ಹೊಸ ಸಿನಿಮಾಗೆ ಭಾರಿ ಮೊತ್ತದ ಸಂಭಾವನೆ ಬೇಡಿಕೆ ಇಟ್ಟ ನಟಿ ಸಮಂತಾ

ಟಾಲಿವುಡ್ ನ ಖ್ಯಾತ ಜೋಡಿ, ಕ್ಯೂಟ್ ಕಪಲ್, ಸ್ಯಾಮ್-ಚೈ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ನಟಿ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಅನೇಕ ದಿನಗಳೇ ಕಳೆಯಿತು. ಆದರೂ ಈ ತಾರಾಜೋಡಿಯ ವಿಚ್ಛೇದನದ ಬಗ್ಗೆ ಇನ್ನು ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಇನ್ನು ನೆಚ್ಚಿನ ಜೋಡಿಯ ಡಿವೋರ್ಸ್ ವಿಚಾರವನ್ನು ಅರಗಿಸಿಕೊಂಡಿಲ್ಲ. ಒಂದಲ್ಲೊಂದು ವಿಚಾರಕ್ಕೆ ಇಬ್ಬರೂ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ.

ವಿಚ್ಛೇದನ ಸಮಂತಾ ಸಿನಿ ಜೀವನದ ಮೇಲೆ ಪರಿಣಾಮ ಬೀರಬಹುದು ಎನ್ನುವ ಮಾತು ಕೇಳಿಬರುತ್ತಿತ್ತು. ಆದರೀಗ ಸಮಂತಾ ಭರ್ಜರಿ ಸಂಭಾವನೆ ಬೇಡಿಕೆ ಇಡುವ ಮೂಲಕ ಹೊಸ ಸಿನಿಮಾದ ಮಾತುಕತೆಯಲ್ಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.

ಸಮಂತಾ ಇತ್ತೀಚಿಗೆ ಮಹಿಳಾ ಕೇಂದ್ರಿತ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಮಹಿಳಾ ಕೇಂದ್ರಿತ ಸಿನಿಮಾಗೆ ಸಹಿ ಹಾಕಿದ್ದು, ಹೊಸ ನಿರ್ದೇಶಕರ ಬಳಿ ಕೆಲಸ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಮಂತಾ ಹೊಸ ಸಿನಿಮಾಗೆ ದೊಡ್ಡ ನಿರ್ಮಾಣ ಸಂಸ್ಥೆ ಶ್ರೀದೇವಿ ಮೂವಿಸ್ ಬ್ಯಾನರ್ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ.

Samantha demands huge remuneration her next movie

ಅಂದಹಾಗೆ ಇನ್ನು ಹೆಸರಿಡದ ಈ ಸಿನಿಮಾಗೆ ಸಮಂತಾ ಬರೋಬ್ಬರಿ 3.50 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಮಂತಾ ಸಿನಿಮಾವೊಂದಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವುದು ಇದೇ ಮೊದಲು. ಈ ಮೊದಲು ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ರಾಜಿ ಪಾತ್ರ ಮಾಡಲು 3.50 ರಿಂದ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಸಮಂತಾ 3.50 ಕೋಟಿ ರೂ. ಪಡೆಯುತ್ತಿದ್ದಾರೆ.

ವಿಚ್ಛೇದನ ನಂತರ ಸಮಂತಾ ವೃತ್ತಿ ಜೀವನ ಕುಸಿದು ಬೀಳಲಿದೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ದೊಡ್ಡ ಮೊತ್ತದ ಸಂಭಾವನೆಯೊಂದಿಗೆ ಮತ್ತೆ ಸಿನಿಮಾರಂಗದಲ್ಲಿ ಮನ್ನುಗ್ಗುತ್ತಿರುವ ರೀತಿ ಎಲ್ಲದಕ್ಕೂ ಉತ್ತರ ನೀಡಿದೆ.

ಅಂದಹಾಗೆ ಸಮಂತಾ ಸದ್ಯ ತೆಲುಗಿನಲ್ಲಿ ಶಾಕುಂತಲಂ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ತಮಿಳಿನ ಒಂದು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಸೂಪರ್ ಸಕ್ಸಸ್ ಬಳಿಕ ಸಮಂತಾ ಯಾವುದೇ ಸಿನಿಮಾಗೆ ಸಹಿ ಮಾಡಿರಲಿಲ್ಲ. ಕೆಲವು ಸಮಯ ವಿರಾಮ ಪಡೆದಿದ್ದ ಸಮಂತಾ ಇದೀಗ ಮತ್ತೆ ಹೊಸ ಸಿನಿಮಾಗೆ ಸಹಿ ಮಾಡುವ ಮೂಲಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.

ಇನ್ನು ನಾಗ ಚೈತನ್ಯ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ಲವ್ ಸ್ಟೋರಿ ಸಿನಿಮಾ ಬಿಡುಗಡೆಯಾಗಿದ್ದು, ಸೂಪರ್ ಸಕ್ಸಸ್ ಆಗಿದೆ. ಸಾಯಿ ಪಲ್ಲವಿ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ನಾಗ್ ಮತ್ತು ಸಾಯಿ ಪಲ್ಲವಿ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಲವ್ ಸ್ಟೋರಿ ಸಿನಿಮಾದ ಸಕ್ಸಸ್ ನಾಗ ಚೈತನ್ಯ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ನೀಡಿದೆ. ಇದೀಗ ನಾಗ ಚೈತನ್ಯ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

More from Filmibeat

English summary
Actress Samantha demands huge remuneration her next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X