For Quick Alerts
  ALLOW NOTIFICATIONS  
  For Daily Alerts

  "ಹೊಸ ಕಥೆ.. ಹೊಸ ಅಧ್ಯಾಯ ಆರಂಭಿಸೋಣ": ಸಮಂತಾ ತಂದೆ ಹಾಕಿದ ಪೋಸ್ಟ್ ಹಿನ್ನೆಲೆಯೇನು?

  |

  ನಾಗ ಚೈತನ್ಯ ಹಾಗೂ ಸಮಂತಾ ಇಬ್ಬರೂ ಟಾಲಿವುಡ್‌ನಲ್ಲಿ ಕ್ಯೂಟ್ ಕಪಲ್ ಎನಿಸಿಕೊಂಡಿದ್ದರು. ಏಳೆಂಟು ವರ್ಷ ಇಬ್ಬರೂ ಪ್ರೀತಿ ಮಾಡಿ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದರು. ಆದರೆ, ವಿವಾಹವಾದ ಕೆಲವೇ ವರ್ಷಗಳ ಬಳಿಕ ಇಬ್ಬರೂ ಬೇರೆಯಾಗಿದ್ದಾರೆ.

  ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಡಿವೋರ್ಸ್‌ಗೆ ಮುಂದಾಗಿದ್ದು ಅಭಿಮಾನಿಗಳಿಗೆ ಶಾಕ್ ಆಗಿತ್ತು. ಪ್ರೇಮ ಪಕ್ಷಿಗಳಾಗಿದ್ದವರು ಹೀಗೆ ಬೇರೆಯಾಗುತ್ತಾರೆಂಬುದನ್ನು ಯಾರೂ ಊಹೆನೂ ಮಾಡಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸಮಂತಾ ಹಾಗೂ ಅಕ್ಕಿನೇನಿ ಕುಟುಂಬ ಈ ಜೋಡಿಯ ನಿರ್ಧಾರ ಕೇಳಿ ಶಾಕ್ ಆಗಿದ್ದರು.

  ಸಮಂತಾ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಸದ್ದು ಮಾಡೋಕೆ ರೆಡಿ: 'ಯಶೋದಾ' ಟೀಸರ್‌ಗೆ ಮುಹೂರ್ತ!ಸಮಂತಾ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಸದ್ದು ಮಾಡೋಕೆ ರೆಡಿ: 'ಯಶೋದಾ' ಟೀಸರ್‌ಗೆ ಮುಹೂರ್ತ!

  ಇನ್ನೇನು ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಬೇರೆಯಾಗಲೇ ಬೇಕು ಅಂತ ನಿರ್ಧರಿಸಿದ್ದರು. ಇದೇ ಸುದ್ದಿ ಹೊರಬೀಳುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡೋಕೆ ಶುರು ಮಾಡಿದ್ದರು. ಆದ್ರೀಗ ಮಾಜಿ ಅಳಿಯನಿಗೆ ಸಮಂತಾ ತಂದೆ ಹೃದಯಸ್ಪರ್ಶಿ ಪದಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದಾರೆ.

  ವಿಚ್ಛೇದನದ ಸುದ್ದಿ ಕೇಳಿ ಶಾಕ್

  ವಿಚ್ಛೇದನದ ಸುದ್ದಿ ಕೇಳಿ ಶಾಕ್

  ಸಮಂತಾ ತಂದೆ ಜೋಸೆಫ್ ಪ್ರಭು ಮಗಳ ಡಿವೋರ್ಸ್ ಸುದ್ದಿ ಕೇಳಿ ಶಾಕ್ ಆಗಿದ್ದರು. ಈ ಹಿಂದೆನೇ ಮಗಳ ವಿಚ್ಛೇದನದ ಬಗ್ಗೆ ನೋವಿನಿಂದಲೇ ಮಾತಾಡಿದ್ದರು. ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಬೇರೆಯಾಗುತ್ತಿರುವ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ಇವರಿಬ್ಬರ ಸಂಬಂಧ ಸರಿ ಹೋಗಬಹುದು ಎಂದುಕೊಂಡಿದ್ದರು. ಅಲ್ಲದೆ ಅವರ ಕುಟುಂಬಕ್ಕೆ ನಾಗಚೈತನ್ಯ ತುಂಬಾನೇ ಹತ್ತಿರದಲ್ಲಿದ್ದರು ಎಂದು ಹೇಳಿಕೆ ನೀಡಿದ್ದರು. ಆದ್ರೀಗ ಮತ್ತೆ ಮಾಜಿ ಅಳಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ಎರಡು ಸಿನಿಮಾ ಸೋಲಿನಿಂದ ನಾಗ ಚೈತನ್ಯಗೆ ಶಾಕ್: ಮುಂದಿನ ಹೆಜ್ಜೆಯೇನು?ಎರಡು ಸಿನಿಮಾ ಸೋಲಿನಿಂದ ನಾಗ ಚೈತನ್ಯಗೆ ಶಾಕ್: ಮುಂದಿನ ಹೆಜ್ಜೆಯೇನು?

