ಅಭಿಮಾನಿಗಳ ಅಭಿಮಾನ ಕಂಡು ಕಣ್ಣೀರಾದ ಸಮಂತಾ ; ಹೇಗಿತ್ತು ಸ್ಯಾಮ್ ಸಂವಾದ..?
ಸಮಂತಾ ವ್ಯೆಯಕ್ತಿಕ ಬದುಕಿನಲ್ಲಿ ಏನೇ ಏರಿಳಿತಗಳಿರಲಿ, ಆದರೆ ಸಮಂತಾ ಮಾತ್ರ ಕುಗ್ಗಿಲ್ಲ. ಬಗ್ಗಿಲ್ಲ. ಮೈಯೋಸಿಟಿಸ್ ಕಾಯಿಲೆ ಅಂಟಿಕೊಂಡರು ಸ್ಯಾಮ್ ಹೆದರಲಿಲ್ಲ. ಬೆದರಲಿಲ್ಲ. ಬದಲಿಗೆ ಎಲ್ಲವನ್ನೂ ಸಂಭಾಳಿಸುತ್ತಾ, ಸಹಿಸಿಕೊಳ್ಳುತ್ತಾ ಚಿತ್ರರಂಗದಲ್ಲಿ ಮುಂದುವರೆಯುತ್ತಿದ್ದಾರೆ ಸಮಂತಾ.
ಇಂಥ ಸಮಂತಾ ಇನ್ನೂ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೋವಲ್ಲಿ ಕಣ್ಣೀರಿಟ್ಟಾಗ ಇವರ ಅನೇಕ ಅಭಿಮಾನಿಗಳು ಕಣ್ಣೀರಾದ ಉದಾಹರಣೆ ಇದೆ. ವಿಚ್ಚೇದನ ಪಡೆದು ನಾಗ ಚೈತನ್ಯ ಅವರಿಂದ ದೂರವಾದಾಗ ಸಂಕಟದಿಂದ ಒದ್ದಾಡಿದ್ದು ಇದೆ. ಒಂದರ್ಥದಲ್ಲಿ ಸಮಂತಾ ಅಭಿಮಾನಿಗಳ ಪಾಲಿನ ದೇವತೆ. ಇಂಥ ದೇವತೆಯ ದರ್ಶನ ಮೊನ್ನೆ ಅಭಿಮಾನಿಗಳಿಗೆ ಆಗಿದೆ.

ಹೌದು, ತಮ್ಮ ಎಲ್ಲ ಕೆಲಸದ ಒತ್ತಡದ ನಡುವೆ ಬಿಡುವು ಮಾಡಿಕೊಂಡು, ಸಮಂತಾ ತನ್ನ ಅಚ್ಚು ಮೆಚ್ಚಿನ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ಗಂಟೆ ಗಟ್ಟಲೆ ಕುಳಿತು ಹರಟೆ ಹೊಡೆದಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ತಂದಿದ್ದ ಉಡುಗೊರೆಗಳನ್ನ ಸ್ವೀಕರಿಸಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ ಸಮಂತಾ.
ಇನ್ನೂ ಇದೇ ಸಮಯದಲ್ಲಿ, ಅಭಿಮಾನಿಗಳ ಅಭಿಮಾನದ ಮಾತುಗಳನ್ನ ಕೇಳಿ ಮೊದಲೇ ಭಾವುಕರಾಗಿದ್ದ ಸಮಂತಾ ಅವರನ್ನ ಮಹಿಳಾ ಅಭಿಮಾನಿಯೊಬ್ಬರು ಇನ್ನಷ್ಟು ಭಾವುಕರನ್ನಾಗಿಸಿದ್ದಾರೆ. ಸಮಂತಾ ಅವರನ್ನ ತಬ್ಬಿಕೊಂಡು ಆ ಅಭಿಮಾನಿ ಕಣ್ಣೀರನ್ನೂ ಹಾಕಿದ್ದಾರೆ.
ಹಾಗೇ ನೋಡಿದರೆ ವ್ಯೆಯಕ್ತಿಕ ಬದುಕಿನ ತೊಂದರೆ ಹಾಗೂ ತೊಡಕುಗಳಿಂದ ಕಂಗೆಟ್ಟ ಸಮಂತಾ ಅವರಲ್ಲಿ ಅವರ ಅಭಿಮಾನಿಗಳು ಇಂಥಹದ್ದೊಂದು meet & greet ಕಾರ್ಯಕ್ರಮದ ಬೇಡಿಕೆಯನ್ನ ಇಡುತ್ತಾನೇ ಬಂದಿದ್ದರು. ಸಮಂತಾ ಅವರ ಆಸೆಯೂ ಅದೇ ಆಗಿತ್ತು ಅನ್ನಿ. ಹೀಗಾಗಿಯೇ ಹಾಲಿವುಡ್ ಸರಣಿ ಸಿಟಾಡೆಲ್ ನ ಹಿಂದಿ ರಿಮೇಕ್ ಆದ ಹನಿ ಬನಿಯ ಪ್ರಚಾರದ ಕಣಕ್ಕೆ ಧುಮುಕುವ ಮುನ್ನ ತಮ್ಮ ಅಭಿಮಾನಿಗಳ ಜೊತೆ ಹರಟೆ ಹೊಡೆದಿದ್ದಾರೆ ಸಮಂತಾ

