'ಪುಷ್ಪ'- 2 ಚಿತ್ರದ ಐಟಂ ಸಾಂಗ್ ರಿಜೆಕ್ಟ್ ಮಾಡಿದ ಸಮಂತಾ? ಕೊನೆಗೂ ಪ್ರತಿಕ್ರಿಯಿಸಿದ ಸ್ಯಾಮ್ ಟೀಂ
'ಪುಷ್ಪ'- 2 ಚಿತ್ರದಲ್ಲೂ ಸಮಂತಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ವದಂತಿ ಟಾಲಿವುಡ್‌ನಲ್ಲಿ ಹರಿದಾಡ್ತಿದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದು ಚಿತ್ರರಂಗದಲ್ಲಿದೆ. ಕಥೆ ಬಯಸುತ್ತೋ ಇಲ್ಲವೋ ಅಂತಾದೊಂದು ಸನ್ನಿವೇ
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಸೆನ್ಸೇಷನಲ್ ಹಿಟ್ ಲಿಸ್ಟ್ ಸೇರಿದ್ದು ಗೊತ್ತೇಯಿದೆ. ಈ ಚಿತ್ರದಲ್ಲಿ 'ಊ ಅಂಟಾವ ಮಾವ' ಐಟಂ ಸಾಂಗ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಸಕ್ಸಸ್‌ನಲ್ಲಿ ಈ ಸಾಂಗ್‌ಗೂ ಕ್ರೆಡಿಟ್ ಸಲ್ಲಲೇಬೇಕು. ಬಿಂದಾಸ್ ನಂಬರ್‌ನಲ್ಲಿ ಸಮಂತಾ ಮೈಚಳಿ ಬಿಟ್ಟು ಕುಣಿದು ರಂಗೇರಿಸಿದ್ದರು.
ಸದ್ಯ 'ಪುಷ್ಪ'- 2 ಶೂಟಿಂಗ್ ಭರದಿಂದ ಸಾಗುತ್ತಿದೆ. ಮತ್ತೊಮ್ಮೆ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಅಖಾಡಕ್ಕೆ ಇಳಿದಿದ್ದಾರೆ. ಪ್ರೀಕ್ವೆಲ್‌ನಲ್ಲಿದ್ದ ಬಹುತೇಕ ತಂಡ ಸೀಕ್ವೆಲ್‌ಗೂ ಕೆಲಸ ಮಾಡುತ್ತಿದೆ. ಇತ್ತೀಚಿಗೆ ವೈಜಾಗ್ ಬೀಚ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿತ್ತು. ಸ್ಟೈಲಿಶ್ ಸ್ಟಾರ್ ಅದನ್ನು ಸ್ಪಷ್ಟಪಡಿಸಿದ್ದರು. ಇನ್ನು 'ಪುಷ್ಪ'- 2 ಚಿತ್ರದಲ್ಲೂ ಸಮಂತಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ವದಂತಿ ಟಾಲಿವುಡ್‌ನಲ್ಲಿ ಹರಿದಾಡ್ತಿದೆ.
ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಲೇಬೇಕು ಎನ್ನುವ ಅಲಿಖಿತ ನಿಯಮವೊಂದು ಚಿತ್ರರಂಗದಲ್ಲಿದೆ. ಕಥೆ ಬಯಸುತ್ತೋ ಇಲ್ಲವೋ ಅಂತಾದೊಂದು ಸನ್ನಿವೇಶವನ್ನು ಕ್ರಿಯೇಟ್ ಮಾಡಿ ಬಿಂದಾಸ್ ಬೆಡಗಿಯರನ್ನು ಕುಣಿಸುತ್ತಾರೆ.