  ನಾಗಚೈತನ್ಯ ನೆನಪು

  ನಾಗಚೈತನ್ಯ ನೆನಪು

  ಇತ್ತೀಚೆಗೆ ಜೋಸೆಫ್ ಪ್ರಭು ಸೋಶಿಯಲ್ ಮೀಡಿಯಾದಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. 5 ವರ್ಷ ಹಿಂದೆ ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ಮದುವೆ ಫೋಟೊಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. "ಬಹಳ ಹಿಂದೆನ ಮಾತು. ಒಂದು ಕಥೆಯಿತ್ತು. ಆದೀಗ ಅಸ್ತಿತ್ವದಲ್ಲಿ ಇಲ್ಲ. ಹಾಗಾಗಿ ಹೊಸ ಕಥೆಯನ್ನು ಆರಂಭಿಸೋಣ. ಹಾಗೇ ಹೊಸ ಅಧ್ಯಾಯವನ್ನು ಆರಂಭ ಮಾಡೋಣ." ಎಂದು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ಇನ್ನೂ ನಾಗ ಚೈತನ್ಯ ನೆನಪು ಮಾಸಿಲ್ಲ

  ಇನ್ನೂ ನಾಗ ಚೈತನ್ಯ ನೆನಪು ಮಾಸಿಲ್ಲ

  ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಬೇರೆಯಾಗಿ ವರ್ಷವಾಗುತ್ತಿದೆ. ಈಗಾಗಲೇ ಇಬ್ಬರೂ ಹಳೆಯದೆಲ್ಲವನ್ನೂ ಮರೆತು ತಮ್ಮ ಮುಂದಿನ ಬದುಕಿನೆಡೆಗೆ ಮುನ್ನುಗ್ಗುತ್ತಿದ್ದಾರೆ. ಆದ್ರೀಗ ಸಮಂತಾ ತಂದೆ ಹಾಕಿ ಪೋಸ್ಟ್ ಚರ್ಚೆಗೆ ಕಾರಣವಾಗಿದೆ. ಇದ್ದಕ್ಕಿದ್ದ ಹಾಗೇ ಸಮಂತಾ ತಂದೆ ಜೋಸೆಫ್ ಪ್ರಭು ಯಾಕೀ ಪೋಸ್ಟ್ ಹಾಕಿದ್ದಾರೆ? ಇನ್ನೂ ನಾಗಚೈತನ್ಯರನ್ನು ಮರೆಯಲು ಸಾಧ್ಯವಾಗುತ್ತಿಲ್ಲವೇ? ಹೊಸ ಕಥೆ.. ಹೊಸ ಅಧ್ಯಾಯ? ಎಂಬುದರ ಅರ್ಥವೇನು? ಅನ್ನೋದು ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ.

  ಸಮಂತಾ ಫುಲ್ ಬ್ಯುಸಿ

  ಸಮಂತಾ ಫುಲ್ ಬ್ಯುಸಿ

  ಡಿವೊರ್ಸ್ ಬಳಿಕ ಸಮಂತಾ ಮತ್ತೆ ಪ್ರೀತಿ, ಮದುವೆ ಬಗ್ಗೆ ಯೋಚನೆ ಮಾಡೋ ಸ್ಥಿತಿಯಲ್ಲಿ ಇಲ್ಲ ಅನ್ನೋದನ್ನು ಈಗಾಗಲೇ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮಧ್ಯೆ ನಾಗಚೈತನ್ಯ ಮತ್ತೆ ತಮ್ಮ ಬಾಳಲ್ಲಿ ಬರುತ್ತಾರೆ ಅನ್ನೋ ಬಗ್ಗೆ ಸುಳಿವು ಕೂಡ ಕೊಟ್ಟಿಲ್ಲ. ಹೀಗಾಗಿ ಮತ್ತೆ ಮದುವೆ ಆಗುತ್ತಾರಾ? ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗೋದು ಅನುಮಾನ. ಇನ್ನೊಂದು ಕಡೆ ಸಮಂತಾ ಬಾಲಿವುಡ್, ಹಾಲಿವುಡ್, ಟಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  Recommended Video

  Coffee Nadu Chandu | ಬಿಟ್ಟಿ ಸಲಹೆ ಕೊಟ್ಟವ್ರಿಗೆ ಚಂದು ಖಡಕ್ ಉತ್ತರ | Filmibeat Kannada
  English summary
  South Actress Samantha, Samantha Father to Naga Chaitanya, Samantha Father's Heartfelt Words, Naga Chaitanya And Samantha, Naga Chaitanya And Samantha Divorce,
  Monday, September 5, 2022, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X