For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?

  |

  ವಿಚ್ಛೇದನದ ಬಳಿಕ ಪ್ರತಿದಿನ ಸಮಂತಾ ಬಗ್ಗೆ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್ ಮಾಡಿದರೂ ಅದಕ್ಕೆ ನೂರೆಂಟು ಕಮೆಂಟ್‌ಗಳು ಬೀಳುತ್ತವೆ. ಸಮಂತಾ ಕೂಡ ಇದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಿದ್ದರು.

  ಕಳೆದ ಕೆಲವು ದಿನಗಳಿಂದ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದೇ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಕೆಲವು ಯೂಟ್ಯೂಬ್ ಚಾನೆಲ್ ಹಾಗೂ ವೆಬ್‌ಸೈಟ್‌ಗಳು ಇದೇ ವಿಷಯವನ್ನಿಟ್ಟುಕೊಂಡು ನಾನಾ ರೀತಿ ಸುದ್ದಿ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸಮಂತಾ ಗರಂ ಆಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?

  ಪತ್ತೆನೇ ಇಲ್ಲ ಸಮಂತಾ

  ಪತ್ತೆನೇ ಇಲ್ಲ ಸಮಂತಾ

  ದಕ್ಷಿಣ ಭಾರತದ ಟಾಪ್ ಹೀರೊಯಿನ್ ಸಮಂತಾ. ತೆಲುಗು ಹಾಗೂ ತಮಿಳಿನ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳ ಜೊತೆನೂ ಸಮಂತಾ ನಟಿಸಿದ್ದಾರೆ. ಮದುವೆ ಮುನ್ನ ಸೌತ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಿದ್ದು ನಟಿ ಸಮಂತಾ. ಇನ್ನು ವಿಚ್ಛೇದನದ ಬಳಿಕವಂತೂ ಹಿಂದೆಂದಿಗಿಂತಲೂ ಸಮಂತಾ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಈ ಮಧ್ಯೆ ಸಮಂತಾ ಸೋಶಿಯಲ್ ಮೀಡಿಯಾದಿಂದಲೇ ನಾಪತ್ತೆಯಾಗಿದ್ದಾರೆ. ಜುಲೈನಲ್ಲಿ ಪೋಸ್ಟ್ ಮಾಡಿದ್ದು ಬಿಟ್ಟರೆ, ಆರು ದಿನಗಳ ಹಿಂದೆ 'ಯಶೋದಾ' ಸಿನಿಮಾ ಪೋಸ್ಟರ್ ಹಾಕಿದ್ದಾರಷ್ಟೇ. ಆದರೆ, ಕಳೆದ ಒಂದೂವರೆ ತಿಂಗಳಿಂದ ಮುಖವನ್ನೇ ತೋರಿಸಿಲ್ಲ.

  ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!

  ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಫೈಟ್

  ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಫೈಟ್

  ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳದೆ ಇರೋದ್ರಿಂದ ಯೂಟ್ಯೂಬ್ ಚಾನೆಲ್‌ಗಳು ಹಾಗೂ ಕೆಲವು ವೆಬ್‌ಸೈಟ್‌ಗಳು ಸಮಂತಾ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದರು. ಅದು ಸಮಂತಾ ನಿದ್ದೆ ಕೆಡಿಸಿದೆ ಎನ್ನಲಾಗಿದೆ. ಹೀಗಾಗಿ ತನ್ನ ಲೀಗಲ್ ಟೀಮ್ ಜೊತೆ ಸಮಾಲೋಚನೆ ನಡೆಸಿರೋ ಸಮಂತಾ ತಮ್ಮ ಬಗ್ಗೆ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದಾರೆ ಅನ್ನೋದನ್ನು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ಆ ವರದಿಯಲ್ಲಿ ಏನಿದೆ?

  ಆ ವರದಿಯಲ್ಲಿ ಏನಿದೆ?

  ಯೂಟ್ಯೂಬ್ ಚಾನೆಲ್‌ಗಳು ಹಾಗೂ ವೆಬ್‌ಸೈಟ್‌ಗಳು ಸಮಂತಾ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಪ್ರಸಾರ ಮಾಡಿದ್ದವು ಅನ್ನೋದು ಸಮಂತಾ ಆರೋಪ. ಸಮಂತಾ ಆರೋಗ್ಯ ಸರಿಯಿಲ್ಲ. ಎರಡು ತಿಂಗಳಿಂದ ಕಾಣಿಸಿಕೊಳ್ಳದೇ ಇರುವುದಕ್ಕೆ ಆನಾರೋಗ್ಯವೇ ಕಾರಣ ಅಂತ ಕೆಲವು ಯೂಟ್ಯೂಬ್ ಚಾನೆಲ್‌ಗಳು ವರದಿ ಮಾಡಿದ್ದವು. ಇನ್ನೊಂದು ಕಡೆ ಬೇರೆ ಏನೋ ಟೈಟಲ್ ಕೊಟ್ಟು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಇದು ಸಮಂತಾಗೆ ತುಂಬಾನೇ ನೋವುಂಟು ಮಾಡಿದೆ ಎನ್ನಲಾಗಿದೆ.

  ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?

  ಸಮಂತಾ ಆರೋಗ್ಯ ಚೆನ್ನಾಗಿದೆ

  ಸಮಂತಾ ಆರೋಗ್ಯ ಚೆನ್ನಾಗಿದೆ

  ಸಮಂತಾ ಹಾಗೂ ನಾಗಚೈತನ್ಯ ಇಬ್ಬರ ವಿಚ್ಛೇದನಕ್ಕೆ ಕಾರಣಗಳನ್ನು ಯೂಟ್ಯೂಬ್ ಚಾನೆಲ್‌ಗಳಲ್ಲಿ ನೀಡಲಾಗಿತ್ತು. ಇನ್ನೊಂದು ಕಡೆ ಮಗುವಿನ ವಿಚಾರಕ್ಕೆ ಸಮಂತಾ ಹಾಗೂ ನಾಗ ಚೈತನ್ಯ ನಡುವೆ ಕಿತ್ತಾಟ ನಡೆದಿತ್ತು ಎಂದು ವರದಿಯನ್ನು ಮಾಡಲಾಗಿತ್ತು. ಇಂತಹ ಸುದ್ದಿಗಳನ್ನು ಪ್ರಚಾರ ಮಾಡಿದ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿವೆ. ಇನ್ನೊಂದು ಕಡೆ ಸಮಂತಾ ಆರೋಗ್ಯ ಚೆನ್ನಾಗಿದ್ದು, ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ ಎನ್ನಲಾಗಿದೆ.

  English summary
  Samantha Getting Ready To Take Legal Action Against YouTube Channels And Websites, Know More.
  Tuesday, September 6, 2022, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X