ಸಮಂತಾ ಮನೆಗೆ ಕಳ್ಳತನಕ್ಕೆ ಬಂದ ಅಕ್ಷಯ್ ಕುಮಾರ್!

ವಿಚ್ಛೇಧನದ ಬಳಿಕ ನಟಿ ಸಮಂತಾರ ವೃತ್ತಿಯ ಗ್ರಾಫು ಮೇಲಿಂದ ಮೇಲಕ್ಕೆ ಏರುತ್ತಲೇ ಸಾಗುತ್ತಿದೆ. ಈ ಮೊದಲು ಕೇವಲ ದಕ್ಷಿಣ ಭಾರತದ ಅದರಲ್ಲಿಯೂ ತೆಲುಗು ಸಿನಿಮಾ ರಂಗದ ನಟಿ ಎನಿಸಿಕೊಂಡಿದ್ದ ಸಮಂತಾಗೆ ಈಗ ಬಾಲಿವುಡ್‌ನಲ್ಲೂ ಬೇಡಿಕೆ ಹುಟ್ಟಿದೆ.

ಸಮಂತಾಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಲು ಕಾರಣ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ. ಹಿಂದಿಯ ಈ ಒಂದು ವೆಬ್ ಸರಣಿಯಲ್ಲಿ ನಟಿಸಿದ್ದಷ್ಟೆ ತಡ ಬಾಲಿವುಡ್‌ನಿಂದ ಹಲವು ಅವಕಾಶಗಳು ಸಮಂತಾರನ್ನು ಅರಸಿ ಬಂದಿವೆ. ಆದರೆ ಅಳೆದು-ತೂಗಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಸಮಂತಾ.

ನಟಿ ಸಮಂತಾ, ಶಾರುಖ್ ಖಾನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಸುದ್ದಿ ದೊರಕುವ ಮೊದಲೇ ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಅಕ್ಷಯ್ ಕುಮಾರ್‌ ಜೊತೆ ನಟಿಸಿದ್ದಾರೆ ಸಮಂತಾ. ಆದರೆ ಸಿನಿಮಾದಲ್ಲಿ ಅಲ್ಲ ಬದಲಿಗೆ ಜಾಹೀರಾತಿನಲ್ಲಿ.

ಅಕ್ಷಯ್-ಸಮಂತಾ ಒಟ್ಟಿಗೆ ನಟನೆ

ಅಕ್ಷಯ್-ಸಮಂತಾ ಒಟ್ಟಿಗೆ ನಟನೆ

ಕುರ್‌ ಕುರೆ ತಿನಿಸಿನ ಜಾಹೀರಾತಿನಲ್ಲಿ ನಟ ಅಕ್ಷಯ್ ಕುಮಾರ್ ಹಾಗೂ ಸಮಂತಾ ಒಟ್ಟಿಗೆ ನಟಿಸಿದ್ದಾರೆ. ಹಾಸ್ಯ ಪ್ರಧಾನವಾದ ಈ ಜಾಹೀರಾತಿನಲ್ಲಿ ನಟ ಅಕ್ಷಯ್ ಕುಮಾರ್, ಸಮಂತಾರ ಮನೆಗೆ ಕಳ್ಳತನಕ್ಕೆ ಬರುತ್ತಾರೆ. ಆದರೆ ಅವರನ್ನು ಸಮಂತಾ ಹೇಗೆ ಮೂರ್ಖನನ್ನಾಗಿ ಮಾಡಿ ಪೊಲೀಸರಿಗೆ ಒಪ್ಪಿಸುತ್ತಾರೆ ಎಂಬುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ಜಾಹಿರಾತಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟ ಅಕ್ಷಯ್ ಕುಮಾರ್.

ಜಾಹಿರಾತಿನ ಕತೆ ಏನು?

ಜಾಹಿರಾತಿನ ಕತೆ ಏನು?

