Samantha: ಮತ್ತೆ ಸಮಂತಾ -ನಾಗಚೈತನ್ಯ ಒಂದಾಗ್ತಾರಂತೆ!

ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಸ್ಟಾರ್ ದಂಪತಿ ತಮ್ಮ ‌ವೈವಾಹಿಕ ಜೀವನಕ್ಕೆ ತೆರೆ ಎಳೆದಿದ್ದಾರೆ. ವಿಚ್ಛೇದನ ಪಡೆದು ದೂರ ಆಗಿದ್ದಾರೆ. ವಿಚ್ಛೇದನ ಆದಾಗಿನಿಂದಲೂ ಇವರ ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬಿವೆ‌.‌ ಈಗ ಮತ್ತೊಂದು ಸುದ್ದಿ ಹಬ್ಬಿದ್ದು ಈ ಜೋಡಿ ಒಂದಾಗಲಿದೆ ಎನ್ನಲಾಗುತ್ತಿದೆ.

ಹೌದು ಸಮಂತಾ ಹಾಗೂ ನಾಗಚೈತನ್ಯ ಒಂದಾಗಲಿದ್ದಾರಂತೆ. ಆದರೆ ಅದು ಸಿನಿಮಾಗಾಗಿ.‌ ಚಿತ್ರದಲ್ಲಿ ಈ ಜೋಡಿ ಮತ್ತೆ ಜೊತೆಯಾಗಿ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ತೆಲುಗು ನಿರ್ದೇಶಕಿ ನಂದಿನಿ ರೆಡ್ಡಿ, ಸಮಂತಾ ಹಾಗೂ ನಾಗ ಚೈತನ್ಯಗೆ ಅವರು ಆಪ್ತರು. ಈ ಹಿಂದೆ ನಂದಿನಿ ರೆಡ್ಡಿ ನಿರ್ದೇಶಿಸಿದ್ದ 'ಓ ಬೇಬಿ' ದೊಡ್ಡ ಹಿಟ್ ಆಗಿತ್ತು. ಅದರಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಆ ಚಿತ್ರದ ಸಂದರ್ಭದಲ್ಲೇ ನಾಗಚೈತನ್ಯ ಹಾಗೂ ಸಮಂತಾಗೆ ಕಥೆಯೊಂದನ್ನು ನಂದಿನಿ ಹೇಳಿದ್ದರಂತೆ. ಹೊಸ ಕಥೆಗೆ ಸಂಬಂಧಪಟ್ಟಂತೆ ಸಮಂತಾ ಹಾಗೂ ನಾಗಚೈತನ್ಯರನ್ನು ತೆರೆಯ ಮೇಲೆ ಒಂದಾಗಿಸಲು ನಂದಿನಿ ರೆಡ್ಡಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮಂತ ನಾಗಚೈತನ್ಯ ಒಟ್ಟಿಗೆ ನಟಿಸುವುದು ಅನುಮಾನ!

ಸಮಂತ ನಾಗಚೈತನ್ಯ ಒಟ್ಟಿಗೆ ನಟಿಸುವುದು ಅನುಮಾನ!

ಸಮಂತಾ ಮತ್ತು ನಾಗ ಚೈತನ್ಯ ಒಟ್ಟಿಗೆ ನಟಿಸುತ್ತಾರೆ ಎಂದು ಚರ್ಚೆಯಾಗುತ್ತಿರೋ ಈ ವಿಚಾರ ಸತ್ಯ ಆಗುವುದು ಅನುಮಾನ. ಕಾರಣ, ಸಮಂತಾಗೆ ಆಪ್ತರಾಗಿರುವ ನಂದಿನಿ ರೆಡ್ಡಿ ಮತ್ತೆ ಸಮಂತಾ ಹಾಗೂ ನಾಗಚೈತನ್ಯರನ್ನು ತೆರೆಯ ಮೇಲೆ ತರುವುದು ಅನುಮಾನ. ಇಬ್ಬರಿಗೂ ಆಪ್ತರಾಗಿರು ಕಾರಣ ಅವರ ವಿಚ್ಛೆದನದ ಬಳಿಕವೂ ಒಟ್ಟಿಗೆ ಸಿನಿಮಾ ಮಾಡಲು ಒಪ್ಪಿಸುವುದು ಅನುಮಾನ. ಇನ್ನು ಇದನ್ನು ಸಮಂತಾ ಆಗಲಿ, ನಾಗಚೈತನ್ಯ ಆಗಲಿ ಒಪ್ಪುವ ಸಾಧ್ಯತೆ ಕಡಿಮೆ.‌

ಸಮಂತಾ ಅಥವಾ ನಾಗ ಚೈತನ್ಯ ಒಬ್ಬರ ಅಭಿನಯ!

