ಕೊನೆಗೂ ಗುಡ್ ನ್ಯೂಸ್ ಕೊಟ್ರು ನಟಿ ಸಮಂತಾ; ಸಿನಿಮಾಗಳಿಂದ ಬ್ರೇಕ್
ನಟಿ ಸಮಂತಾ ಗರ್ಭಿಣಿ ಆಗಿದ್ದಾರೆ ಎನ್ನುವ ಊಹಾಪೋಹ ಕಳೆದ ನಾಲ್ಕೈದು ದಿನಗಳಿಂದ ಸದ್ದು ಮಾಡ್ತಿತ್ತು. ಇದೀಗ ಸ್ವತಃ ಸ್ಯಾಮ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾ ಸಕ್ಸಸ್ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಚಿತ್ರತಂಡ ಸಂಭ್ರಮ ಹಂಚಿಕೊಂಡಿದೆ. ಈ ವೇಳೆ ಮತ್ತೊಂದು ಸ್ಮಾಲ್ ಬ್ರೇಕ್.. ಮತ್ತೆ ವಾಪಸ್ ಬರ್ತಿನಿ ಎಂದು ಸಮಂತಾ ಹೇಳಿರುವುದು ವೈರಲ್ ಆಗ್ತಿದೆ.
'ಮಾ ಇಂಟಿ ಬಂಗಾರಂ' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಸಮಂತಾ ಪ್ರೆಗ್ನೆಂಟ್ ಎನ್ನುವ ಚರ್ಚೆ ಶುರುವಾಗಿತ್ತು. ಸಿನಿಮಾ ಪ್ರಮೋಷನ್ ವೇಳೆ ಸೀರೆ ಉಟ್ಟು ಆಕೆ ಕಾಣಿಸಿಕೊಂಡಿದ್ದು ಅನುಮಾನ ಮೂಡಿಸಿತ್ತು. ಬೇಬಿ ಬಂಪ್ ಮುಚ್ಚಿಡಲು ಹೀಗೆ ಮಾಡ್ತಿದ್ದಾರೆ ಎಂದು ಕೆಲವರು ಭಾವಿಸಿದ್ದರು. ಬಳಿಕ ಸಿನಿಮಾ ಸಕ್ಸಸ್ ಹಿನ್ನೆಲೆಯಲ್ಲಿ ಪತಿ ರಾಜ್ ನಿಡುಮೊರು ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಬಿಳಿ ಬಣ್ಣದ ಟೀ ಶರ್ಟ್‌ನಲ್ಲಿ ಸ್ಯಾಮ್ ಬೇಬಿ ಬಂಪ್ ಸ್ಪಷ್ಟವಾಗಿ ಗೊತ್ತಾಗಿತ್ತು.

ನಿರ್ದೇಶಕಿ ನಂದಿನಿ ರೆಡ್ಡಿ ಕೂಡ ಸಮಂತಾ ಪ್ರೆಗ್ನೆನ್ಸಿ ಬಗ್ಗೆ ಖಚಿತಪಡಿಸಿದ್ದರು. 'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಆಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಷ್ಟೇ ಅಲ್ಲ ಸ್ಯಾಮ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಹಾಗಾಗಿ ಸಮಂತಾ ತಾಯಿ ಆಗುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು. ಇದೀಗ ಸ್ವತಃ ಸಮಂತಾ ಈ ವಿಚಾರವನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ. ಕೂಡಲೇ ಕಂಗ್ರಾಟ್ಸ್ ಎಂದು ಎಲ್ಲರೂ ಕಿರುಚಿದ್ದಾರೆ.
