For Quick Alerts
  ALLOW NOTIFICATIONS  
  For Daily Alerts

  'ಯಾವಾಗ ಮಗುವಿಗೆ ಜನ್ಮ ನೀಡ್ತೀರಿ?' ಈ ಸಲ ಸಮಂತಾ ಡೇಟ್ ಕೊಟ್ಟೆಬಿಟ್ರು!

  |

  ಟಾಲಿವುಡ್ ತಾರಾಜೋಡಿ ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ಮದುವೆ ಆಗಿ ಎರಡು ವರ್ಷ ಕಳೆದಿದೆ. ಅಕ್ಟೋಬರ್ 7, 2017 ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ನಾಗ್ ಮತ್ತು ಸ್ಯಾಮ್ ಜೋಡಿ ಎರಡು ವರ್ಷದ ದಾಂಪತ್ಯ ಜೀವನ ಪೂರ್ಣಗೊಳಿಸಿದ್ದಾರೆ.

  ಸಮಂತಾ ಮತ್ತು ನಾಗಚೈತನ್ಯ ಇಬ್ಬರಿಗೂ ಸದಾ ಕಾಡುತ್ತಿರುವ ಪ್ರಶ್ನೆ ''ನೀವು ಮಗುವಿಗೆ ಜನ್ಮ ಯಾವಾಗ ನೀಡ್ತೀರಿ''. ಇನ್ನು ಪ್ಲಾನ್ ಮಾಡಿಲ್ಲ, ಸದ್ಯಕ್ಕೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದೇವೆ, ಎರಡು ವರ್ಷ ಲೈಫ್ ಎಂಜಾಯ್ ಮಾಡ್ತೀವಿ ಎಂದು ಹೇಳುತ್ತಾ ಬಂದಿದ್ದರು.

  ರಶ್ಮಿಕಾ ಮಂದಣ್ಣ ಮಾತಿಗೆ ಸಮಂತಾ ಫ್ಯಾನ್ಸ್ ಶಾಕ್ ಆಗಿದ್ದೇಕೆ?ರಶ್ಮಿಕಾ ಮಂದಣ್ಣ ಮಾತಿಗೆ ಸಮಂತಾ ಫ್ಯಾನ್ಸ್ ಶಾಕ್ ಆಗಿದ್ದೇಕೆ?

  ಈಗ ಮತ್ತೊಮ್ಮೆ ಅದೇ ಪ್ರಶ್ನೆಯನ್ನ ಅಭಿಮಾನಿಯೊಬ್ಬರು ಸಮಂತಾ ಅವರಿಗೆ ಕೇಳಿದ್ದಾರೆ. ಈ ಸಲ ಸಮಂತಾ ಯಾವಾಗ ಎಂಬ ದಿನಾಂಕವನ್ನೇ ಘೋಷಿಸಿದ್ದಾರೆ. ಯಾವ ಡೇಟ್? ಮುಂದೆ ಓದಿ....

  ಕಥೆಗೆ ಪ್ರಾಮುಖ್ಯತೆ ಕೊಟ್ಟ ಸಮಂತಾ

  ಕಥೆಗೆ ಪ್ರಾಮುಖ್ಯತೆ ಕೊಟ್ಟ ಸಮಂತಾ

  ಮದುವೆ ಬಳಿಕ ರೆಗ್ಯುಲರ್ ಸಿನಿಮಾಗಳನ್ನ ಮಾಡದ ಸಮಂತಾ ಕೆಲವೇ ಕೆಲವು ನಿರ್ದಿಷ್ಟ ಚಿತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಂಡರು. ಗೃಹಿಣಿ ಪಾತ್ರಗಳತ್ತ ಗಮನ ಹರಿಸಿದರು. ಸ್ಕ್ರಿಪ್ಟ್ ಗೆ ಹೆಚ್ಚು ಒತ್ತು ನೀಡಿದರು. ರಂಗಸ್ಥಲಂ, ಮಹಾನಟಿ, ಯುಟರ್ನ್, ಸೂಪರ್ ಡಿಲೆಕ್ಸ್, ಮಜಿಲಿ, ಓಹ್ ಬೇಬಿ, 96 ರೀಮೇಕ್ ಚಿತ್ರಗಳಲ್ಲಿ ನಟಿಸಿದರು.

