'ಊ ಅಂಟಾವಾ ಮಾವ' ಹಾಡನ್ನು ತಿರಸ್ಕರಿಸಿದ್ದ ಸಮಂತಾ: ಇದೇ ಹಾಡಿನಿಂದಲೇ ದಾಖಲೆ!

ನಟಿ ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಛೇದನ ಪಡೆದ ಬಳಿಕ, ಹೆಚ್ಚಾಗಿ ಸುದ್ದಿ ಆಗಿದ್ದು ಪುಷ್ಪ ಚಿತ್ರದಿಂದ. ಪುಷ್ಪ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಸಮಂತಾ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಾರೆ. ಈ ಹಾಡಿನಲ್ಲಿ ಸಮಂತಾ ಡ್ಯಾನ್ಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ . ಸಮಂತಾ ಲುಕ್‌ ಮತ್ತು ಸ್ಟೈಲ್‌ಗೆ ಸಿನಿ ರಸಿಕರು ಬೋಲ್ಡ್‌ ಆಗಿದ್ದಾರೆ.

ಈ ಹಾಡು ಸಮಂತಾ ಸಿನಿಮಾ ಜರ್ನಿಗೆ ಹೊಸ ಆಯಾಮ ಕೊಟ್ಟಿದೆ. ಸ್ಟಾರ್‌ ನಟಿ ಸಮಂತಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಹೆಸರು ಮಾಡಿದಾಕೆ. ಪ್ರಧಾನ ನಾಯಕಿಯರು ಚಿತ್ರಗಳ ಐಟಂ ಹಾಡುಗಳಲ್ಲಿ ಡ್ಯಾನ್ಸ್‌ ಮಾಡುವುದು ಅಪರೂಪ. ಅದರಲ್ಲಿ ಸಮಂತಾ ಕೂಡ ಒಬ್ಬರು. ಆದರೆ ಈ ಹಾಡು ಮೊದಲು ಸಮಂತಾ ಬಳಿಗೆ ಈ ಹಾಡು ಬಂದಾಗ ಸಮಂತಾ ಏನು ಹೇಳಿದ್ದರು ಎನ್ನುವುದು ರಿವೀಲ್ ಆಗಿದೆ.

ಪುಷ್ಪ ಚಿತ್ರದ ಈ ಹಾಡಿನಲ್ಲಿ ಅಭಿನಯಿಸಲು, ನಟಿ ಸಮಂತಾ ಮೊದಲು ಒಪ್ಪಿರಲಿಲ್ಲ ಅಂತೆ. ಅದನ್ನು ಈ ವಿಚಾರವನ್ನು ನಿರ್ದೇಶಕ ಸುಕುಮಾರ್‌ ಈಗ ಬಹಿರಂಗ ಪಡಿಸಿದ್ದಾರೆ.

ಪುಷ್ಪ ಹಾಡಿನಲ್ಲಿ ಡಾನ್ಸ್ ಮಾಡುವುದಿಲ್ಲ ಎಂದಿದ್ದ ಸಮಂತಾ!

ಪುಷ್ಪ ಹಾಡಿನಲ್ಲಿ ಡಾನ್ಸ್ ಮಾಡುವುದಿಲ್ಲ ಎಂದಿದ್ದ ಸಮಂತಾ!

'ಊ ಅಂಟವಾ ಮಾವ, ಊ ಊ ಅಂಟಾವ ಮಾವ' ಅಂತ ನಟಿ ಸಮಂತಾ ಮಾಡಿರುವ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈ ಹಾಡಿನ ಆಫರ್‌ ತೆಗೆದುಕೊಂಡು ನಿರ್ದೇಶಕ ಸುಕುಮಾರ್‌ ಮೊದಲು ಸಮಂತಾ ಬಳಿಗೆ ಹೋದಾಗ, ಈ ಹಾಡಿಗೆ ನಾನು ತಪ್ಪು ಆಯ್ಕೆ ಎಂದಿದ್ದರಂತೆ ಸಮಂತಾ. ಎಷ್ಟೇ ಹೇಳಿದರು ಸಮಂತಾ ಮೊದಲು ಈ ಹಾಡಿನಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ಸಮಂತಾ ಅವರನ್ನು ಒಪ್ಪಿಸಲು ನಿರ್ದೇಶಕ ಸುಕುಮಾರ್‌ ಸಾಕಷ್ಟು ಸಮಯ ತೆಗೆದು ಕೊಂಡಿದ್ದಾರಂತೆ. ಅಷ್ಟೇ ಅಲ್ಲಾ 'ರಂಗಸ್ಥಳಂ' ಚಿತ್ರದಲ್ಲಿ ಪೂಜಾ ಹೆಗ್ಡೆ ಐಟಂ ಹಾಡಿನಲ್ಲಿ ಕಾಣಿಕೊಂಡಿದ್ದರು, ಎನ್ನುವುದರ ಜೊತೆಗೆ ನಟಿಯರು ಈ ರೀತಿಯ ಹಾಡಿನಲ್ಲಿ ಅಭಿನಯಿಸಿರುವ ಬಗ್ಗೆ ಹೇಳಿ ಒಪ್ಪಿದ ಬೇಕಾಯಿತಂತೆ.

