ಡಿವೋರ್ಸ್ ಬಳಿಕ ಮತ್ತೆ ಒಟ್ಟಿಗೆ ತೆರೆಮೇಲೆ ಚೈತು- ಸಮಂತಾ; ಮುಹೂರ್ತ ಫಿಕ್ಸ್

ತೆಲುಗು ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಒಪ್ಪಿ ಡಿವೋರ್ಸ್ ಪಡೆದಿದ್ದರು. ನಾಗಚೈತನ್ಯಾ ಈಗಾಗಲೇ 2ನೇ ಮದುವೆ ಸಹ ಆಗಿಬಿಟ್ಟಿದ್ದಾರೆ. ಸಮಂತಾ ಕೂಡ ಮತ್ತೆ ಮದುವೆ ಆಗ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದರ ಚೈ-ಸ್ಯಾಮ್ ಮತ್ತೆ ತೆರೆಮೇಲೆ ಬರ್ತಿದ್ದಾರೆ.

15 ವರ್ಷಗಳ ಹಿಂದೆ 'ಯೇ ಮಾಯ ಚೆಸಾವೆ' ಸಿನಿಮಾ ತೆರೆಗೆ ಬಂದಿತ್ತು. ಅದೇ ಚಿತ್ರದಲ್ಲಿ ಚೈತು- ಸ್ಯಾಮ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಚಿತ್ರೀಕರಣದ ವೇಳೆ ಶುರುವಾದ ಸ್ನೇಹ ಬಹಳ ಬೇಗ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಎರಡ್ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 7 ವರ್ಷಗಳ ಕಾಲ ಪ್ರೀತಿಸಿದ ಜೋಡಿ 2017ರಲ್ಲಿ ಹಸೆಮಣೆ ಏರಿದ್ದರು. ಗೋವಾದಲ್ಲಿ ಡೆಸ್ಟಿನೇಷನ್ ಮ್ಯಾರೇಜ್ ನಡೆದಿತ್ತು.

Samantha and Naga Chaitanya s Iconic Love Story Ye Maaya Chesave Set for Re-Release After 15 Years

ಮದುವೆ ಬಳಿಕ ಕೂಡ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. 2021ರಲ್ಲಿ ಅಂದರೆ ಮದುವೆ ಆಗಿ 4 ವರ್ಷಗಳ ಬಳಿಕ ಇಬ್ಬರೂ ದೂರಾಗುತ್ತಾರೆ ಎನ್ನುವ ಊಹಾಪೋಹ ಶುರುವಾಯಿತು. ಆರಂಭದಲ್ಲಿ ಇದು ವದಂತಿ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಒಂದು ದಿನ ಅದು ನಿಜ ಎಂದು ಸಾಬೀತಾಯಿತು. ಇಬ್ಬರ ಪರಸ್ಪರ ಒಪ್ಪಿ ಡಿವೋರ್ಸ್ ಪಡೆದಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆಗತಾನೆ ಹನಿಮೂನ್‌ಗೆ ಹೋಗಿಬಂದ ಜೋಡಿ ರೀತಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಚೈ-ಸ್ಯಾಮ್ ದೂರಾಗುತ್ತಾರೆ ಎಂದು ಅಭಿಮಾನಿಗಳು ಊಹಿಸಿರಲಿಲ್ಲ.

ಡಿವೋರ್ಸ್ ಬಳಿಕ ಸಮಂತಾ ತಮ್ಮ ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ಅಷ್ಟರಲ್ಲೇ ಮಯೋಸೈಟಿಸ್ ಸಮಸ್ಯೆಗೆ ತುತ್ತಾಗಿದ್ದರು. ಅದರಿಂದ ಹೊರಬರಲು ಹೋರಾಟ ನಡೆಸಿದ್ದರು. ಅತ್ತ ನಾಗಚೈತನ್ಯ ನಟಿ ಶೋಬಿತಾ ದುಲಿಪಾಲ ಪ್ರೀತಿಲಿ ಬಿದ್ದರು. ಕಳೆದ ವರ್ಷ ಇಬ್ಬರೂ ಮದುವೆ ಆಗಿದ್ದಾರೆ. ಇನ್ನು ನಿರ್ದೇಶಕ ರಾಜ್ ನಿಡುಮುರಿ ಜೊತೆ ಸ್ಯಾಮ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹರಡಿದೆ.

ಡಿವೋರ್ಸ್ ಬಳಿಕ ಚೈತು ಹಾಗೂ ಸಮಂತಾ ಮತ್ತೆ ಒಟ್ಟಿಗೆ ನಟಿಸಲಿಲ್ಲ. ಇಬ್ಬರೂ ಜೊತೆಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದರೂ ನಿಜವಾಗಲಿಲ್ಲ. ಇದೀಗ ಇಬ್ಬರೂ ಮತ್ತೆ ಒಟ್ಟಿಗೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಆದರೆ ಹೊಸ ಸಿನಿಮಾದಲ್ಲಿ ಅಲ್ಲ. ಬದಲಿಗೆ 'ಯೇ ಮಾಯ ಚೆಸಾವೆ' ಮೂಲಕ. ಹೌದು ಈ ಸಿನಿಮಾ ರೀ-ರಿಲೀಸ್‌ಗೆ ಸಜ್ಜಾಗಿದೆ. ಜುಲೈ 18ಕ್ಕೆ ಸಿನಿಮಾ ಮತ್ತೆ ತೆರೆಗೆ ಬರಲಿದೆ.

Samantha and Naga Chaitanya s Iconic Love Story Ye Maaya Chesave Set for Re-Release After 15 Years

ಹಳೇ ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡುವ ಟ್ರೆಂಡ್ ಸೌತ್ ಸಿನಿದುನಿಯಾದಲ್ಲಿ ಜೋರಾಗಿದೆ. ಇದೀಗ ಅದೇ ರೀತಿ 'ಯೇ ಮಾಯ ಚೆಸಾವೆ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೀತಿದೆ. ಚಿತ್ರದ ಪ್ರಚಾರದಲ್ಲಿ ಚೈ-ಸ್ಯಾಮ್ ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಕಾರ್ತಿಕ್- ಜೆಸ್ಸಿ ಪ್ರೇಮ್ ಕಹಾನಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

15 ವರ್ಷಗಳ ಹಿಂದೆ 10 ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಿದ್ದ ಈ ರೊಮ್ಯಾಂಟಿಕ್ ಸಿನಿಮಾ 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇವತ್ತಿಗೂ ಅಭಿಮಾನಿಗಳ ಫೇವರಿಟ್ ಅನ್ನಿಸಿದೆ. ಈ ಸಿನಿಮಾ ಮರುಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

More from Filmibeat

English summary
Naga Chaitanya and Samantha's beloved romantic film 'Ye Maaya Chesave' is re-releasing on July 18
Read more about: tollywood naga chaitanya samantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X