ಸಲ್ಮಾನ್ ಖಾನ್‌ ಚಿತ್ರಕ್ಕಾಗಿ ಸಮಂತಾ, ರಶ್ಮಿಕಾ ಪೈಪೋಟಿ!

'ಕಿರಿಕ್ ಪಾರ್ಟಿ' ಮೂಲಕ ಸಿನಿಮಾರಂಗಕ್ಕೆ ಬಂದ ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್‌ನಲ್ಲೂ ಕೂಡ ರಶ್ಮಿಕಾಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ನಲ್ಲಿ ರಶ್ಮಿಕಾ ಸಾಲು, ಸಾಲು ಸಿನಿಮಾ ಮಾಡುತ್ತಿದ್ದಾರೆ.

ಸಿನಿಮಾ ಮಾಡೋದಷ್ಟೇ ಅಲ್ಲ, ದೊಡ್ಡ ನಟಿಯರಿಗೆ ರಶ್ಮಿಕಾ ಸವಾಲು ಹಾಕುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಸಮಂತಾ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿದೆ. ಅದು ಬಾಲಿವುಡ್‌ ಬಿಗ್ ಸ್ಟಾರ್ ಸಿನಿಮಾಗಾಗಿ. ಹೀಗಂತಾ ಬಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ ಮತ್ತು ಸಮಂತಾ ನಡುವೆ ಪೈ ಪೋಟಿ ಶುರುವಾಗಿದೆಯಂತೆ. ಅದು ಯಾವ ಸಿನಿಮಾಗಾಗಿ, ಅಷ್ಟಕ್ಕೂ ಸಲ್ಲು ಜೊತೆಗೆ ನಟಿಸಲು ಈ ನಟಿಯರಿಗೆ ಆಫರ್ ಬಂದಿದೆಯಾ ಎನ್ನುವ ಬಗ್ಗೆ ಮುಂದೆ ಓದಿ.

ರಶ್ಮಿಕಾಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ!

ರಶ್ಮಿಕಾಗೆ ಬಾಲಿವುಡ್‌ನಲ್ಲಿ ಭಾರಿ ಬೇಡಿಕೆ!

ನಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾರಂಗದಲ್ಲಿ ಸಾಕಷ್ಟು ಸದ್ದು ಮಾಡಿದ ಬಳಿಕ, ಈಗ ಬಾಲಿವುಡ್‌ನಲ್ಲೂ ಛಾಪು ಮೂಡಿಸಲು ಮುಂದಾಗಿದ್ದಾರೆ. ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳು ರಿಲೀಸ್‌ಗೆ ರೆಡಿ ಇದ್ದು, ಮತ್ತೊಮ್ಮ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆಗೂ ರಶ್ಮಿಕಾ ಮಂದಣ್ಣ 'ಅನಿಮಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಜೊತೆಗೆ ನಟಿಸಲಿದ್ದಾರೆ ಎನ್ನುವ ಸುದ್ದಿ ಬಂದಿದೆ.

ಸಮಂತಾ ಮೊದಲ ಬಾಲಿವುಡ್ ಸಿನಿಮಾ!

ಸಮಂತಾ ಮೊದಲ ಬಾಲಿವುಡ್ ಸಿನಿಮಾ!

ಇನ್ನು ಸಮಂತಾ ಬಗ್ಗೆ ಹೇಳುವುದಾದರೆ. 'ಪುಷ್ಪ' ಸಿನಿಮಾದ ನಂತರ ಸಮಂತಾಗೂ ಬೇಡಿಕೆ ಹೆಚ್ಚಿದೆ. ಸಮಂತಾಗೆ ಬಾಲಿವುಡ್‌ನಿಂದ ದೊಡ್ಡ ಆಫರ್‌ಗಳು ಬಂದಿವೆ. ಸದ್ಯದಲ್ಲೇ ಸಿನಿಮಾನೂ ಅನೌನ್ಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಇನ್ನು ಸಮಂತಾ, ಬಾಲಿವುಡ್ ಮೊದಲ ಸಿನಿಮಾ ಬಗ್ಗೆ ಮಾಹಿತಿ ಬಂದಿಲ್ಲ. ಆದರೂ, ಸಲ್ಮಾನ್ ಖಾನ್ ಜೊತೆಗೆ ಮೊದಲ ಬಾರಿಗೆ ನಟಿಸಲಿದ್ದಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ, ಸಮಂತಾ!

ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ, ಸಮಂತಾ!

ನಟಿ ಸಮಂತಾ ಮತ್ತು ರಶ್ಮಿಕಾ ಮಂದಣ್ಣ ಹೆಸರು ಒಂದೇ ಸಿನಿಮಾಗಾಗಿ ಕೇಳಿ ಬರ್ತಿದೆ. ಸಲ್ಮಾನ್ ಖಾನ್ ಮುಂದಿನ ಸಿನಿಮಾ 'ನೋ ಎಂಟ್ರಿ 2', ಚಿತ್ರದಲ್ಲಿ ನಾಯಕಿ ಯಾರು ಎನ್ನುವ ಪ್ರಶ್ನೆ ಎದ್ದಿದೆ. ಉತ್ತರವಾಗಿ ಸಮಂತಾ ಮತ್ತು ರಶ್ಮಿಕಾ ಹೆಸರು ಕೇಳಿ ಬಂದಿದೆ. ಈಗಾಗಲೇ ಪೂಜಾ ಹೆಗ್ಡೆ ಸಲ್ಲು ಜೊತೆ 'ಕಬಿ ಈದ್ ಕಬಿ ದಿವಾಲಿ' ಚಿತ್ರದಲ್ಲಿ ನಟಿಸಿದ್ದು, ದಕ್ಷಿಣದ ನಟಿಯರಿಗೆ ಬೇಡಿಕೆ ಹೆಚ್ಚಿದೆ.

'ನೋ ಎಂಟ್ರಿ' ಸೀಕ್ವೆಲ್!

'ನೋ ಎಂಟ್ರಿ' ಸೀಕ್ವೆಲ್!

'ನೋ ಎಂಟ್ರಿ 2' ಸಿನಿಮಾ ಈ ಹಿಂದೆ ಬಾಲಿವುಡ್‌ನಲ್ಲಿ ಬಂದ 'ನೋ ಎಂಟ್ರಿ' ಚಿತ್ರದ ಸೀಕ್ವೆಲ್. ಈ ಸಿನಿಮಾ 2005ರಲ್ಲಿ ಹಿಟ್ ಲಿಸ್ಟ್ ಸೇರಿತ್ತು. ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಅನಿಲ್ ಕಪೂರ್, ಲಾರಾ ದತ್ತ, ಇಶಾ ಡಿಯೋಲ್ ನಟಿಸಿದ್ದರು. ಈಗ ಬರ್ತಿರುವ ಸೀಕ್ವೆಲ್ ಮೇಲೂ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Samantha And Rashmika Mandanna in Race For Salman Khan Film, Who Will Get The Chance, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X