  ಗರ್ಭಿಣಿ ವದಂತಿ ಬಗ್ಗೆ ಸಮಂತಾ ಕೊಟ್ಟ ಪ್ರತಿಕ್ರಿಯೆಗರ್ಭಿಣಿ ವದಂತಿ ಬಗ್ಗೆ ಸಮಂತಾ ಕೊಟ್ಟ ಪ್ರತಿಕ್ರಿಯೆ

  ಯಾವಾಗ ಮಗುವಿಗೆ ಜನ್ಮ ನೀಡ್ತೀರಿ?

  ಯಾವಾಗ ಮಗುವಿಗೆ ಜನ್ಮ ನೀಡ್ತೀರಿ?

  ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಸಮಂತಾ ಅವರಿಗೆ ''ನೀವು ಯಾವಾಗ ಮಗುವಿಗೆ ಜನ್ಮ ನೀಡ್ತೀರಿ'' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಮಂತಾ ''ನನ್ನ ದೇಹದ ಕಾರ್ಯವೈಖರಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ, ಆಗಸ್ಟ್ 7 ಬೆಳಿಗ್ಗೆ 7, ಇಪತ್ತು ಇಪತ್ತೆರಡು (2022)'' ಎಂದಿದ್ದಾರೆ.

  ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!

  ಏನು ಈ ದಿನಾಂಕದ ಮರ್ಮ?

  ಏನು ಈ ದಿನಾಂಕದ ಮರ್ಮ?

  ನಾಗಚೈತನ್ಯ ಅವರ ಹುಟ್ಟುಹಬ್ಬ ನವೆಂಬರ್ 23, ಸಮಂತಾ ಅವರ ಹುಟ್ಟುಹಬ್ಬ ಏಪ್ರಿಲ್ 28....ಆದರೆ, ಸಮಂತಾ ಅವರು ಹೇಳಿರುವ ಆಗಸ್ಟ್ 7 ರಂದು ಏನಿದೆ ಸ್ಪೆಷಲ್? ಯಾಕೆ ಈ ದಿನವನ್ನೇ ಹೇಳಿದ್ರು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

  ಸಮಂತಾ ಬಗ್ಗೆ ಶ್ರದ್ಧಾ ಶ್ರೀನಾಥ್ ಅಚ್ಚರಿ ಕಾಮೆಂಟ್, ತೆಲುಗು ಫ್ಯಾನ್ಸ್ ಫುಲ್ ಗರಂ!ಸಮಂತಾ ಬಗ್ಗೆ ಶ್ರದ್ಧಾ ಶ್ರೀನಾಥ್ ಅಚ್ಚರಿ ಕಾಮೆಂಟ್, ತೆಲುಗು ಫ್ಯಾನ್ಸ್ ಫುಲ್ ಗರಂ!

  ಗೊಂದಲದಲ್ಲಿ ಅಭಿಮಾನಿಗಳು

  ಗೊಂದಲದಲ್ಲಿ ಅಭಿಮಾನಿಗಳು

  ಪದೇ ಪದೇ ಸಮಂತಾ ಅವರಿಗೆ ಎದುರಾಗುತ್ತಿರುವ ಈ ಪ್ರಶ್ನೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಸ್ಯಾಮ್ ಸುಮ್ಮನೆ ಯಾವುದೋ ಒಂದು ದಿನಾಂಕವನ್ನ ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದ ಅಭಿಮಾನಿಗಳು ಸುಮ್ಮನೆ ತಲೆಕೆಡಿಸಿಕೊಂಡಿದ್ದಾರೆ. ಸದ್ಯಕ್ಕೆ 96 ಚಿತ್ರ ರೀಮೇಕ್ ಮಾಡುತ್ತಿರುವ ಸಮಂತಾ, ಜೊತೆಯಲ್ಲಿ ವೆಬ್ ಸೀರಿಸ್ ನಿರ್ಮಾಣಕ್ಕೂ ಮುಂದಾಗಿದ್ದಾರೆ.

  English summary
  When will you give birth to baby.....? a fan asked to samantha in instagram. so, she gave stunning reply to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X