷ್ಟು ಫಿಟ್ ಆಗಿ ಇಟ್ಟುಕೊಳ್ಳುತ್ತಾರೋ ಚಿತ್ರರಂಗದಲ್ಲಿ ಅಷ್ಟೇ ಬೇಡಿಕೆ ಉಳಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ದೊಡ್ಡ ಸವಾಲು ಆಗಿದೆ. ಎಷ್ಟೋ ಕಲಾವಿದರಿಗೆ ಫಿಟ್ನೆಸ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಕೆಲವು ಪಾತ್ರಗಳು ಕೈಬಿಟ್ಟು ಹೋಗಿರುವ ಉದಾಹಣೆಗಳಿವೆ.

  ಫಿಟ್ನೆಸ್ ಬಗ್ಗೆ ಟಾಲಿವುಡ್ ಚೆಲುವೆ ಸಮಂತಾ ಅಕ್ಕಿನೇನಿ ಹೆಚ್ಚು ಗಮನ ಕೊಡ್ತಾರೆ. ಮದುವೆ ಆದ್ಮೇಲೂ ಬೇಡಿಕೆಯ ನಾಯಕಿ ನಟಿಯಾಗಿ ಮುಂದುವರಿಯುತ್ತಿರುವ ನಾಗಚೈತನ್ಯ ಪತ್ನಿ ಈಗೊಂದು ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

  ಸಾಯಿ ಪಲ್ಲವಿ ಜೊತೆ ಓಡಿಹೋದ ನಟ ನಾಗ ಚೈತನ್ಯ: ಸಮಂತಾ ಪ್ರತಿಕ್ರಿಯೆ ಹೀಗಿದೆಸಾಯಿ ಪಲ್ಲವಿ ಜೊತೆ ಓಡಿಹೋದ ನಟ ನಾಗ ಚೈತನ್ಯ: ಸಮಂತಾ ಪ್ರತಿಕ್ರಿಯೆ ಹೀಗಿದೆ

  ತಾನು ಜಿಮ್‌ಗೆ ಹೋಗಲು ಕಾರಣ ಏನು ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ನಟಿಗೆ ಅಭಿಮಾನಿಯೊಬ್ಬರು ''ನೀವು ಏಕೆ ಜಿಮ್‌ಗೆ ಹೋಗಿದ್ದು?' ಎಂದು ಪ್ರಶ್ನಿಸಿದ್ದಾರೆ.

  ಇದಕ್ಕೆ ಉತ್ತರಿಸಿರುವ ನಟಿ ಸಮಂತಾ ''ನಾನು ಇಂದು ನಿಮಗೆ ದೊಡ್ಡ ರಹಸ್ಯ ಹೇಳಲಿದ್ದೇನೆ, ನಾನು ಏಕೆ ಜಿಮ್‌ಗೆ ಹೋದೆ ಎಂದು ನಿಮಗೆ ಗೊತ್ತೆ? ಚಾಯ್ (ನಾಗಚೈತನ್ಯ) ಜಿಮ್‌ಗೆ ಹೋಗುತ್ತಿದ್ದರು, ಅವರನ್ನು ಪರೀಕ್ಷಿಸಲು ನಾನು ಹೋಗುತ್ತಿದ್ದೆ, ಹಾಗಾಗಿ, ನಾನು ಜಿಮ್‌ ಪ್ರಾರಂಭಿಸಿದೆ'' ಎಂದು ತಮ್ಮ ಲವ್ ಸ್ಟೋರಿ ಕುರಿತು ಹೇಳಿಕೊಂಡಿದ್ದಾರೆ.

  ಪತಿ ನಾಗಚೈತನ್ಯಗೆ ಬಹಿರಂಗವಾಗಿ ಪ್ರಶ್ನೆಗಳನ್ನು ಕೇಳಿ ಕಾಲೆಳೆದ ಸಂಮತಾಪತಿ ನಾಗಚೈತನ್ಯಗೆ ಬಹಿರಂಗವಾಗಿ ಪ್ರಶ್ನೆಗಳನ್ನು ಕೇಳಿ ಕಾಲೆಳೆದ ಸಂಮತಾ

  'ಟ್ರೋಲ್‌ಗಳ ಬಗ್ಗೆ ನೀವು ಹೇಗೆ ಸ್ವೀಕರಿಸುತ್ತೀರಾ?' ಎಂದು ಮತ್ತೊರ್ವ ಅಭಿಮಾನಿ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಟಿ ''ನಾನು ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ, ಇದೆಲ್ಲವೂ ಆ ವ್ಯಕ್ತಿ ಎಷ್ಟರ ಮಟ್ಟಿಗೆ ಬೆಳೆದಿದ್ದೇನೆ ಎಂದು ತೋರಿಸುತ್ತದೆ'' ಎಂದಿದ್ದಾರೆ.

  ಜನವರಿ 26 ರಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಸಮಂತಾ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿದ್ದಾರೆ. ತಮಗೆ ಇಷ್ಟವಾದ ಪಾತ್ರ, ನಾಗಚೈತನ್ಯ ಕುರಿತು, ಮುಂದಿನ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.

  ಎಲ್ಲರ ಪ್ರಶ್ನೆಗೆ ಉತ್ತರಕೊಟ್ಟ ಐಂದ್ರಿತಾ | Filmibeat Kannada

  ಅಂದ್ಹಾಗೆ, ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಪರಸ್ಪರ ಪ್ರೀತಿಯಲ್ಲಿದ್ದರು. 2017ರ ಅಕ್ಟೋಬರ್ 7 ರಂದು ಈ ಇಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದರು.

  English summary
  Tollywood actress Samantha akkineni revealed why she went to Gym?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X