ಸಮಂತಾ ಅಥವಾ ನಾಗ ಚೈತನ್ಯ ಒಬ್ಬರ ಅಭಿನಯ!

ನಂದಿನಿ ರೆಡ್ಡಿ ನಿರ್ದೇಶನದ ಈ‌ ಚಿತ್ರದಲ್ಲಿ, ನಾಗ ಚೈತನ್ಯ ಅಥವಾ ಸಮಂತಾ ಇಬ್ಬರಲ್ಲಿ ಒಬ್ಬರು ಮಾತ್ರವೇ ಇರಲಿದ್ದಾರೆ. ಈಗಾಗಲೇ ನಂದಿನಿ ರೆಡ್ಡಿ ತಮ್ಮ ಚಿತ್ರಕ್ಕೆ ಹೊಸ ಕಲಾವಿದರನ್ನು ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ನಂದಿನಿ ರೆಡ್ಡಿ ಹೊಸ ಚಿತ್ರದ ಬಗ್ಗೆ ಹಾಗೂ ಪಾತ್ರದ ಬಗ್ಗೆ ಅಧಿಕೃತ ಘೋಷಣೆಗಳು ಇನ್ನಷ್ಟೇ ಆಗಬೇಕಿದೆ. ಹೀಗಾಗಿ ಸದ್ಯಕ್ಕಂತೂ ಸ್ಯಾಮ್ ಹಾಗೂ ನಾಗ ಚೈತನ್ಯ ತೆರೆಯ ಮೇಲೆ ಒಂದಾಗುವುದು ಬಹುತೇಕ ಅನುಮಾನ

ಸಾಲು, ಸಾಲು ಚಿತ್ರಗಳಲ್ಲಿ ಸಮಂತಾ ಬ್ಯುಸಿ!

ಸಾಲು, ಸಾಲು ಚಿತ್ರಗಳಲ್ಲಿ ಸಮಂತಾ ಬ್ಯುಸಿ!

ವಿಚ್ಛೇದನದ ನಂತರ‌ ಸಮಂತಾ ಮೊದಲಿಗಿಂತಲೂ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. 'ಪುಷ್ಪ' ಚಿತ್ರದ ಐಟಂ ಸಾಂಗ್​ನಲ್ಲಿ ನಟಿ ಹೆಜ್ಜೆ ಹಾಕಿದ್ದರು. ಇದು ಸಮಂತಾಗೆ ಅಪಾರ ಖ್ಯಾತಿ ತಂದುಕೊಟ್ಟಿತ್ತು. ಜೊತೆಗೆ ಮತ್ತೊಂದು ವೆಬ್​ ಸೀರೀಸ್​ನಲ್ಲಿ ನಟಿಸುತ್ತಿದ್ದಾರೆ. ಇಂಗ್ಲಿಷ್ ಚಿತ್ರವೊಂದರಲ್ಲೂ ನಟಿ ಬಣ್ಣಹಚ್ಚಲಿದ್ದಾರೆ. ಹಾಗೆ ತಮಿಳು ,ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Recommended Video

KGF 2 ತಂಡದ ಮೇಲೆ ಕನ್ನಡಪರ ಸಂಘಟನೆಗಳ ಅಸಮಾಧಾನ ಯಾಕೆ ಗೊತ್ತಾ? | Yash
ಬಾಲಿವುಡ್‌ಗೆ ನಾಗ ಚೈತನ್ಯ ಎಂಟ್ರಿ!

ಬಾಲಿವುಡ್‌ಗೆ ನಾಗ ಚೈತನ್ಯ ಎಂಟ್ರಿ!

ನಾಗ ಚೈತನ್ಯ ಕೂಡ ವಿಚ್ಛೇದನದ ಬಳಿಕ ಹೆಚ್ಚು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಪ್ರವೇಶಕ್ಕೂ ಕೂಡ ನಾಗ ಚೈತನ್ಯ ಅಣಿಯಾಗಿದ್ದಾರೆ. ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್​ನಲ್ಲೂ ನಾಗ ಚೈತನ್ಯ ಕೆಲವು ಚಿತ್ರಗಳಲ್ಲಿ ನಾಗಚೈತನ್ಯ ಬ್ಯುಸಿಯಾಗಿದ್ದಾರೆ.

More from Filmibeat

English summary
Samantha and Naga Chaitanya coming together for new movie, known more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X