For Quick Alerts
  ALLOW NOTIFICATIONS  
  For Daily Alerts

  ಪತಿ ನಾಗಚೈತನ್ಯಗೆ ಬಹಿರಂಗವಾಗಿ ಪ್ರಶ್ನೆಗಳನ್ನು ಕೇಳಿ ಕಾಲೆಳೆದ ಸಂಮತಾ

  |

  ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸದ್ಯ ಸ್ಯಾಮ್ ಜಾಮ್ ಎನ್ನುವ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಈಗಾಗಲೇ ಈ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತೆಲುಗು ಸಿನಿಮಾರಂಗದ ಖ್ಯಾತ ಕಲಾವಿದನ್ನು ಸಂದರ್ಶನ ಮಾಡುವ ಮೂಲಕ ಸಮಂತಾ ಎಲ್ಲರ ಗಮನ ಸೆಳೆದಿದ್ದಾರೆ.

  ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಒಡೆತನ ಆಹಾ ಒಟಿಟಿಗೆ ಸಮಂತಾ ಸ್ಯಾಮ್ ಜಾಮ್ ಶೋ ನಡೆಸಿಕೊಡುತ್ತಿದ್ದಾರೆ. ಈಗಾಗಲೇ ಅನೇಕರ ಸಂದರ್ಶನ ಮಾಡಿರುವ ಸಮಂತಾ ಇದೀಗ ಪತಿ ನಾಗ ಚೈತನ್ಯ ಸಂದರ್ಶನ ಮಾಡಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ಸಂದರ್ಶನದ ಪ್ರೋಮೋ ರಿಲೀಸ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ತೆರೆಮೇಲೆ ಬರ್ತಿದೆ 'ಶಕುಂತಲ' ಕಥೆ: ಪೌರಾಣಿಕ ಸಿನಿಮಾದಲ್ಲಿ ದಕ್ಷಿಣದ ಸ್ಟಾರ್ ನಟಿ

  ಸ್ಯಾಮ್ ಜಾಮ್ ಶೋ ಮುಕ್ತಾಯ

  ಸ್ಯಾಮ್ ಜಾಮ್ ಶೋ ಮುಕ್ತಾಯ

  ಪತಿಯ ಸಂದರ್ಶನದ ಮೂಲಕ ಈ ಶೋ ಕೊನೆಗೊಳಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸದ್ಯ ನಾಗಚೈತನ್ಯ ಜೊತೆಗಿನ ಸಂದರ್ಶನ ಜನವರಿ 8 ರಂದು ಪ್ರಸಾರವಾಗಲಿದೆ. ಸಮಂತಾ ದಂಪತಿಯನ್ನು ಒಟ್ಟಿಗೆ ಒಂದೇ ಫ್ರೇಮ್ ನಲ್ಲಿ ನೋಡಿ ಅನೇಕ ಸಮಯವಾಗಿತ್ತು. ಇದೀಗ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ಸಂದರ್ಶನದಲ್ಲಿ ಪತಿಯ ಕಾಲೆಳೆದ ಸಮಂತಾ

  ಸಂದರ್ಶನದಲ್ಲಿ ಪತಿಯ ಕಾಲೆಳೆದ ಸಮಂತಾ

  ಅಡುಗೆ, ಮನೆ ನಿರ್ವಹಣೆ, ಹುಡುಗಿಯರ ಜೊತೆ ಡೇಟಿಂಗ್ ಸೇರಿದಂತೆ ಅನೇಕ ವಿಚಾರಗಳನ್ನು ಕೇಳುವ ಮೂಲಕ ಸಮಂತಾ ಸಂದರ್ಶನದಲ್ಲಿ ಪತಿಯ ಕಾಲೆಳೆದಿದ್ದಾರೆ. ಇಬ್ಬರ ಮಾತುಕತೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಮಂತಾ ಇಂಟರೆಸ್ಟಿಂಗ್ ಪ್ರಶ್ನೆಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

  ಸ್ಯಾಮ್ ಜಾಮ್ ಶೋನಲ್ಲಿ ಪ್ರಮುಖ ಸೆಲೆಬ್ರಿಟಿಗಳು

  ಸ್ಯಾಮ್ ಜಾಮ್ ಶೋನಲ್ಲಿ ಪ್ರಮುಖ ಸೆಲೆಬ್ರಿಟಿಗಳು

  ಅಂದಹಾಗೆ ಸ್ಯಾಮ್ ಜಾಮ್ ಟಾಕ್ ಶೋ ದೀಪಾವಳಿಯಿಂದ ಪ್ರಾರಂಭವಾಗಿತ್ತು. ಈಗಾಗಲೇ ಪ್ರಮುಖ ಸೆಲೆಬ್ರಿಟಿಗಳಾದ ಮೆಗಾಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಅಲ್ಲು ಅರ್ಜುನ್, ರಕುಲ್ ಪ್ರೀತ್ ಸಿಂಗ್, ತಮನ್ನಾ, ಬ್ಯಾಡ್ಮಿಂಟನ್ ತಾರೆ ಸೈನಾ ಸೆಹವಾಲ್ ಮತ್ತು ಪರುಪಲ್ಲಿ ಕಶ್ಯಪ್ ಸೇರಿದಂತೆ ಅನೇಕರನ್ನು ಸಂದರ್ಶನ ಮಾಡಿದ್ದಾರೆ. ಇದೀಗ ಕೊನೆಯದಾಗಿ ಪತಿಯ ಸಂದರ್ಶನ ಮಾಡುತ್ತಿದ್ದಾರೆ.

  ಸಮಂತಾ 'ಸ್ಯಾಮ್ ಜಾಮ್' ಶೋ ನಿರೂಪಣೆಗೆ ಪಡೆದ ಸಂಭಾವನೆ ಇಷ್ಟೊಂದಾ?

  ಟಾಕ್ ಶೋಗೆ ಸಮಂತಾ ಪಡೆದ ಸಂಭಾವನೆ

  ಟಾಕ್ ಶೋಗೆ ಸಮಂತಾ ಪಡೆದ ಸಂಭಾವನೆ

  ಮದುವೆ ಬಳಿಕವೂ ಬೇಡಿಕೆಯ ನಟಿಯಾಗಿರುವ ಸಮಂತಾ ಸಿನಿಮಾದಲ್ಲಿ ನಟಿಸಲು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಹಈ ಶೋ ನಡೆಸಿಕೊಡಲು ಸಹ ಸಮಂತಾ ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೌದು, ಸಮಂತಾ ಈ ಶೋಗಾಗಿ 1ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇತ್ತೀಚಿಗೆ ಬಿಗ್ ಹೋಸ್ಟ್ ಮಾಡಿ ಗಮನ ಸೆಳೆದಿದ್ದ ಸಮಂತಾ, ಚೊಚ್ಚಲ ನಿರೂಪಣೆಗೆ ದೊಡ್ಡ ಮೊತ್ತದ ಹಣ ಪಡೆದಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಬಳಿ ಇರುವ ಸಿನಿಮಾಗಳು

  ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾಗೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ಫ್ಯಾಮಿಲಿ ಮ್ಯಾನ್ -2 ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯ ಸಮಂತಾ ಬಹುನಿರೀಕ್ಷೆಯ ಪೌರಾಣಿಕ ಸಿನಿಮಾ ಶಕುಂತಲಂ ಚಿತ್ರ ಅನೌನ್ಸ ಮಾಡಿದ್ದಾರೆ.

  English summary
  Actress Samantha Akkineni completes the Sam Jam season 1 with her husband Naga Chaitanya interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X