ಸಮಂತಾ ಮಾತನಾಡಿ "ಎಲ್ಲರೂ ಕ್ಷಮಿಸಿ.. ಮತ್ತೊಂದು ಸಣ್ಣ ವಿರಾಮ ತೆಗೆದುಕೊಳ್ತಿದ್ದೀನಿ.. ಬಳಿಕ ಸಿನಿಮಾಗೆ ಮತ್ತೆ ವಾಪಸ್ ಬರ್ತೀನಿ.. ನಾನು ಹೆರಿಗೆ ರಜೆ ತೆಗೆದುಕೊಳ್ಳಬೇಕು.. ಬಹಳ ಖುಷಿ ಆಗ್ತಿದೆ" ಎಂದಿದ್ದಾರೆ. ಇದೇ ವೇಳೆ ರಿಲೇಶನ್‌ಶಿಪ್ ಬಗ್ಗೆ ಕೂಡ ಅಭಿಮಾನಿಗಳ ಪ್ರಶ್ನೆಗೆ ಸ್ಯಾಮ್ ಉತ್ತರಿಸಿದ್ದಾರೆ. ಕರಿಯರ್ ನಮ್ಮ ಕೈಯಲ್ಲಿ ಇರುತ್ತದೆ. ರಿಲೇಶನ್‌ಶಿಪ್ ನಮ್ಮ ಹಿಡಿತದಲ್ಲಿ ಇರಲ್ಲ. ಇಬ್ಬರು ವ್ಯಕ್ತಿಗಳಿಂದ ಅದು ಚೆನ್ನಾಗಿ ಇರುತ್ತದೆ. ಮಹಿಳೆಯರು ಮೊದಲು ತಮ್ಮ ತಮಗೆ ಭರವಸೆ ಇರಬೇಕು. ಆಗ ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತೊಬ್ಬರಿಂದ ಜೀವನ ಕಂಪ್ಲೀಟ್ ಆಗುತ್ತದೆ ಎಂದುಕೊಳ್ಳಬಾರದು.. ನಿರೀಕ್ಷೆ ಹೆಚ್ಚಾಗಿರುತ್ತದೆ.. ಮತ್ತೊಬ್ಬರು ನಮ್ಮ ಜೀವನವನ್ನು ಕಂಪ್ಲೀಟ್ ಮಾಡುತ್ತಾರೆ ಎಂದುಕೊಳ್ಳಬಾರದು. ನಮ್ಮನ್ನ ನಾವು ಸಾಬೀತು ಮಾಡಿಕೊಳ್ಳಬೇಕು ಎಂದಿದ್ದಾರೆ.
2010ರಲ್ಲಿ 'ಏ ಮಾಯಾ ಚೆಸಾವೆ' ಸಿನಿಮಾ ಮೂಲಕ ಸಮಂತಾ ಚಿತ್ರರಂಗ ಪ್ರವೇಶಿಸಿದರು. ಅದೇ ಸಮಯದಲ್ಲಿ ನಾಗಚೈತನ್ಯಾ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಯಾಗಿ ಬದಲಾಗಿತ್ತು. ಪೋಷಕರ ಒಪ್ಪಿಗೆ ಪಡೆದು ಗೋವಾದಲ್ಲಿ ಜೋಡಿ ಮದುವೆ ಆಗಿದ್ದರು. 2017ರಲ್ಲಿ ಮದುವೆ ಆಗಿತ್ತು. 4 ವರ್ಷಗಳ ನಂತರ ಇಬ್ಬರೂ ಡಿವೋರ್ಸ್ ಘೋಷಿಸಿ ಶಾಕ್ ಕೊಟ್ಟಿದ್ದರು. ಜೋಡಿ ಮಕ್ಕಳು ಇರಲಿಲ್ಲ.
ಸದ್ಯ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳ ಜೊತೆ 2ನೇ ಬಾರಿ ಪ್ರೀತಿಸಿ ಮದುವೆ ಆಗಿದ್ದಾರೆ. 2024ರಲ್ಲಿ ತಮಿಳು ನಟಿ ಶೋಭಿತಾ ದುಲಿಪಾಲ ಜೊತೆ ಚೈತು ಹಸೆಮಣೆ ಏರಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಮತ್ತೊಮ್ಮೆ ಮದುವೆ ಆಗಿದ್ದರು. ರಾಜ್ ನಿರ್ದೇಶನದ 'ಫ್ಯಾಮಿಲಿಮ್ಯಾನ್'-2 ವೆಬ್ ಸೀರಿಸ್‌ನಲ್ಲಿ ಸಮಂತಾ ನಟಿಸಿದ್ದರು. ಅದೇ ಸಮಯದಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿ ಜೋಡಿ ಮದುವೆ ಆಗಿದ್ದರು. ಕೊಯಂಬತ್ತೂರಿನ ಇಶಾ ಫೌಂಡೇಶನ್ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆದಿತ್ತು. ಮದುವೆ ಆಗುವವರೆಗೆ ಈ ವಿಚಾರವನ್ನು ಜೋಡಿ ಗುಟ್ಟಾಗಿಯೇ ಇಟ್ಟಿತ್ತು.


Click it and Unblock the Notifications