ಸಮಂತಾ ತಾಯಿಯಾಗಲು ಬಯಸಿದ್ದರು- ಅಚ್ಚರಿ ಸಂಗತಿ ಬಿಚ್ಚಿಟ್ಟ ನೀಲಿಮಾ
ಕಳೆದ ಕೆಲವು ದಿನಗಳಿಂದ ಅತ್ತ ಸೋಶಿಯಲ್ ಮೀಡಿಯಾಗಳಾಗಲಿ ಇತ್ತ ಯುಟ್ಯೂಬ್ ಚಾನಲ್ ಗಳಾಗಲಿ ಒಂದೇ ವಿಷಯದ ಮೇಲೆ ಅವರವರ ದಾಟಿ ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಒಂದೇ ಕಥೆಯನ್ನು ಹಿಡಿದು ಹಲವು ಕಥೆಗಳನ್ನು ಹೆಣೆಯುತ್ತಿದ್ದಾರೆ. ಅದೇ ಚೇತು ಸ್ಯಾಮ್ ವಿಚ್ಛೇದನ!
ನಾಗಚೈತನ್ಯ ಮತ್ತು ಸಮಂತಾ ತಮ್ಮ ವೈವಾಹಿಕ ಜೀವನಕ್ಕೆ ಪೂರ್ಣವಿರಾಮ ಹಾಕಿರುವ ವಿಷಯ ಎಲ್ಲರಿಗೂ ತಿಳಿದಿರುವುದೇ. ವಿಚ್ಛೇದನದ ಸಂಗತಿ ಬಹಿರಂಗಗೊಂಡ ದಿನದಿಂದಲೇ ವಿಶೇಷವಾಗಿ ಸಮಂತಾಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಗುತ್ತಿದೆ. 'ಸ್ಯಾಮ್ ಮಕ್ಕಳನ್ನು ಹೊಂದಲು ಬಯಸುವುದಿಲ್ಲ ಮತ್ತು ಈಗಾಗಲೇ ಎರಡು ಗರ್ಭಪಾತಗಳನ್ನು ಮಾಡಿಸಿಕೊಂಡಿದ್ದಾಳೆ' ಎಂದು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹರಿದಾಡುತ್ತಿದೆ.
ಇವುಗಳ ಬಗ್ಗೆ ಸಮಂತಾ ಗಂಭೀರವಾಗಿಯೇ ಪ್ರತಿಕ್ರಿಯಿಸಿ 'ಕೆಲವರು ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ನನಗೆ ಅನೈತಿಕ ಸಂಬಂಧಗಳು ಇದೆ ಎಂದು, ನಾನು ಅಬಾಷನ್ ಮಾಡಿಸಿಕೊಂಡಿದ್ದೇನೆ. ನಾನು ಅವಕಾಶವಾದಿ ಎಂದು ಹೇಳುತ್ತಿದ್ದಾರೆ. ವಿಚ್ಛೇದನವು ತುಂಬಾ ನೋವಿನಿಂದ ಕೂಡಿದೆ. ಸ್ವಲ್ಪ ಸಮಾಧಾನ ಪಡೆಯಲು ನನ್ನನ್ನು ಬಿಟ್ಟು ಬಿಡಿ 'ಎಂದು ಸ್ಯಾಮ್ ಮನವಿ ಮಾಡಿದರು. ಮುಂದೆ ಓದಿ..

ಸ್ಯಾಮ್ ಮನಸ್ಸಿನ ಇಚ್ಛೆ ಹೇಳಿದ ನೀಲಿಮಾ ಗುಣ
ಏತನ್ಮಧ್ಯೆ 'ಶಕುಂತಲಂ' ನಿರ್ಮಾಪಕಿ ನೀಲಿಮಾ ಗುಣ ಚೇತು-ಸ್ಯಾಮ್ ವಿಚ್ಛೇದನದ ಬಗ್ಗೆ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 'ಸಮಂತಾ ಅವರು ಮಕ್ಕಳನ್ನು ಹೊಂದಲು ಸಿದ್ಧರಾಗಿದ್ದರು' ಎಂದು ಹೇಳುತ್ತಾರೆ, 'ಅಲ್ಲದೆ ಅಲ್ಲಿವರೆಗೂ ಅವರ ನಡುವೆ ಅತ್ಯುತ್ತಮವಾದ ದಾಂಪತ್ಯ ಜೀವನ ಸಾಗಿತ್ತು. ಆದರೆ ಅವರಿಬ್ಬರ ನಡುವೆ ಆಗಸ್ಟ್ ನಲ್ಲಿ ಏನು ಸಂಭವಿಸಿದೆ ಮತ್ತು ಆನಂತರವೇ ಅವರಿಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ' ಅಂತ ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಚೇತು-ಸ್ಯಾಮ್ ವಿಚ್ಛೇದನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹೇಳಿದ್ದಾರೆ.

