ಆಕ್ಟಿಂಗ್ ಅಲ್ಲ, ರಿಯಾಲಿಟಿ ಶೋನೂ ಅಲ್ಲ...ಸಮಂತಾ ದಂಪತಿಯ ಹೊಸ ಪ್ಲಾನ್
ಟಾಲಿವುಡ್ ನಟಿ ಸಮಂತಾ ಮದುವೆ ಆದ್ಮೇಲೆಯೂ ಬೇಡಿಕೆ ನಟಿಯಾಗಿ ಉಳಿದುಕೊಂಡಿದ್ದಾರೆ. ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ. ಮತ್ತೊಂದೆಡೆ ಸಮಂತಾ ಪತಿ ನಾಗಚೈತನ್ಯ ಕೂಡ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಸತತ ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾ ಕಿರುತೆರೆಗೆ ಲಗ್ಗೆಯಿಡಲಿದ್ದಾರೆ ಎಂಬ ಸುದ್ದಿ ಫಿಲಂ ನಗರಿಯಲ್ಲಿ ಸದ್ದು ಮಾಡಿದೆ. ರಿಯಾಲಿಟಿ ಕಾರ್ಯಕ್ರಮವೊಂದನ್ನು ಸಮಂತಾ ನಿರೂಪಣೆ ಮಾಡಲು ಸಜ್ಜಾಗಿದ್ದಾರಂತೆ. ಈ ನಡುವೆ ಸಮಂತಾ ದಂಪತಿಯಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಏನದು? ಮುಂದೆ ಓದಿ...

ಸ್ವಂತ ನಿರ್ಮಾಣ ಸಂಸ್ಥೆ
ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಅಕ್ಕಿನೇನಿ ದಂಪತಿ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಲು ಯೋಜಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್ನಲ್ಲಿ ಕೇಳಿಬರ್ತಿದೆ. ಈ ಸಂಸ್ಥೆಯನ್ನು ಸಮಂತಾ ಮುನ್ನಡೆಸಲಿದ್ದಾರಂತೆ.

ಹೊಸಬರನ್ನು ಪ್ರೋತ್ಸಾಹಿಸುವ ಉದ್ದೇಶ
ಸಮಂತಾ ಮತ್ತು ನಾಗಚೈತನ್ಯ ದಂಪತಿ ಸ್ಥಾಪಿಸಲಿರುವ ನಿರ್ಮಾಣ ಸಂಸ್ಥೆಯಲ್ಲಿ ಕೆಲವು ಹೊಸ ಕಲಾವಿದರನ್ನು ಪರಿಚಯಿಸುವ ಉದ್ದೇಶ ಹೊಂದಿದ್ದಾರಂತೆ. ಹೊಸ ನಿರ್ದೇಶಕ, ಕಲಾವಿದರ ಜೊತೆ ಸಿನಿಮಾ ಮಾಡಲು ತೀರ್ಮಾನಿಸಲಿದ್ದಾರೆ.

ನಾಗಾರ್ಜುನ ಬ್ಯಾನರ್ ಇದೆ
ಸದ್ಯಕ್ಕೆ ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರ ಸ್ವಂತ ಬ್ಯಾನರ್ ಹೊಂದಿದ್ದಾರೆ. 'ಅನುಪಮಾ ಪ್ರೊಡಕ್ಷನ್' ಅಡಿಯಲ್ಲಿ ನಾಗಾರ್ಜುನ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈಗ ಮಗ ಮತ್ತು ಸೊಸೆ ಇನ್ನೊಂದು ಬ್ಯಾನರ್ ಸ್ಥಾಪಿಸಲು ಮುಂದಾಗಿದ್ದಾರೆ.

ರಿಲೀಸ್ ಗೆ ರೆಡಿ 'ಲವ್ ಸ್ಟೋರಿ'
ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಮೊದಲ ಸಲ ನಾಗ್ ಮತ್ತು ಸಾಯಿ ಪಲ್ಲವಿ ಸ್ಕ್ರೀನ್ ಶೇರ್ ಮಾಡಿರುವುದರಿಂದ ಈ ಸಿನಿಮಾ ಕುತೂಹಲ ಹೆಚ್ಚಿಸಿದೆ.


Click it and Unblock the Notifications