ಕಪ್ಪು ಬಟ್ಟೆ ಧರಿಸಿ ಕಳ್ಳತನಕ್ಕೆ ಬರುವ ಅಕ್ಷಯ್ ಕುಮಾರ್ ಮನೆಯಲ್ಲಿ ಕುರ್‌ಕುರೆ ನೋಡಿ ಅದನ್ನು ತಿನ್ನಲು ತೊಡಗುತ್ತಾರೆ. ಅದೇ ವೇಳೆಗೆ ಸಮಂತಾ ಅಲ್ಲಿಗೆ ಬಂದು, ಕುರ್‌ಕುರೆಯನ್ನು ಒಬ್ಬರೇ ತಿನ್ನಬಹುದಾ? ಎಂದು ಪ್ರಶ್ನೆ ಮಾಡುತ್ತಾ ತಾವೂ ಒಂದು ಕುರ್‌ಕುರೆ ತಿಂದು ಉಳಿದದ್ದನ್ನು ಅಕ್ಷಯ್ ಕುಮಾರ್‌ಗೆ ನೀಡುತ್ತಾರೆ. ಅಕ್ಷಯ್ ಕುಮಾರ್ ತಾವು ಕಳ್ಳತನಕ್ಕೆ ಬಂದಿರುವುದನ್ನೂ ಮರೆತು ಕುರ್‌ಕುರೆ ತಿನ್ನುವುದರಲ್ಲಿ ನಿರತರಾಗುತ್ತಾರೆ. ಕುರ್‌ಕುರೆ ಪ್ಯಾಕೆಟ್ ತಿನ್ನುವುದು ಮುಗಿಸಿ ಹೊರಡುತ್ತೇನೆಂದು ಅಕ್ಷಯ್ ಕುಮಾರ್ ಕೈಮುಗಿದಾಗ, ಇರಿ ನಿಮಗಾಗಿ ಕಾರು ತರಿಸಿದ್ದೇನೆ ಎನ್ನುತ್ತಾರೆ ಸಮಂತಾ. ಇದನ್ನು ಕೇಳಿ ಅಕ್ಷಯ್ ಖುಷಿಯಾಗುತ್ತಾರೆ. ಆಗ ಬರುತ್ತದೆ ಟ್ವಿಸ್ಟ್, ಸಮಂತಾ ಕರೆಸಿದ್ದು ಮಾಮೂಲಿ ವಾಹನವಲ್ಲ ಬದಲಿಗೆ ಪೊಲೀಸ್ ವಾಹನ!

ಇಂಗ್ಲೀಷ್ ಸಿನಿಮಾದಲ್ಲಿ ಸಮಂತಾ

ಇಂಗ್ಲೀಷ್ ಸಿನಿಮಾದಲ್ಲಿ ಸಮಂತಾ

ನಟಿ ಸಮಂತಾ ಈ ಹಿಂದೆ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ ಆದರೆ ಬಾಲಿವುಡ್ ಸ್ಟಾರ್ ನಟರೊಂದಿಗೆ ನಟಿಸುತ್ತಿರುವುದು ಇದೇ ಮೊದಲು. ಇದೀಗ ಶಾರುಖ್ ಖಾನ್ ನಟಿಸುತ್ತಿರುವ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾವನ್ನು ತಮಿಳಿನ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಸಮಂತಾ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಭಾಫ್ಟಾ ಪ್ರಶಸ್ತಿ ವಿಜೇತ ಹಾಲಿವುಡ್ ನಿರ್ದೇಶಕ ಫಿಲಿಪ್ ಜೋನ್ಸ್ ನಿರ್ದೇಶನದ 'ದಿ ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿ ದ್ವಿಲಿಂಗಿ ಪಾತ್ರದಲ್ಲಿ (ಬೈಸೆಕ್ಷ್ಯುಲ್) ನಟಿಸಲಿದ್ದಾರೆ. ಇದು ಬಹಳ ಬೋಲ್ಡ್ ಆದ ಪಾತ್ರ ಎನ್ನಲಾಗುತ್ತಿದೆ.

ಹಿಟ್ ಆದ ಐಟಂ ಹಾಡು

ಹಿಟ್ ಆದ ಐಟಂ ಹಾಡು

ಇನ್ನುಳಿದಂತೆ ನಟಿ ಸಮಂತಾಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ದೊಡ್ಡ ಆಫರ್ ಒಂದನ್ನು ನೀಡಿದ್ದಾರೆ. ತಾಪ್ಸಿ ಪನ್ನು ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ. ಇದನ್ನು ಹೊರತುಪಡಿಸಿದರೆ ಸಮಂತಾ ಪ್ರಸ್ತುತ 'ಶಾಕುಂತಲಂ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಸಹ ನಟಿಸುತ್ತಿದ್ದಾರೆ. ಬಳಿಕ ಹರಿಶಂಕರ್ ನಿರ್ದೇಶನದ ಯಶೋಧ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ 'ಪುಷ್ಪ' ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು, ಹಾಡು ಬಹಳ ವೈರಲ್ ಆಗಿದೆ. ಯೂಟ್ಯೂಬ್‌ನಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಾಡುಗಳಲ್ಲಿ ಒಂದು ಎಂಬ ಖ್ಯಾತಿಗೆ ಹಾಡು ಪಾತ್ರವಾಗಿದೆ. 'ಪುಷ್ಪ'ನಲ್ಲೂ ಸಮಂತಾ ಐಟಂ ಹಾಡು ಇರಲಿದೆ ಎನ್ನಲಾಗುತ್ತಿದೆ.

More from Filmibeat

English summary
Actress Samantha and Akshay Kumar acted in Kur Kure advertisement. Akshay posted video on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X