ವಿಚ್ಛೇಧನದ ಬಳಿಕ ಹೆಸರು ಬದಲಿಸಿಕೊಂಡ ಸಮಂತಾ
ಸ್ಟಾರ್ ದಂಪತಿ ಸಮಂತಾ, ನಾಗ ಚೈತನ್ಯ ಅಧಿಕೃತವಾಗಿ ಬೇರಾಗಿದ್ದರೆ. ಇಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆವುಯುದಾಗಿ ಘೋಷಿಸಿಯಾಗಿದೆ. ವಿಚ್ಛೇಧನದ ಬಳಿಕ ಸಮಂತಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಸಮಂತಾ-ನಾಗ ಚೈತನ್ಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವಿಷಯ ಜಾಹೀರಾಗಿದ್ದು ಜುಲೈ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ತಮ್ಮ ಹೆಸರು ಬದಲಾಯಿಸಿಕೊಂಡಾಗ. ಇದೀಗ ವಿಚ್ಛೇಧನದ ಬಳಿಕ ಸಮಂತಾ ತಮ್ಮ ಹೆಸರನ್ನು ಮತ್ತೆ ಬದಲಾಯಿಸಿದ್ದಾರೆ.
ಇಷ್ಟು ದಿನ ಸಮಂತಾರ ಸಾಮಾಜಿಕ ಜಾಲತಾಣದಲ್ಲಿ ಕೇವಲ 'ಎಸ್' ಎಂದಷ್ಟೆ ಹೆಸರಿತ್ತು, ಅದನ್ನೀಗ ಸಮಂತಾ ಋತುಪ್ರಭು ಎಂದು ಬದಲಾಯಿಸಿಕೊಂಡಿದ್ದಾರೆ. ಸಮಂತಾ ಮದುವೆ ಆಗುವ ಮುನ್ನ ಇದೇ ಹೆಸರಿತ್ತು, ಮದುವೆ ಆದ ಬಳಿಕ ಸಮಂತಾ ಅಕ್ಕಿನೇನಿ ಎಂದು ಹೆಸರು ಬದಲಾಯಿಸಿಕೊಂಡಿದ್ದರು.
ನಂತರ ಜುಲೈ ತಿಂಗಳಲ್ಲಿ ಎಸ್ ಎಂದು ಹೆಸರು ಬದಲಾಯಿಸಿದ್ದರು, ಈಗ ವಿಚ್ಛೇಧನವಾದ ಬಳಿಕ ಮರಳಿ ತಮ್ಮ ಮೂಲ ಹೆಸರಾದ ಸಮಂತಾ ಋತುಪ್ರಭು ಎಂದು ಬದಲಾಯಿಸಿಕೊಂಡಿದ್ದು, ಇದೇ ಹೆಸರು ಖಾಯಂ ಆಗಿರುತ್ತದೆಯೋ ಅಥವಾ ಮತ್ತೆ ಬದಲಾವಣೆ ಆಗುತ್ತದೆಯೇ ನೋಡಬೇಕಿದೆ.

