ನಾಗಚೈತನ್ಯ ನೆನಪುಗಳನ್ನು ಅಳಿಸಲು ಮುಂದಾದ ಸಮಂತಾ!

ಸಿನಿಪ್ರಿಯರ ಇಷ್ಟದ ಜೋಡಿಗಳಾಗಿದ್ದ, ನಟಿ ಸಮಂತಾ ಮತ್ತು ನಾಗಚೈತನ್ಯ ದೂರ ಆಗಿದ್ದು ಆಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಡೆದ ಗಂಭೀರ ಬೆಳವಣಿಗೆಗಳಲ್ಲಿ ಇದು ಕೂಡ ಒಂದು. ಸಮಂತಾ - ನಾಗಚೈತನ್ಯ ವಿಚ್ಛೇದನದ ಸುದ್ದಿ ಕೂಡ ಅಭಿಮಾನಿಗಳಿಂದ ಹಿಡಿದು, ಸಿನಿಮಾ ಮಂದಿಗೂ ಶಾಕ್ ಕೊಟ್ಟಿತ್ತು. ಇಬ್ಬರೂ ಕೂಡ ಅಧಿಕೃತವಾಗಿ ತಮ್ಮ ವಿಚ್ಛೇದನದ ಸುದ್ದಿಯನ್ನು ಹಂಚಿಕೊಂಡು ದೂರಾಗಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಆಧ್ಯಾತ್ಮಿಕ ಪ್ರವಾಸ ಕೈ ಗೊಂಡಿದ್ದಾರೆ. ತಮ್ಮ ಮನಸ್ಸನ್ನು ಸರಿಪಡಿಸಿ ಕೊಳ್ಳಲು ಸಮಂತಾ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಸಮಂತಾ ತಮ್ಮ ಸ್ನೇಹಿತರ ಜೊತೆಗೆ ಸೇರಿ ಕೊಂಡು ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದರು. ಈಗ ಸಮಂತ ಹೊಸ ನಿರ್ಧಾರದಿಂದಾಗಿ ಗಮನ ಸೆಳೆದಿದ್ದಾರೆ.

ಸಮಂತಾ ನಾಗಚೈತನ್ಯ ಜೊತೆಗಿನ ನೆನಪುಗಳನ್ನು ಅಳಿಸಲು ಮುಂದಾಗಿದ್ದಾರೆ. ಇದು ಆಕೆಯ ಇನ್‌ಸ್ಟಾಗ್ರಾಮ್‌ ಖಾತೆ ಎತ್ತಿ ತೋರಿಸುತ್ತಿದೆ. ಹೌದು ಸಮಂತಾ ಮಾಜಿ ಪತಿ ನಾಗಚೈನತ್ಯ ಜೊತೆಗೆ ಇರುವ ಫೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ನಾಗಚೈತನ್ಯ ಇದ್ದಂತಹ ಸುಮಾರು 80ಕ್ಕೂ ಹೆಚ್ಚು ಫೊಟೋಗಳನ್ನು ಸಮಂತಾ ಅಳಿಸಿ ಹಾಕಿದ್ದಾರೆ. ನಾಗಚೈತನ್ಯ ಜೊತೆಗೆ ಕಳೆದ ಖುಷಿ ಸಂದರ್ಭದ ಫೊಟೋಗಳನ್ನು ಸಮಂತ ಹಂಚಿಕೊಂಡಿದ್ದಾರು. ಆದ್ರೆ ಈಗ ಇಬ್ಬರು ಬೇರೆ ಆಗಿರುವ ಕಾರಣ ಸಮಂತಾ ಮಾಜಿಪತಿ ನೆನಪುಗಳನ್ನ ಅಳಿಸಲು ಮುಂದಾಗಿದ್ದಾರೆ. ವಿಚ್ಚೇದನದ ಸುದ್ದಿ ಹೇಳಿಕೊಂಡಾಗ ತಾವಿಬ್ಬರು ಇನ್ನೂ ಒಳ್ಳೆಯ ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಸಮಂತಾ, ನಾಗಚೈತನ್ಯ ಬರೆದುಕೊಂಡಿದ್ದರು. ಆದ್ರೀಗ ಸಮಂತಾ ನಡೆ ಅಚ್ಚರಿಗೂ ಕಾರಣವಾಗಿದೆ.

