For Quick Alerts
  ALLOW NOTIFICATIONS  
  For Daily Alerts

  Jr.NTR ಜೊತೆ ಮತ್ತೆ ರೋಮ್ಯಾನ್ಸ್ ಮಾಡುತ್ತಾರಾ ನಟಿ ಸಮಂತಾ?

  |

  ಟಾಲಿವುಡ್ ನ ಸ್ಟಾರ್ ನಟ ಜೂ.ಎನ್ ಟಿ ಆರ್ ಸದ್ಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಈಗ Jr.NTR ಮತ್ತೊಂದು ಸಿನಿಮಾ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, Jr.NTR ಮುಂದಿನ ಸಿನಿಮಾಗೆ ನಿರ್ದೇಶಕ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಇನ್ನು ಟೈಟಲ್ ಫಿಕ್ಸ್ ಆಗದ ಚಿತ್ರಕ್ಕೆ ಸದ್ಯ ಎನ್ ಟಿ ಆರ್ 30 ಎಂದು ಹೆಸರಿಡಲಾಗಿದೆ. ತ್ರಿವಿಕ್ರಮ್ ಮತ್ತು Jr.NTR ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ನಾಯಕಿ ಯಾರಾಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸಮಂತಾ ಅಕ್ಕಿನೇನಿ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!

  ಈ ಮೊದಲು Jr .NTR ಜೊತೆ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆ ನಂತರ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಸಮಂತಾ ಹೆಸರು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಹಾಗಾಗಿ ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಇಬ್ಬರು ಜೂ.ಎನ್ ಟಿ ಆರ್ ಜೊತೆ ಅಭಿನಯಿಸುತ್ತಿದ್ದಾರಂತೆ.

  ಸಮಂತಾ ಮತ್ತು Jr.NTR ಕೊನೆಯದಾಗಿ ಜನತಾ ಗ್ಯಾರೇಜ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಮತ್ತೆ ಈ ಜೋಡಿ ಒಂದಾಗುವ ಸಾಧ್ಯತೆ ಇದೆ. ಅಂದ್ಹಾಗೆ ಸಮಂತಾ ಕೊನೆಯದಾಗಿ 96 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Telugu Actress Samantha Akkineni will heroine to Jr, NTR next NTR30. This movie is directed by Trivikram. Jr NTR

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X