ಸಂದೇಶ ಹಂಚಿಕೊಂಡಿರುವ ಸಮಂತಾ
ಹೆಸರು ಬದಲಾವಣೆ ಮಾಡುವ ಜೊತೆಗೆ, ಇನ್‌ಸ್ಟಾಗ್ರಾಂ ಸ್ಟೋರಿಯೊಂದನ್ನು ಸಹ ಸಮಂತಾ ಹಂಚಿಕೊಂಡಿದ್ದಾರೆ. ''ನಾನು ಜಗತ್ತನ್ನು ಬದಲಾಯಿಸಿಬೇಕೆಂದುಕೊಂಡರೆ ಮೊದಲು ನಾನು ಬದಲಾಗಬೇಕು. ನನ್ನ ಬೆಡ್ ಅನ್ನು ನಾನೇ ಸರಿಮಾಡಬೇಕು, ಶೆಲ್ಫ್‌ಗಳ ಧೂಳನ್ನು ನಾನೇ ಕೊಡವಬೇಕು, ಸುಳ್ಳು ಹೇಳಬಾರದು, ಮಾಡಬೇಕೆಂದಿರುವ ಕೆಲಸಗಳನ್ನು ಮುಂದಕ್ಕೆ ಹಾಕಬಾರದು'' ಎಂದಿದ್ದಾರೆ ಸಮಂತಾ. ಈ ಮಾತುಗಳನ್ನು ಸಮಂತಾ ತಮಗೆ ತಾವೇ ಹೇಳಿಕೊಂಡಿದ್ದಾರೆಯೇ ಅಥವಾ ಮಾಜಿ ಪತಿ ನಾಗ ಚೈತನ್ಯ ಕುರಿತು ಬರೆದಿದ್ದಾರೆಯೇ ಗೊತ್ತಿಲ್ಲ. ಆದರೆ ಸಮಂತಾ ಬದಲಾವಣೆಗೆ ಹಾತೊರೆಯುತ್ತಿರುವುದಂತೂ ದಿಟ.

ನಾಲ್ಕು ವರ್ಷದ ಹಿಂದೆ ವಿವಾಹ
ಸಮಂತಾ ಹಾಗೂ ನಾಗ ಚೈತನ್ಯ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅದಕ್ಕೆ ಹಿಂದೆ ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದರು. ಇನ್ನೇನು ಈ ಇಬ್ಬರು ಪೋಷಕರಾಗುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು ಆದರೆ ಅಷ್ಟರಲ್ಲಿ ಇಬ್ಬರೂ ಬೇರಾದರು. ಇವರಿಬ್ಬರ ಬೇರ್ಪಡಿಕೆ ಇಬ್ಬರ ಅಭಿಮಾನಿಗಳಿಗೂ ತೀವ್ರ ಆಶ್ಚರ್ಯ ತಂದಿದೆ. ದಕ್ಷಿಣ ಭಾರತದ ಕ್ಯೂಟ್ ಜೋಡಿ ಎನಿಸಿಕೊಂಡಿತ್ತು ಈ ಜೋಡಿ.

ವಿಚ್ಛೇಧನಕ್ಕೆ ಕಾರಣ ಯಾರು?
ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸಮಂತಾರ ಸ್ಟೈಲಿಷ್ಟ್ ಪ್ರೀತಂ ಜುಕಾಲ್ಕರ್ ಇಂದಾಗಿ ಸಮಂತಾ ಮತ್ತು ನಾಗ ಚೈತನ್ಯ ದೂರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಹಾಗೂ ಪ್ರೀತಂ ಜುಕಾಲ್ಕರ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪರ್ಸನಲ್ ಡಿಸೈನರ್ ಪ್ರೀತಂ ಜುಕಲ್ಕರ್ ಜನ್ಮದಿನದಂದು ತನ್ನ ಕಾಲುಗಳನ್ನು ಅವನ ಮೇಲೆ ಹಾಕಿ ಸೋಫಾ ಮೇಲೆ ಮಲಗಿದಂತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದು ಆ ಸಮಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಭಿಮಾನಿಗಳು ಅವಳನ್ನು ಅಪಾರವಾಗಿ ಟ್ರೋಲ್ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಅಕ್ಕಿನೇನಿ ಕುಟುಂಬದಲ್ಲೂ ಈ ಫೋಟೋ ಭಾರಿ ಅಸಮಾಧಾನ ಉಂಟುಮಾಡಿತ್ತು ಎನ್ನಲಾಗಿದೆ.

ಸಂದೇಶ ಹಂಚಿಕೊಂಡಿದ್ದ ಸಮಂತಾ-ನಾಗ ಚೈತನ್ಯ
''ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ'' ಎಂಬ ಸಂದೇಶವನ್ನು ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಮೂಲಕ ತಾವು ಬೇರಾಗುತ್ತಿರುವುದನ್ನು ಅಧಿಕೃತಗೊಳಿಸಿದ್ದರು.


Click it and Unblock the Notifications