ಆದ್ರೆ ಸಮಂತಾ ಎಲ್ಲಾ ಫೊಟೋಗಳನ್ನು ಅಳಿಸಿಲ್ಲ. ತಮ್ಮ ಮದುವೆಯ ಫೊಟೋ ಜೊತೆಗೆ ಒಂದೆರಡು ಫೊಟೋಗಳನ್ನು ಬಿಟ್ಟು ಮಿಕ್ಕ ಎಲ್ಲಾ ಫೊಟೋಗಳನ್ನು ಸಮಂತಾ ಅಳಿಸಿ ಹಾಕಿದ್ದಾರೆ. ಈ ಮೂಲಕ ಸಮಂತ, ನಾಗಚೈತನ್ಯ ಜೊತೆಗಿನ ನೆನಪುಗಳನ್ನು ಅಳಿಸಿ ಹಾಕಲು ದಿಟ್ಟ ಹೆಜ್ಜೆ ಇಟ್ಟಿರುವ ಹಾಗೆ ಕಾಣುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ನೆನಪುಗಳಿಗೆ ತೆರೆ ಎಳೆಯುತ್ತಿರುವ ಸಮಂತ ವೈಯಕ್ತಿಕವಾಗಿಯೂ ನಾಗಚೈತನ್ಯ ನೆನಪುಗಳನ್ನು ಅಳಿಸಿ ಹಾಕಲು ಮುಂದಾಗಿದ್ದಾರೆ ಎನ್ನುವುದು ಗೊತ್ತಾಗುತ್ತೆ. ಬಹುಕಾಲ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿಯ ವಿಚ್ಛೇದನದ ನಿರ್ಧಾರ ಅವರ ಅಭಿಮಾನಿಗಳಲ್ಲಿ, ಆಪ್ತರಲ್ಲಿ ಬೇಸರ ತಂದಿತ್ತು. ಎಷ್ಟೋ ಮಂದಿ ಛೇ ಹೀಗಾಗ ಬಾರದಿತ್ತು ಎಂದು ಮರುಗಿದ್ದು ಇದೆ.

Samantha Deletes Pics With Naga Chaitanya On Her Instagram

ಅಕ್ಟೋಬರ್ 2ರಂದು ಸಮಂತಾ ಮತ್ತು ನಾಗಚೈತನ್ಯ ತಮ್ಮ ವಿಚ್ಛೇದನದ ವಿಚಾರವನ್ನು ಪ್ರಕಟಿಸಿದರು. ಇಬ್ಬರೂ ಕೂಡ ಗೌರವಯುತವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಈಗ ಅನಿವಾರ್ಯವಾಗಿ ಸಮಂತಾ ನಾಗಚೈತನ್ಯ ಜೊತೆಗಿನ ನೆನಪುಗಳನ್ನು ಅಳಿಸಿ ಕೊಳ್ಳಬೇಕಾಗಿದೆ. ಸಮಂತ ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಸಂದೇಶವನ್ನೂ ಹಂಚಿಕೊಂಡಿದ್ರು. ಭಾರತೀಯ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಬರೆದಿರುವ ಹೇಳಿಕೆಯನ್ನು ಸಮಂತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ತಮ್ಮ ಅಭಿಪ್ರಾಯವೂ ಇದೆ ಎಂದು ತಿಳಿಸಿದ್ದರು. ನಿಮ್ಮ ಹೆಣ್ಣು ಮಕ್ಕಳನ್ನು ತುಂಬಾ ಸಮರ್ಥರನ್ನಾಗಿ ಮಾಡಿ. ಅವಳನ್ನು ಯಾರು ಮದುವೆ ಆಗುತ್ತಾರೆ ಎಂದು ನೀವು ಚಿಂತಿಸ ಬೇಕಾಗಿಲ್ಲ. ಅವಳ ಮದುವೆಯ ದಿನಕ್ಕಾಗಿ ಹಣವನ್ನು ಉಳಿಸುವ ಬದಲು, ಅದನ್ನು ಅವಳ ಶಿಕ್ಷಣಕ್ಕೆ ಖರ್ಚು ಮಾಡಿ, ಮುಖ್ಯವಾಗಿ ಅವಳನ್ನು ಮದುವೆಗೆ ಸಿದ್ಧ ಪಡಿಸುವ ಬದಲು ಅವಳನ್ನ ಆಕೆಗಾಗಿಯೇ ಸಿದ್ಧಪಡಿಸಿ. ಅವಳಿಗೆ ತನ್ನನ್ನು ತಾನು ಪ್ರೀತಿಸುವುದಕ್ಕೂ ಆತ್ಮವಿಶ್ವಾಸವನ್ನು ಕಲಿಸಿ, ಅವಳಿಗೆ ಅಗತ್ಯವಿದ್ದರೆ ಅವಳು ಯಾರಿಗಾದರೂ ಹೊಡೆಯ ಬಹುದು ಎನ್ನುವಷ್ಟರ ಮಟ್ಟಿಗೆ ಸ್ಪೂರ್ತಿದಾಯಕವಾಗಿ ಅವಳನ್ನು ಬೆಳೆಸಿ ಎನ್ನುವಂತಹ ಪೋಸ್ಟರ್ ಅದಾಗಿತ್ತು.

ವಿಚ್ಛೇದನದ ಬಳಿಕ ಸಮಂತ ತಮ್ಮ ಸಿನಿಮಾ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ. 'ಶಾಕುಂತಲಮ್‌' ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಜೊತೆಗೆ 'ಕಾತು ವಾಕುಲ ಎಂಡು ಕಾದಲ್' ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಹಾಗೆ ಇತ್ತೀಚೆಗೆ ಸಮಂತಾ ಹೆಸರು ಶಾರುಖ್ ಖಾನ್ ಜೊತೆಗೆ ಕೇಳಿ ಬರ್ತಿದೆ. ಅಟ್ಲಿ ಮತ್ತು ಶಾರುಖಾಖ್ ಜೊತೆಗಿನ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.

More from Filmibeat

English summary
Samantha Erase Naga Chaitanya Photos From Her Social Media Account
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X