ಶಕುಂತಲಂ ಚಿತ್ರಕ್ಕೆ ಸಮಂತಾ ಆಯ್ಕೆ ಮಾಡಿದ್ದು ಯಾರು?
ಖ್ಯಾತ ನಿರ್ದೇಶಕ ಗುಣಶೇಖರ್ ನಿರ್ಮಿಸಿ-ನಿರ್ದೇಶಿಸುತ್ತಿರುವ ದುಶ್ಯಂತ-ಶಾಕುಂತಲ ಪ್ರಣಯ ಕಥೆ 'ಶಕುಂತಲಂ'. ತೆಲುಗಿನ ಜೊತೆಗೆ ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ 'ಶಕುಂತಲಂ' ಚಿತ್ರದಲ್ಲಿ ಸಮಂತಾ ಶಕುಂತಲೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ನಿರ್ದೇಶಕ ಗುಣಶೇಖರ್ ಅವರು ಸಮಂತಾಳನ್ನು ಅಪ್ರೋಚ್ ಮಾಡಿದಾಗ ಸಮಂತಾ, ಗುಣಶೇಖರ್ ಅವರಿಗೆ ಹೇಳಿದ ಮಾತುಗಳನ್ನು ಚಿತ್ರದ ನಿರ್ಮಾಪಕಿ ಹಾಗೂ ಗುಣಶೇಖರ್ ಅವರ ಮಗಳು ನೀಲಿಮಾ ಗುಣ ಹೀಗೆ ವಿವರಿಸುತ್ತಾರೆ.

'ಶಕುಂತಲಂ' ಚಿತ್ರತಂಡಕ್ಕೆ ಸಮಂತಾಳ ಕಂಡೀಷನ್
'ಶಕುಂತಲಂ ಚಿತ್ರಕ್ಕಾಗಿ ನನ್ನ ತಂದೆ (ನಿರ್ದೇಶಕ ಗುಣಶೇಖರ್) ಸಮಂತಾ ಅವರನ್ನು ಸಂಪರ್ಕಿಸಿದರು. ಆದಾಗ್ಯೂ, ಅವರು ಈಗಾಗಲೇ ಚಲನಚಿತ್ರಗಳನ್ನು ಮಾಡದಿರಲು ನಿರ್ಧರಿಸಿದ್ದಾರೆ. ತಾನು ಪ್ರಸ್ತುತ ಫ್ಯಾಮಿಲಿ ಪ್ಲಾನಿಂಗ್ ನಲ್ಲಿ ಇದ್ದೇನೆ ಮತ್ತು ಈಗ ಮುಂದೆ ಯಾವುದೇ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, 'ಶಕುಂತಲಂ' ಕಥೆಯನ್ನು ಇಷ್ಟಪಟ್ಟರು ಮತ್ತು ಕೆಲವು ಷರತ್ತುಗಳನ್ನು ಹಾಕಿ ಸಿನಿಮಾದಲ್ಲಿ ನಟಿಸಲು ಸರಿ ಎಂದು ಹೇಳಿದರು.

ಚಿತ್ರೀಕರಣ ಬೇಗ ಮುಗಿಸಲು ಹೇಳಿದ್ದರು
ಅಲ್ಲದೆ ಸಿನಿಮಾ ಚಿತ್ರೀಕರಣವನ್ನು ಬೇಗನೆ ಚಿತ್ರೀಕರಣ ಮುಗಿಸಲು ಹೇಳಿದರು. ಈ ಚಿತ್ರದ ನಂತರ ಸಮಂತಾ ಸಾಕಷ್ಟು ಗ್ಯಾಪ್ ತೆಗೆದುಕೊಳ್ಳಲು ನಿರ್ಧರಿಸಿದರು. ಅವಳು ತಾಯಿಯಾಗಲು ಬಯಸಿದ್ದಳು. ಜುಲೈ ಮತ್ತು ಆಗಸ್ಟ್‌ನಲ್ಲಿ ಶೂಟಿಂಗ್ ಮುಗಿಸಲು ಸ್ಯಾಮ್ ನಮ್ಮನ್ನು ಕೇಳಿದ್ದರಿಂದ, ನಾವು ಸರಿ ಎಂದು ಹೇಳಿದೆವು ಮತ್ತು ಯೋಜಿಸಿದೆವು. ಅವಳು ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡು, ಮಕ್ಕಳನ್ನು ಹೊಂದಲು ಯೋಜಿಸಿದಳು. ಅದು ತನ್ನ ಆದ್ಯತೆಯಾಗಿದೆ ಎಂದು ಸಮಂತಾ ಹೇಳಿದ್ದಳು. ಆದರೆ ಈಗ ಚೇತು-ಸ್ಯಾಮ್‌ಗಳ ಪ್ರತ್ಯೇಕತೆಯು ಆಘಾತಕಾರಿಯಾಗಿದೆ "ಎಂದು ನೀಲಿಮಾ ಆ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











