Just In
Don't Miss!
- Lifestyle
ಮಂಗಳವಾರದ ರಾಶಿಫಲ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆರೆಮೇಲೆ ಬರ್ತಿದೆ 'ಶಕುಂತಲ' ಕಥೆ: ಪೌರಾಣಿಕ ಸಿನಿಮಾದಲ್ಲಿ ದಕ್ಷಿಣದ ಸ್ಟಾರ್ ನಟಿ
ತೆಲುಗು ಸಿನಿಮಾರಂಗದಲ್ಲಿ 'ಶಕುಂತಲಂ' ಸಿನಿಮಾ ಕಳೆದ ಒಂದು ವರ್ಷದಿಂದ ಸದ್ದು ಮಾಡುತ್ತಿದೆ. ಶಕುಂತಲಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಈಗಾಗಲೇ ಈ ಪಾತ್ರಕ್ಕೆ ಸಾಕಷ್ಟು ಹೆಸರುಗಳು ಕೇಳಿಬಂದಿತ್ತು.
ಪೌರಾಣಿಕ, ಐತಿಹಾಸಿಕ ಸಿನಿಮಾ ಅಂದಕ್ಷಣ ನಾಯಕಿ ಪಾತ್ರಕ್ಕೆ ಮೊದಲು ಕೇಳಿಬರುವ ಹೆಸರು ನಟಿ ಅನುಷ್ಕಾ ಶೆಟ್ಟಿ. ಶಕುಂತಲಂ ಸಿನಿಮಾದಲ್ಲೂ ನಟಿ ಅನುಷ್ಕಾ ನಟಿಸಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿಬರುತ್ತಿತ್ತು. ಜೊತೆಗೆ ಸದ್ಯ ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆ ಹೆಸರು ಸಹ ಕೇಳಿಬರುತ್ತಿತ್ತು. ಆದರೀಗ ಈ ಇಬ್ಬರೂ ನಟಿಯರು ಶಕುಂತಲಂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇಬ್ಬರ ಬದಲಾಗಿ ದಕ್ಷಿಣ ಭಾರತದ ಮತ್ತೋರ್ವ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಆಯ್ಕೆಯಾಗಿದ್ದಾರೆ. ಮುಂದೆ ಓದಿ..
ಸಮಂತಾ 'ಸ್ಯಾಮ್ ಜಾಮ್' ಶೋ ನಿರೂಪಣೆಗೆ ಪಡೆದ ಸಂಭಾವನೆ ಇಷ್ಟೊಂದಾ?

ಮೋಷನ್ ಪೋಸ್ಟರ್ ರಿಲೀಸ್
ಶಕುಂತಲಂ ಚಿತ್ರದ ನಾಯಕಿ ಸಮಂತಾ ಅಕ್ಕಿನೇನಿ ಎಂದು ಸಿನಿಮಾತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಹೊಸ ವರ್ಷದ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರ್ ಅನ್ನು ರಿವೀಲ್ ಮಾಡಿದೆ. ಶಕುಂತಲಂ ಪೌರಾಣಿಕ ಸಿನಿಮಾದ ಮೋಷನ್ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಮಂತಾ ಶಕುಂತಲ ಆಗಿ ಮಿಂಚಲು ಸಜ್ಜಾಗಿದ್ದಾರೆ.

ಗುಣಶೇಖರ್ ನಿರ್ದೇಶನ
ಅಂದಹಾಗೆ ಶಕುಂತಲಂ ಸಿನಿಮಾಗೆ ಗಣಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುಣಶೇಖರ್ ಈ ಮೊದಲು ಹಿರಣ್ಯಕಶ್ಯಪು ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ ಈ ಸಿನಿಮಾಗೂ ಮೊದಲೇ 'ಶಕುಂತಲಾಂ' ಸಿನಿಮಾ ಘೋಷಣೆ ಮಾಡಿದ್ದಾರೆ. ಭಾರತದ ಮಹಾಕಾವ್ಯ ಶಕುಂತಲ ಪಾತ್ರವನ್ನು ಆಧರಿಸಿ ಈ ಚಿತ್ರವನ್ನು ಮಾಡುತ್ತಿದ್ದಾರೆ ನಿರ್ದೇಶಕ ಗುಣಶೇಖರ್.

ದುಷ್ಯಂತ ಮತ್ತು ಶಕುಂತಲ ಕಥೆ
ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ಸಿನಿಮಾತಂಡ, ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ವಿಶ್ವಮಿತ್ರ ಮತ್ತು ಮೇನಕಾ ಮಗಳಾದ ಶಕುಂತಲಳ ಕಥೆ ಇದೆ ಎಂದು ಹೇಳಲಾಗುತ್ತಿದೆ. ದುಷ್ಯಂತ ಮತ್ತು ಶಕುಂತಲ ಅವರ ಅಮರ ಪ್ರೇಮಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ.
ಸಣ್ಣ ಪರದೆಯಲ್ಲಿ ಸಮಂತಾ: 'ದಿ ಫ್ಯಾಮಿಲಿ ಮ್ಯಾನ್ 2' ಬಿಡುಗಡೆ ದಿನಾಂಕ ಘೋಷಣೆ

ಸಮಂತಾ ಸಿನಿಮಾಗಳು
ಅಂದಹಾಗೆ ಸಮಂತಾ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದ ತಮಿಳು ಸಿನಿಮಾ ಮತ್ತು ಇನ್ನೊಂದು ಸಿನಿಮಾ ಸಮಂತಾ ಬಳಿ ಇದೆ. ಜೊತೆಗೆ ಸಮಂತಾ ನಟನೆಯ ವೆಬ್ ಸೀರಿಸ್ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದೀಗ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಹೆಚ್ಚಿನ ಮಾಹಿತಿ ತಿಳಿದುಕಳ್ಳಲು ಅಭಿಮಾನಿಗಳು ಹೆಚ್ಚು ಆಸಕ್ತರಾಗಿದ್ದಾರೆ. ಸದ್ಯದಲ್ಲೇ ಶಕುಂತಲಂ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲಿದೆ.