Samantha Bollywood Entry: ಸಮಂತಾ ಸೌತ್ ಚಿತ್ರಗಳಿಂದ ಬಾಲಿವುಡ್‌ ಚಿತ್ರಗಳಿಗೆ ಅಡಚಣೆ!

ನಟಿ ಸಮಂತಾ ಸಿನಿಮಾಗಳಿಗಿಂತಗಳು ಹೆಚ್ಚಾಗಿ ಸುದ್ದಿ ಆಗುವುದು ವಿವಾದಗಳಿಂದಲೆ. ವಿಚ್ಛೇದನದ ಬಳಿಕ ಸಮಂತಾ ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ಸಮಂತಾ ಒಪ್ಪಿಕೊಳ್ಳುತ್ತಾ ಇದ್ದಾರೆ. ಸೌತ್ ಮಾತ್ರವೇ ಅಲ್ಲ, ಈಗ ಹಾಲಿವುಡ್, ಬಾಲಿವುಡ್ ಚಿತ್ರಗಳಲ್ಲಿಯೂ ಸಮಂತಾ ಅಭಿನಯಿಸುತ್ತಿದ್ದಾರೆ.

ಆದರೆ ಸದ್ಯ ಸಮಂತಾ ಮೂಡ್ ಸ್ವಿಂಗ್ ಬಗ್ಗೆ ಚರ್ಚೆ ಆಗುತ್ತಿದೆ. ಅಂದರೆ ಸಮಂತಾ ಒಮ್ಮೆ ಇರುವ ಹಾಗೆ ಇನ್ನೊಮ್ಮೆ ಇರುವುದಿಲ್ಲವಂತೆ. ಸಿನಿಮಾಗೆ ಸಂಬಂಧ ಪಟ್ಟ ವಿಚಾರಗಳಲ್ಲಿ ಸಾಕಷ್ಟು ಬಾರಿ ನಿರ್ಧಾರಗಳಲ್ಲಿ ಬದಲಿಸುತ್ತಾರಂತೆ. ಹಾಗಾಗಿ ಸಮಂತಾ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗೆ ಮಾಡಿದರೆ ಬಾಲಿವುಡ್‌ನಲ್ಲಿ ಸಮಂತಾ ಸಿನಿಮಾ ಜರ್ನಿ ಕಷ್ಟಕರ ಎನ್ನಲಾಗುತ್ತಿದೆ.

ಸದ್ಯ ಸಮಂತಾ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಆದರೆ ಬಾಲಿವುಡ್ ಚಿತ್ರಗಳ ಕೆಲಸಗಳಿಗೆ ಸಮಂತಾ ಕಡಿಮೆ ಸಮಯ ನೀಡುತ್ತಿದ್ದಾರಂತೆ. ಹಾಗಾಗಿ ಸಿನಿಮಾದ ಕೆಲಸಗಳು ತಡವಾಗುತ್ತಿದೆಯಂತೆ. ಅದಕ್ಕೆ ಕಾರಣ ಸಮಂತಾ ಎಂದು ದೂರುಗಳು ಹಬ್ಬಿವೆ.

Samantha Bollywood Journey Becomes Critical

ಮುಂಬೈನಲ್ಲಿ ಆಯೋಜನೆ ಮಾಡಿದ್ದ ಹಲವು ಕಾರ್ಯಕ್ರಮಗಳಿಗೆ ನಟಿ ಸಮಂತಾ ಗೈರಾಗಿದ್ದಾರಂತೆ. ಸಿನಿಮಾ ಸ್ಕ್ರಿಪ್ಟ್‌ಗೆ ಸಂಬಂದಪಟ್ಟ ಕೆಲಸಗಳಿಗೆ ಹಾಜರಾಗಲೂ ಕೂಡ ಸಮಂತಾ ಹಿಂದೇಟು ಹಾಕುತ್ತಿದ್ದಾರಂತೆ. ಸದ್ಯ ಬಾಲಿವುಡ್‌ನಲ್ಲಿ ಹಬ್ಬಿರುವ ವದಂತಿಗಳ ಪ್ರಕಾರ, ಸಮಂತಾ ಮುಂಬೈನಲ್ಲಿ ಆಯೋಜಿಸಲಾಗಿದ್ದ ಹಲವು ಸಭೆಗಳು ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸೇರಿಸಂತೆ ಹಲವು, ಕಾರ್ಯಕ್ರಮಗಳಲ್ಲಿ ಭಾಗಿ ಆಗಬೇಕಿತ್ತಂತೆ. ಆದರೆ ಸಮಂತಾ ಮಾತ್ರ ಇದೆಲ್ಲಕ್ಕೂ ಹಾಜರಿ ಹಾಕಿಲ್ಲವಂತೆ.

ಹಾಗಾಗಿ ಸಮಂತಾ ಮೂಡ್ ಸ್ವಿಂಗ್‌ ಬಗ್ಗೆ ಚರ್ಚೆ ಆಗುತ್ತಿದೆ. ಸಮಂತಾ ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಮಾಡದೆ ಗೈರಾಗುತ್ತಿದ್ದಾರೆ ಎನ್ನುವ ವದಂತಿಗಳು ಹಬ್ಬಿವೆ. ಹಾಗಾಗಿ ಸಮಂತಾ ಹೀಗೆ ಮಾಡಿದರೆ ಬಾಲಿವುಡ್‌ನಲ್ಲಿ ಆಕೆಯ ಸಿನಿಮಾ ಜರ್ನಿ ಕಷ್ಟ ಎಂದು ಹೇಳಲಾಗುತ್ತಿದೆ. ಸದ್ಯ ಸೌತ್‌ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣಕ್ಕೆ ಸಮಂತಾ ಬಾಲಿವುಡ್‌ ಕಾರ್ಯಕ್ರಮಗಳಿಗೆ ಗೈರಾಗುತ್ತಿದ್ದಾರೆ ಎನ್ನಲಾಗಿದೆ.

ತಮಿಳು ಮತ್ತು ತೆಲುಗು ಸಿನಿಮಾಗಳ ಸಿನಿಮಾಗಳ ಕೆಲಸಗಳಲ್ಲಿ ಸಮಂತಾ ಬ್ಯುಸಿ ಆಗಿದ್ದಾರೆ. 'ಶಾಕುಂತಲಂ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ಜೊತೆಗೆ 'ಯಶೋಧ' ಮತ್ತು ತಮಿಳಿನ ಒಂದು ಚಿತ್ರದಲ್ಲಿ ಸಮಂತಾ ನಿರತರಾಗಿದ್ದಾರೆ.

More from Filmibeat

English summary
Samantha Bollywood Journey Becomes Critical, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X