'ಐ ಲವ್ ಯು ಸ್ಯಾಮ್' ಎಂದ ಅಭಿಮಾನಿಗೆ ಸಮಂತಾ ನೀಡಿದ ಪ್ರತಿಕ್ರಿಯೆ ಏನು.?

ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಬಹು ಬೇಡಿಕೆ ಹೊಂದಿರುವ ನಟಿ ಸಮಂತಾ. ತೆಲುಗಿನ 'ಯೇ ಮಾಯ ಚೇಸಾವೆ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಸಮಂತಾಗೆ ದೊಡ್ಡ ಅಭಿಮಾನಿ ಬಳಗವಿದೆ.

ಸಮಂತಾಗೆ ಮದುವೆಯಾಗಿದ್ದರೂ, ಎಷ್ಟೋ ಯುವಕರ ಪಾಲಿಗೆ ಆಕೆ ಇನ್ನೂ ಡ್ರೀಮ್ ಗರ್ಲ್. ಹರೆಯದ ಹುಡುಗರ ಕ್ರಷ್ ಆಗಿರುವ ಸಮಂತಾ ಅಕ್ಕಿನೇನಿಗೆ ಆಗಾಗ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ ಲವ್ ಪ್ರಪೋಸಲ್ ಗಳನ್ನ ಕಳುಹಿಸುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಅಂಥದ್ದೇ ಒಂದು ಲವ್ ಪ್ರಪೋಸಲ್ ಸಮಂತಾಗೆ ಬಂದಿತ್ತು.

ಪುಸ್ತಕದ ತುಂಬಾ 'ಐ ಲವ್ ಯುವ ಸ್ಯಾಮ್' ಅಂತ ಬರೆದು, ''ಇದನ್ನ ಬರೆಯಲು 3 ಗಂಟೆ 15 ನಿಮಿಷ ತೆಗೆದುಕೊಂಡೆ. ನನ್ನ ತಾಯಿ ಸಿಡುಕಿದರೂ, ನಾನು ನಿಲ್ಲಿಸಲಿಲ್ಲ. ನಾನು ನಿಮ್ಮನ್ನು ಅಷ್ಟು ಪ್ರೀತಿಸುತ್ತೇನೆ'' ಎಂದು ಹುಡುಗನೊಬ್ಬ ಸಮಂತಾಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದ.

Samantha gets love proposal but says your mom must be angry with me

ಅದನ್ನ ನೋಡಿದ ಸಮಂತಾ, ''ಅಯ್ಯೋ ದೇವರೇ.. ನಿಮ್ಮ ತಾಯಿಗೆ ಖಂಡಿತ ನನ್ನ ಮೇಲೆ ಸಿಟ್ಟು ಬಂದಿರುತ್ತದೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ. ಆದ್ರೆ, ದಯವಿಟ್ಟು ಚೆನ್ನಾಗಿ ಓದಿ'' ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೂ, ಸಿನಿಮಾಗಳ ವಿಷಯಕ್ಕೆ ಬಂದರೆ, 'ಜಾನು' ಚಿತ್ರದಲ್ಲಿ ಸಮಂತಾ ಬಿಜಿಯಿದ್ದಾರೆ. ಈಗಾಗಲೇ 'ಜಾನು' ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

More from Filmibeat

English summary
Tollywood Actress Samantha gets love proposal but says your mom must be angry with me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X