ಊ ಅಂತೀಯಾ ಎಂದಿದ್ದ ಸ್ಯಾಮ್
ಆಗಷ್ಟೇ ನಾಗ ಚೈತನ್ಯಾಗೆ ಡಿವೋರ್ಸ್ ನೀಡಿದ್ದ ಸಮಂತಾ 'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎಂದಾಗ ಕೆಲವರು ನಂಬಿರಲಿಲ್ಲ. ಆದರೆ ಸ್ವತಃ ಅದನ್ನು ಸ್ಪಷ್ಟಪಡಿಸಿತ್ತು. ದೇವಿ ಶ್ರೀಪ್ರಸಾದ್ ಟಪಾಂಗುಚ್ಚಿ ಟ್ಯೂನ್‌ಗೆ ಬೊಂಬಾಟ್ ಆಗಿರೋ ಸಾಂಗ್ ರೆಡಿಯಾಗಿತ್ತು. ಮಂಗ್ಲಿ ಸಹೋದರಿ ಇಂದ್ರವತಿ ಹಸ್ಕಿ ವಾಯ್ಸ್‌ನಲ್ಲಿ ಸಾಂಗ್ ಸಖತ್ ಕಿಕ್ ಕೊಟ್ಟಿತ್ತು. ಗಣೇಶ್ ಆಚಾರ್ಯ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಮಜಾ ಕೊಟ್ಟಿತ್ತು. ಸಮಂತಾ ಬೋಲ್ಡ್ ಸ್ಟೆಪ್ಸ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದರು.

'ಪುಷ್ಪ'- 2 ಚಿತ್ರದ ಸಮಂತಾ?
ಪ್ರೀಕ್ವೆಲ್ ರೀತಿಯಲ್ಲೇ ಸಮಂತಾ 'ಪುಷ್ಪ' ಸೀಕ್ವೆಲ್‌ನಲ್ಲೂ ಕುಣಿದು ರಂಗೇರಿಸ್ತಾರೆ ಅನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಸ್ಯಾಮ್ ಹೆಜ್ಜೆ ಹಾಕಿದರೆ ಮತ್ತೆ ಚಿತ್ರಕ್ಕೆ ಬಲ ಬರುತ್ತದೆ ಎಂದು ಚಿತ್ರತಂಡ ನಿರ್ಧರಿಸಿದೆ. ಹಾಗಾಗಿ ಮತ್ತೆ ಅದೇ ಪ್ರಯತ್ನ ನಡೀತಿದೆ. ಸಮಂತಾ ಅವರನ್ನು ಕೂಡ ಅಪ್ರೋಚ್ ಮಾಡಿದ್ದಾರೆ ಎನ್ನಲಾಗುತ್ತಿತ್ತು. ಅಷ್ಟೇ ಅಲ್ಲ ಸಮಂತಾ ಈ ಆಫರ್ ತಿರಸ್ಕರಿಸಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಯಾಮ್ ಟೀಂ ಪ್ರತಿಕ್ರಿಯಿಸಿದ್ದು, ಇದೆಲ್ಲಾ ಸುಳ್ಳು ವದಂತಿ ಎಂದಿದೆ. ಸಮಂತಾ 'ಪುಷ್ಪ'- 2 ಸಿನಿಮಾ ಭಾಗವಾಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದು ಬಂದಿದೆ.

ಮಯೋಸೈಟಿಸ್‌ನಿಂದ ಸ್ಯಾಮ್ ಚೇತರಿಕೆ
ನಟಿ ಸಮಂತಾ ಮಯೋಸೈಟಿಸ್ ಎನ್ನುವ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಗತ್ಯ ಚಿಕಿತ್ಸೆಯ ಜೊತೆಗೆ ಕಠಿಣ ವ್ಯಾಯಾಮದ ಮೂಲಕ ಈ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಮೊದಲಿಗಿಂತ ಆರೋಗ್ಯ ಈ ಸುಧಾರಿಸಿದೆ. ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ.

ಮತ್ತೆ ಸಿನಿಮಾಗಳಲ್ಲಿ ಬ್ಯುಸಿ
ಸಮಂತಾ ಚಿಕಿತ್ಸೆಯ ನಡುವೆಯೇ 'ಯಶೋದ' ಸಿನಿಮಾ ಡಬ್ಬಿಂಗ್ ಮುಗಿಸಿದ್ದರು. ಸಾಧ್ಯವಾದಷ್ಟು ಪ್ರಚಾರ ಮಾಡಿದ್ದರು. ಸ್ಯಾಮ್ ನಟನೆಯ 'ಶಾಕುಂತಲಂ' ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್ ವೆಬ್‌ಸೀರಿಸ್ 'ಸಿಟಾಡೆಲ್'ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಇದಕ್ಕಾಗಿ ಮುಂಬೈನಲ್ಲೇ ಮನೆ ಖರೀದಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಚಿತ್ರೀಕರಣಕ್ಕೂ ಹಾಜರಾಗಲಿದ್ದಾರೆ.


Click it and Unblock the Notifications











