ಸಮಂತಾಗೆ 35 ವರ್ಷ: ಹುಟ್ಟುಹಬ್ಬಕ್ಕೆ ಸಿಕ್ಕ ಬಿಗ್ ಗಿಫ್ಟ್ ಏನು?
ನಟಿ ಸಮಂತಾಗೆ ಇಂದು (ಏ.28) ಸಂಭ್ರಮದ ದಿನ. ಯಾಕೆ ಸಮಂತಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಸದ್ಯ ಸಂತಸದಲ್ಲಿ ಇದ್ದಾರೆ ಸಮಂತಾ. ಇನ್ನು ಅಭಿಮಾನಿ ಬಳಗ ನಟಿ ಸಮಂತಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಮಂತಾಗೆ ಚಿತ್ರರಂಗದಲ್ಲೂ ಸಾಕಷ್ಟು ಸ್ನೇಹಿತರು, ಪ್ರೀತಿ ಪಾತ್ರರು ಇದ್ದಾರೆ. ಎಲ್ಲರೂ ಸಮಂತಾಗೆ ಶುಭಕೋರುತ್ತಿದ್ದಾರೆ. ಕನ್ನಡದ ನಟಿ ರಮ್ಯಾ ಕೂಡ ಸಮಂತಾಗೆ ಪ್ರೀತಿಯಿಂದ ಹುಟ್ಟು ಹಬ್ಬದ ಶುಭಾಶಯವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಈ ಹುಟ್ಟು ಹಬ್ಬದ ಮೂಲಕ ಸಮಂತಾ 35ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಸಮಂತಾಳನ್ನು ನೋಡಿದರೆ 35 ವರ್ಷದ ಮಹಿಳೆ ಎಂದು ಅನಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ಸಮಂತಾ ತಮ್ಮ ಬ್ಯೂಟಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಹುಟ್ಟುಹಬ್ಬ ಎಂದರೆ ಉಡುಗೊರೆಗಳ ಬಗ್ಗೆ ಎಲ್ಲರಿಗೂ ಗಮನ ಹೋಗುತ್ತದೆ. ಈ ಹಿಂದೆ ಮಾಜಿ ಪತಿ ನಾಗಚೈತನ್ಯ ಜೊತೆ ಸಮಂತಾ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.
Recommended Video


ಆದರೆ ಈ ಬಾರಿ ಸಮಂತಾಗೆ ಸಿಕ್ಕಿರುವ ಅತ್ಯಂತ ಅಮೂಲ್ಯವಾದ ಉಡುಗೊರೆ ಎಂದರೆ ಆಕೆ ಅಭಿನಯದ ಸಿನಿಮಾ. ಸಮಂತಾ ಅಭಿನಯದ 'ಕಾತುವಾಕುಲ ರೆಂಡು ಕಾದಲ್' ಚಿತ್ರ ರಿಲೀಸ್ ಆಗಿದೆ. ಇದುವೆ ಈ ಬಾರಿ ಸಮಂತಾ ಹುಟ್ಟು ಹಬ್ಬಕ್ಕೆ ಸಿಕ್ಕ ಅತಿ ದೊಡ್ಡ ಗಿಫ್ಟ್. ಈ ಚಿತ್ರದಲ್ಲಿ ಸಮಂತಾ ಜೊತೆಗೆ ನಯನತಾರ ಮತ್ತು ವಿಜಯ್ ಸೇತುಪತಿ ಅಭಿನಯಿಸಿದ್ದಾರೆ.
ಇನ್ನು ಇದೆ ವರ್ಷ ಫೆಬ್ರವರಿ 25 ರಂದು ಸಮಂತಾ ಸಿನಿಮಾ ಪಯಣದ 12 ವರ್ಷಗಳನ್ನು ಪೂರ್ಣಗೊಳಿಸಿದರು. ಇಷ್ಟು ವರ್ಷಗಳಲ್ಲಿ ಸಮಂತಾ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರಗಳ ಮೂಲಕವೇ ಜನ ಮನ ಗೆದ್ದಿದ್ದಾರೆ. ನಾಗಚೈತನ್ಯ ಜೊತೆಗೆ ನಟಿಸಿದ 'ಏ ಮಾಯಾ ಚೇಸಾವೆ' ಸಮಂತಾ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಜೆಸ್ಸಿಯಾಗಿ ಸಮಂತಾ ಪ್ರೇಕ್ಷಕರ ಮನಗೆದ್ದರು.

ಮೊದಲ ಚಿತ್ರದ ಯಶಸ್ಸಿನ ಬಳಿಕ, 'ಬೃಂದಾವನಂ', 'ಈಗ' ,'ಅತ್ತಾರಿಂಟಿಕಿ ದಾರೇದಿ', 'ಮನಂ', 'ರಂಗಸ್ಥಳಂ' 'ಮಜಿಲಿ' ಅಂತಹ ಚಿತ್ರಗಳಲ್ಲಿ ನಾನಾ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 12 ವರ್ಷಗಳ ನಂತರವೂ ಸಮಂತಾ ತಮ್ಮ ಅಭಿನಯದ ಮೂಲಕ ಕಿಚ್ಚು ಹೊತ್ತಿಸುತ್ತಿದ್ದಾರೆ.


Click it and Unblock the Notifications











