For Quick Alerts
  ALLOW NOTIFICATIONS  
  For Daily Alerts

  ಕಂಗನಾಗೆ ಸಾಥ್ ನೀಡಿದ ನಟಿ ಸಮಂತಾ; ಬಾಲಿವುಡ್ 'ಕ್ವೀನ್' ಹೇಳಿದ್ದೇನು?

  |

  ಬಾಲಿವುಡ್ ನ ಕಿರಿಕ್ ನಟಿ, ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ಕಂಗನಾ ರಣಾವತ್ ಸದ್ಯ ತಲೈವಿ ಸಿನಿಮಾ ಮೂಲಕ ದೇಶದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷೆಯ ತಲೈವಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಕಂಗನಾ ನಟನೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಇದರ ಬೆನ್ನಲ್ಲೇ ಈಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ವಿಶೇಷ ಎಂದರೆ ತಲೈವಿ ಕಂಗನಾಗೆ ಟಾಲಿವುಡ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಸಾಥ್ ನೀಡಿದ್ದಾರೆ.

  ದಶಕದ ಬಳಿಕ ನನ್ನ ಕನಸಿನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ: ನಟಿ ಸಮಂತಾದಶಕದ ಬಳಿಕ ನನ್ನ ಕನಸಿನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ: ನಟಿ ಸಮಂತಾ

  ತಲೈವಿ ಸಿನಿಮಾದ ಇಲಾ ಇಲಾ..ಹಾಡನ್ನು ಸಮಂತಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇಂದು ಮಧ್ಯಾಹ್ನ (ಏಪ್ರಿಲ್ 2) ಚಿತ್ರದ ಬಹನಿರೀಕ್ಷೆಯ ಹಾಡು ರಿಲೀಸ್ ಆಗಿದ್ದು, ಮೂರು ಭಾಷೆಯಲ್ಲಿ ಬಿಡುಗಡೆಯಾಗಿದೆ. ಅಂದಹಾಗೆ ಸಮಂತಾ ಈ ಮೊದಲು ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  ಇದೀಗ ಹಾಡು ರಿಲೀಸ್ ಮಾಡಿ, ಹಾಡಿ ಹೊಗಳಿದ್ದಾರೆ. ಸಮಂತಾಗೆ ನಟಿ ಕಂಗನಾ ಧನ್ಯವಾದ ತಿಳಿಸಿದ್ದಾರೆ. 'ನನ್ನ ಪ್ರೀತಿಯ ಸಮಂತಾ ಅವರಿಗೆ ತುಂಬಾ ಧನ್ಯವಾದಗಳು' ಎಂದ ಟ್ವೀಟ್ ಮಾಡಿ ಸ್ತ್ರೀವಾದದ ಬಗ್ಗೆ ಬರೆದುಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರವ ಹಾಡಿಗೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಗನಾ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

  ಸರ್ಕಾರದ ನಿರ್ಧಾರಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು? | Filmibeat Kannada

  ಚಿತ್ರಕ್ಕೆ ಜಿ.ವಿ ಪ್ರಕಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾದಲ್ಲಿ ಪ್ರಕಾಶ್ ರೈ, ಅರವಿಂದ್ ಸ್ವಾಮಿ, ಭಾಗ್ಯಶ್ರೀ ಸೇರಿದಂತೆ ದೊಡ್ಡ ತಾರಬಳಗವೇ ಇದೆ. ಸಿನಿಮಾ ಏಪ್ರಿಲ್ 23ಕ್ಕೆ ತೆರೆಗೆ ಬರುತ್ತಿದೆ.

  English summary
  Tollywood Actress Samantha Akkineni unveil Kangana Ranaut's Thalaivi song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X