ಮೈಯೋಸಿಟಿಸ್ ನಿಂದ ಚೇತರಿಸಿಕೊಂಡಿರುವ ಸ್ಯಾಮ್..!
ಮೈಯೋಸಿಟಿಸ್ ಕಾಯಿಲೆಯಿಂದ ಹೈರಾಣಾಗಿದ್ದ ಸಮಂತಾ, ಆ ನಂತರ ಚೇತರಿಸಿಕೊಂಡು ಶಾಕುಂತಲಂ, ಖುಷಿ ಹಾಗೂ ಯಶೋಧಾ ಚಿತ್ರಗಳನ್ನ ಪೂರ್ಣಗೊಳಿಸಿದರು. ಆದರೆ ಸಮಂತಾ ಎಷ್ಟೇ ಕಷ್ಟಪಟ್ಟು ಈ ಚಿತ್ರಗಳನ್ನ ಮಾಡಿದ್ದರೂ ಕೂಡ ಮೂವರು ಸಿನಿಮಾದ ವ್ಯಾಪಾರ ಅಂದುಕೊಂಡಂತೆ ಆಗಲಿಲ್ಲ.
ಈಗ ಸಮಂತಾಗೆ ತಮ್ಮ ಮುಂದಿನ ವೆಬ್ ಸರಣಿ ಸಿಟಾಡೆಲ್ ನ ಇಂಡಿಯನ್ ವರ್ಷನ್ ಹನಿ ಬನಿಯನ್ನ ಎದುರು ನೋಡುತ್ತಿದ್ದಾರೆ. ಹಲವಾರು ನೋವುಗಳ ಮಧ್ಯೆ ಸಮಂತಾ ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಪ್ರಯತ್ನವನ್ನ ಸಮಂತಾ ಈ ಚಿತ್ರದ ಮೂಲಕ ಮಾಡುತ್ತಿದ್ದಾರೆ. ಸಮಂತಾ ಕಥೆ ಮುಗಿದ ಅಧ್ಯಾಯ ಎಂದುಕೊಂಡವರಿಗೆಲ್ಲ ಸಿಟಾಡೆಲ್ ಮೂಲಕ ತಿರುಗೇಟನ್ನ ಕೊಡಲು ಹವಣಿಸುತ್ತಿದ್ದಾರೆ ಸಮಂತಾ.
ಒಟ್ನಲ್ಲಿ ಸಮಂತಾ ತಮ್ಮ ಅಭಿಮಾನಿಗಳಿಗಾಗಿ meet & greet ಕಾರ್ಯಕ್ರಮ ಹಮ್ಮಿಕೊಂಡು, ಕೆಲ ಹೊತ್ತು ತಮ್ಮೆಲ್ಲ ನೋವನ್ನ ಮರೆಯುವ ಪ್ರಯತ್ನ ಪಟ್ಟಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿ ಬಂದಿದ್ದ ಎಲ್ಲರ ಜೊತೆ ಆತ್ಮೀಯವಾಗಿ ಮಾತನಾಡಿ ಕಳಿಸಿದ್ದಾರೆ. ನೆನಪಿನಲ್ಲಿ ಉಳಿಯುವಂಥ ಫೋಟೋಗಳನ್ನು ಕೂಡ ಕ್ಲಿಕಿಸಿಕೊಂಡಿದ್ದಾರೆ. ಆ ಫೋಟೋಗಳಿಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ


Click it and Unblock the Notifications