10 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ: ನಂ.1 ಸ್ಥಾನದಲ್ಲಿ ನಟಿ ಸಮಂತಾ
ನಟಿ ಸಮಂತಾ ಅಕ್ಕಿನೇನಿ ತೆಲುಗಿನ ಅತ್ಯಂತ ಜನಪ್ರಿಯ ಎನ್ನುವ ಖ್ಯಾತಿ ಗಳಿಸಿದ್ದಾರೆ. ದಕ್ಷಿಣ ಭಾರತೀಯ ಸಿನಿ ಪ್ರೇಕ್ಷಕರ ಕನಸಿನ ರಾಣಿ ಸಮಂತಾ ತೆಲುಗು ಚಿತ್ರರಂಗದ ನೆಚ್ಚಿನ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿರುವ ಸಮಂತಾ ತೆಲುಗಿನ ಪ್ರಸಿದ್ಧ ನಟಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
Recommended Video
ಒರ್ಮ್ಯಾಕ್ಸ್ ಮೀಡಿಯಾ ಬಿಡುಗಡೆ ಮಾಡಿದ ಜನಪ್ರಿಯ 10 ತೆಲುಗು ನಟಿಯರ ಪಟ್ಟಿಯಲ್ಲಿ ಸಮಂತಾ ಹೆಸರು ಮೊದಲ ಸ್ಥಾನದಲ್ಲಿದೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನ ಪಾತ್ರ, ಅದ್ಭುತ ಅಭಿನಯದ ಮೂಲಕ ತನ್ನ ಸಾಮರ್ಥ್ಯ ಸಾಬೀತು ಪಡಿಸುತ್ತಾ ಬಂದಿರುವ ಸಮಂತಾ ಚಿತ್ರರಂಗದಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗಿದೆ.
ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ 33 ವರ್ಷದ ನಟಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇನ್ನೂ ಎರಡನೇ ಸ್ಥಾನದಲ್ಲಿ ನಟಿ ಕಾಜಲ್ ಅಗರವಾಲ್ ಮತ್ತು ಮೂರನೆ ಸ್ಥಾನವನ್ನು ನಟಿ ಅನುಷ್ಕಾ ಶೆಟ್ಟಿ ಪಡೆದಿದ್ದಾರೆ.

ವಿಶೇಷ ಅಂದರೆ ಜನಪ್ರಿಯ 10 ತೆಲುಗು ನಟಿಯರ ಪಟ್ಟಿಯಲ್ಲಿ ಕನ್ನಡದವರಾದ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಸಹ ಸ್ಥಾನ ಪಡೆದಿದ್ದಾರೆ. 5ನೇ ಸ್ಥಾನದಲ್ಲಿ ಪೂಜಾ ಮತ್ತು 6ನೇ ಸ್ಥಾನದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ.

ರಶ್ಮಿಕಾ ನಂತರ ತಮನ್ನಾ, ಕೀರ್ತಿ ಸುರೇಶ್ ನಿತ್ಯಾ ಮೆನನ್ ಮತ್ತು ರಾಶಿ ಕನ್ನ ಇದ್ದಾರೆ. ಮೊದಲ ಸ್ಥಾನ ಪಡೆದಿರುವ ನಟಿ ಸಮಂತಾಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಸಮಂತಾ ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ತಮಿಳಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್ ಸಿರೀಸ್ ನಲ್ಲಿಯೂ ಅಭಿನಯಿಸುತ್ತಿದ್ದಾರೆ.


Click it and Unblock the Notifications











