ಸಮಂತಾರನ್ನ ಕುಟುಂಬದರು ಏನೆಂದು ಕರೆಯುತ್ತಾರೆ? ಸ್ಯಾಮ್ ಮತ್ತೊಂದು ಹೆಸರು ಬಹಿರಂಗ

By ಫಿಲ್ಮ್ ಡೆಸ್ಕ್

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸದ್ಯ ಲಾಕ್ ಡೌನ್ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ತೆಲುಗು ಚಿತ್ರರಂಗದ ಕ್ಯೂಟ್ ನಟಿ ಸ್ಯಾಮ್ ಮದುವೆ ನಂತರವೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಮಂತಾರನ್ನ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Recommended Video

Dhruva Sarja has Shared the last photo with his brother Chiranjeevi Sarja | Filmibeat Kannada

ಲಾಕ್ ಡೌನ್ ನಲ್ಲಿಯೂ ಸಮಂತಾ ಸದಾ ಸುದ್ದಿಯಲ್ಲಿದ್ದಾರೆ. ಪೂಜಾ ಹೆಗ್ಡೆ ಮತ್ತು ಸಮಂತಾ ನಡುವಿನ ಶೀತಲ ಸಮರ ಇತ್ತೀಚಿಗೆ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಆ ನಂತರ ಸಮಂತಾ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರ ಬೆನ್ನಲೆ ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ 10 ಮಿಲಿಯನ್ ಫಾಲೋವರ್ಸ್ ಪಡೆದು ಸುದ್ದಿಯಾಗಿದ್ದರು. ಸದ್ಯ ಸಮಂತಾ ಮತ್ತೊಂದು ಇಂಟ್ರಸ್ಟಿಂಗ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮುಂದೆ ಓದಿ...

ಸಮಂತಾಗೆ ಎರಡು ಹೆಸರು

ಸಮಂತಾಗೆ ಎರಡು ಹೆಸರು

ಸಾಕಷ್ಟು ನಟ-ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಕೆಲವರು ಅದೃಷ್ಟದ ಹೆಸರನ್ನು ಇಟ್ಟುಕೊಂಡು ಖ್ಯಾತಿಗಳಿಸಿದ್ದಾರೆ. ಸಮಂತಾ ಅಕ್ಕಿನೇನಿಗೂ ಮತ್ತೊಂದು ಹೆಸರು ಇದೆ. ವಿಶೇಷ ಅಂದರೆ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಸಮಂತಾ ಅವರನ್ನು ಬೇರೆ ಹೆಸರಿನಿಂದ ಕೆರೆಯುತ್ತಾರೆ. ಇದು ಸಾಕಷ್ಟು ಮಂದಿಗೆ ಗೊತ್ತಿರ್ಲಿಕ್ಕಿಲ್ಲ. ಅಂದ್ಹಾಗೆ ಸಮಂತಾ ಮತ್ತೊಂದು ಹೆಸರು ಕೇಳಿದ್ರೆ ಅಚ್ಚರಿ ಪಡುತ್ತೀರಿ.

ಕುಟುಂಬದವರು ಏನೆಂದು ಕರೆಯುತ್ತಾರೆ?

ಕುಟುಂಬದವರು ಏನೆಂದು ಕರೆಯುತ್ತಾರೆ?

ಕುಟುಂಬದವರು ಸಮಂತಾ ಅವರನ್ನು ಸಮಂತಾ ಎಂದು ಕರೆಯುವುದಿಲ್ಲ. ಹಾಗಂತ ಸ್ಯಾಮ್ ಎಂದು ಕರೆಯುತ್ತಾರಾ ಅಂತ ಅಂದ್ಕೋಬೇಡಿ. ಸಮಂತಾ ಅವರನ್ನು ಕುಟುಂಬದವರು ಮತ್ತು ಆಪ್ತ ಸ್ನೇಹಿತರು 'ಯಶೋದ' ಎನ್ನುವ ಹೆಸರಿನಿಂದ ಕರೆಯುತ್ತಾರಂತೆ. ಸಮಂತಾಗೆ ಯಶೋದ ಎನ್ನುವ ಮತ್ತೊಂದು ಹೆಸರಿದೆ ಎನ್ನುವುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಇತ್ತೀಚಿಗೆ ಈ ವಿಚಾರ ಬಹಿರಂಗಗೊಂಡಿದೆ.

ಇನ್ಸ್ಟಾಗ್ರಾಮ್ ನಲ್ಲಿ ಸಮಂತಾ 10 ಮಿಲಿಯನ್ ಫಾಲೋವರ್ಸ್

ಇನ್ಸ್ಟಾಗ್ರಾಮ್ ನಲ್ಲಿ ಸಮಂತಾ 10 ಮಿಲಿಯನ್ ಫಾಲೋವರ್ಸ್

ಇನ್ಸ್ಟಾಗ್ರಾಂನಲ್ಲಿ ಸಮಂತಾ 10 ಮಿಲಿಯನ್ ಫಾಲೋವರ್ ಗಳನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಭಾರತದ ಕೆಲವೇ ಕೆಲವು ಸ್ಟಾರ್ಸ್ 10 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅವರಲ್ಲಿ ಸಮಂತಾ ಕೂಡ ಒಬ್ಬರಾಗಿದ್ದಾರೆ. ಕಾಜಲ್ ಅಗರವಾಲ್ 14 ಮಿಲಿಯನ್‌ಗೂ ಅಧಿಕ ಫಾಲೋವರ್ ಗಳನ್ನು ಹೊಂದಿದ್ದಾರೆ.

ಸಮಂತಾ ಬಳಿ ಇರುವ ಸಿನಿಮಾಗಳು

ಸಮಂತಾ ಬಳಿ ಇರುವ ಸಿನಿಮಾಗಳು

ಸಮಂತಾ ಕೊನೆಯದಾಗಿ ಜಾನು ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ತಮಿಳಿನ ಕಾತು ವಾಕುಲಾ ರೆಂಡು ಕಡಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಸ್ಯಾಮ್ ಜೊತೆ ನಯನತಾರಾ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಸಮಂತಾ ವೆಬ್ ಸೀರಿಸ್ ನಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Actress Samantha Family members and friends calling her Yashoda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X