'96' ರೀಮೇಕ್ 'ಜಾನು' ಪೋಸ್ಟರ್ ಬಿಡುಗಡೆ: ಸಮಂತಾ ಅಭಿಮಾನಿಗಳು ಬೇಸರ

ತಮಿಳಿನ ಸೂಪರ್ ಹಿಟ್ 96 ಸಿನಿಮಾ ದೊಡ್ಡ ಹಿಟ್ ಆಗಿತ್ತು. ವಿಜಯ್ ಸೇತುಪತಿ ಮತ್ತು ತ್ರಿಷಾ ನಟಿಸಿದ್ದ ಈ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ದಾಖಲೆ ಬರೆದಿತ್ತು. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಜಾಕಿ ಖ್ಯಾತಿಯ ಭಾವನಾ 99 ಹೆಸರಿನಲ್ಲಿ ರೀಮೇಕ್ ಮಾಡಿದ್ದರು.

ಇದೀಗ, ಈ ಚಿತ್ರ ತೆಲುಗಿನಲ್ಲಿ ಜಾನು ಎಂಬ ಹೆಸರಿನಲ್ಲಿ ರೀಮೇಕ್ ಆಗ್ತಿದೆ. ತೆಲುಗಿನ ಯುವ ನಟ ಶಾರ್ವಾನಂದ್ ಮತ್ತು ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳುತ್ತಿದ್ದಾರೆ.

ಜಾನು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಆದರೆ, ಸಮಂತಾ ಅಭಿಮಾನಿಗಳು ಮಾತ್ರ ಬೇಸರ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಸಮಂತಾ ಫ್ಯಾನ್ಸ್ ನಿರಾಸೆಯಾಗಿದ್ದು ಯಾಕೆ? ಮುಂದೆ ಓದಿ...

ಪೋಸ್ಟರ್ ನಲ್ಲಿ ಇಲ್ಲ ಸಮಂತಾ

ಪೋಸ್ಟರ್ ನಲ್ಲಿ ಇಲ್ಲ ಸಮಂತಾ

ಜಾನು ಪೋಸ್ಟರ್ ಬಿಡುಗಡೆಯಾಗಿದ್ದು, ಮರುಭೂಮಿಯಲ್ಲಿ ನಾಲ್ಕು ಒಂಟೆಗಳು ಅದರ ಎದುರುಗಡೆ ಶಾರ್ವಾನಂದ್ ಬ್ಯಾಗ್ ಹಾಕ್ಕೊಂಡು ಹೋಗ್ತಿದ್ದಾರೆ. ಆದರೆ, ಈ ಪೋಸ್ಟರ್ ನಲ್ಲಿ ಎಲ್ಲೂ ಸಮಂತಾ ಕಾಣಿಸಿಕೊಂಡಿಲ್ಲ. ಹಾಗಾಗಿ, ಸಮಂತಾ ಫ್ಯಾನ್ಸ್ ನಿರಾಸೆಯಾಗಿದ್ದಾರೆ.

ಎಲ್ಲ ಚೆನ್ನಾಗಿದೆ, ಸಮಂತ ಯಾಕಿಲ್ಲ

ಎಲ್ಲ ಚೆನ್ನಾಗಿದೆ, ಸಮಂತ ಯಾಕಿಲ್ಲ

ಜಾನು ಸಿನಿಮಾದ ಪೋಸ್ಟರ್ ತುಂಬಾ ಚೆನ್ನಾಗಿದೆ. ಶಾರ್ವಾನಂದ್ ಮತ್ತು ಸಮಂತಾ ಕಾಂಬಿನೇಷನ್ ನಲ್ಲಿ ಈ ಸಿನಿಮಾ ನೋಡಲು ಕಾಯುತ್ತಿದ್ದೇವೆ. ಆದರೆ, ಪೋಸ್ಟರ್ ನಲ್ಲಿ ಸಮಂತಾ ಯಾಕಿಲ್ಲ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಉದ್ಯಮ ಕ್ಷೇತ್ರಕ್ಕೆ ಅಕ್ಕಿನೇನಿ ದಂಪತಿ

ಉದ್ಯಮ ಕ್ಷೇತ್ರಕ್ಕೆ ಅಕ್ಕಿನೇನಿ ದಂಪತಿ

ಸಿನಿಮಾರಂಗದಲ್ಲಿ ಯಶಸ್ಸು ಕಂಡಿರುವ ನಾಗಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ದಂಪತಿ, ಉದ್ಯಮ ಕ್ಷೇತ್ರಕ್ಕೂ ಎಂಟ್ರಿ ಕೊಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ನಾಗ್ ಮತ್ತು ಸ್ಯಾಮ್ ಹೊಸ ಬಿಸಿನೆಸ್ ಆರಂಭಿಸಲು ಚಿಂತನೆ ನಡೆಸಿದ್ದಾರಂತೆ.

ವೆಬ್ ಸೀರಿಸ್ ನಲ್ಲಿ ಸಮಂತಾ

ವೆಬ್ ಸೀರಿಸ್ ನಲ್ಲಿ ಸಮಂತಾ

ಓ ಬೇಬಿ ಸಿನಿಮಾದ ಯಶಸ್ಸಿನ ನಂತರ ನಾಗಾರ್ಜುನ ಜೊತೆ ಮನ್ಮಥಡು 2 ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಜಾನು ಜೊತೆಗೆ ದಿ ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸೀರಿಸ್ ನಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
Samantha akkineni and sharwanand starrer Jaanu movie first poster released. it is remake of 96 movie. but, samantha fans are unhappy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X