'ಪುಷ್ಪ' ಐಟಂ ಹಾಡಿನ ಮೂಲಕ ಸಮಂತಾ ನಂ.1!

'ಪುಷ್ಪ' ಐಟಂ ಹಾಡಿನ ಮೂಲಕ ಸಮಂತಾ ನಂ.1!

ಇನ್ನು ನಟಿ ಸಮಂತಾ ಈ ಹಾಡಿನ ಮೂಲಕ ದಾಖಲೆ ಮಾಡಿದ್ದಾರೆ. ರಿಜೆಕ್ಟ್‌ ಮಾಡಿದ ಇದೇ ಹಾಡಿನ ಮೂಲಕ ಸ್ಯಾಮ್ ದಾಖಲೆ ಪುಟ ಸೇರಿದ್ದಾರೆ. 2021ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ 100 ಹಾಡುಗಳ ಪಟ್ಟಿ ಬಿಡುಗಡೆ ಆಗಿದೆ. ಈ 100 ಹಾಡಿಗಳಲ್ಲಿ ಪುಷ್ಪ ಚಿತ್ರದ, ಸಮಂತಾ ಡ್ಯಾನ್ಸ್‌ ಮಾಡಿರುವ 'ಊ ಅಂಟವಾ ಮಾವ, ಊ ಊ ಅಂಟಾವ ಮಾವ' ಹಾಡು ನಂಬರ್‌ 1 ಸ್ಥಾನದಲ್ಲಿದೆ. ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ನಟಿ ಸಮಂತಾ ಸಂತಸ ಹಂಚಿಕೊಂಡಿದ್ದಾರೆ.

ವಿಚ್ಛೇದನದ ಬಳಿಕ ಬದಲಾಯ್ತಾ ಲಕ್!

ವಿಚ್ಛೇದನದ ಬಳಿಕ ಬದಲಾಯ್ತಾ ಲಕ್!

ಇನ್ನು ನಟಿ ಸಮಂತಾ, ನಾಗಚೈತನ್ಯ ಜೊತೆಗೆ ವಿಚ್ಛೇದನ ಮಾಡಿಕೊಂಡ ಬಳಿಕ, ಸಾಕಷ್ಟು ಅವಕಾಶಗಳು ಹರಿದು ಬರ್ತಿವೆ. ಸದ್ಯ ಸಮಂತಾ ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿ ಆಗಿದ್ದಾರೆ. ಜೊತೆಗೆ ಸಕ್ಸಸ್‌ ರೇಟ್‌ ಕೂಡ ಹೆಚ್ಚಾಗಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ಸಮಂತಾಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್‌ನಲ್ಲೂ ಸಮಂತಾಗೆ ಬೇಡಿಕೆ ಸೃಷ್ಟಿ ಆಗಿದೆ. ಸದ್ಯ ಸ್ನೇಹಿತರೊಂದಿಗೆ ಸಮಂತಾ ಟ್ರಿಪ್‌ನಲ್ಲಿ ಎಂಜಾಯ್‌ ಮಾಡ್ತಿದ್ದಾರೆ.

3 ಚಿತ್ರಗಳಲ್ಲಿ ಸಮಂತಾ ಬ್ಯೂಸಿ!

3 ಚಿತ್ರಗಳಲ್ಲಿ ಸಮಂತಾ ಬ್ಯೂಸಿ!

ಸಮಂತಾ ಸದ್ಯ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನ ಕಾತು ವಲುಕು ರೆಂಡು ಕಾದಲ್,ತೆಲುಗಿನ ಶಾಕುಂತಲಂ, ಯಶೋಧ ಚಿತ್ರಗಳ ಸದ್ಯ ಚಿತ್ರೀಕರಣದ ಹಂತದಲ್ಲಿ ಇವೆ. ಈ ಚಿತ್ರಗಳು ಕೂಡ ರಿಲೀಸ್‌ಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಜೊತೆಗೆ ಸಮಂತಾ ಕೂಡ ಈ ಮೂರು ಚಿತ್ರಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ.

More from Filmibeat

English summary
Samantha Initially Rejected Pushpa Item Song: OoAntava OoOoAntava, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X