'ನೀವಿಲ್ಲದಿದ್ದರೆ?', ಇಬ್ಬರು ಪ್ರಮುಖ ವ್ಯಕ್ತಿಗಳ ಪರಿಚಯಿಸಿದ ಸಮಂತಾ

ವಿಚ್ಛೇದನದ ಕಹಿ ನೆನಪಿನಿಂದ ಹೊರಗೆ ಬಂದಂತಿರುವ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

ವಿಚ್ಛೇದನದ ಬಳಿಕ ಹಲವು ದಿಟ್ಟ ಹೆಜ್ಜೆಗಳನ್ನು ನಟಿ ಸಮಂತಾ ಇಟ್ಟಿದ್ದು, ವಿಚ್ಛೇದನದ ಕಾರಣದಿಂದಾಗಿಯೇ ಸಮಂತಾರ ಪ್ರತಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಸಹ ಕುತೂಹಲ ಕೆರಳಿಸುತ್ತಿವೆ.

ಸಮಂತಾ, ಈವರೆಗೆ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ, ತಮ್ಮ ಮಾನಸಿಕ ಹಿಂಸೆ, ಟ್ರೋಲ್‌ಗಳು, ಸಿನಿಮಾ ಅವಕಾಶಗಳು ಹೀಗೆ ಒಂದಿಲ್ಲೊಂದು ವಿಷಯಗಳ ಬಗ್ಗೆ ಪರೋಕ್ಷವಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಇದೀಗ ಸಮಂತಾ ಹಂಚಿಕೊಂಡಿರುವ ಹೊಸ ಇನ್‌ಸ್ಟಾಗ್ರಾಂ ಪೋಸ್ಟ್‌ ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ಇಬ್ಬರು ಗೆಳೆಯರನ್ನು ಹೊಸ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪರಿಚಯಿಸಿದ್ದಾರೆ.

Samantha Introduced Her Two Friends Through Instagram

ಹಾಸ್ಯ ನಟ ವೆನ್ನೆಲ ಕಿಶೋರ್, ರಾಹುಲ್ ರವೀಂದ್ರ ಜೊತೆಗೆ ಆರಾಮವಾಗಿ ಸೋಫಾ ಮೇಲೆ ಮಲಗಿರುವ ಚಿತ್ರವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ''ನೀವಿಲ್ಲದಿದ್ದರೆ ನಾನು ಏನು ಮಾಡಲಿ'' ಎಂದು ಬರೆದುಕೊಂಡಿದ್ದಾರೆ. ರಾಹುಲ್ ರವೀಂದ್ರ ನಟ ಆಗಿದ್ದು, ಸಮಂತಾರ ಆಪ್ತ ಗೆಳತಿ ಚಿನ್ಮಯಿ ಪ್ರಸಾದ್ ಪತಿ ಸಹ ಆಗಿದ್ದಾರೆ.

ನಾಗ ಚೈತನ್ಯ ಜೊತೆಗೆ ವಿಚ್ಛೇದನದ ಬಳಿಕ ಸಮಂತಾಗೆ ಬೆಂಬಲ ನೀಡಿದವರಲ್ಲಿ ನಟ ವೆನ್ನೆಲ ಕಿಶೋರ್ ಸಹ ಒಬ್ಬರು. ವೆನ್ನೆಲ ಕಿಶೋರ್ ತೆಲುಗಿನ ಜನಪ್ರಿಯ ಹಾಸ್ಯನಟರಾಗಿದ್ದು, ಈ ಮೊದಲು ನಾಗಚೈತನ್ಯ ಹಾಗೂ ಸಮಂತಾ ಇಬ್ಬರಿಗೂ ಸಾಮಾನ್ಯ ಗೆಳೆಯರಾಗಿದ್ದರು. ಆದರೆ ಇದೀಗ ಸಮಂತಾ ಒಬ್ಬರಿಗೇ ಆಪ್ತ ಗೆಳೆಯ ಎನ್ನಲಾಗುತ್ತಿದೆ.

ಸಮಂತಾರು ಕಳೆದ ಕೆಲ ತಿಂಗಳಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡಿದ್ದಾರೆ. ನಾಗ ಚೈತನ್ಯ ಜೊತೆಗೆ ವಿವಾಹ ವಿಚ್ಛೇದನ ಪಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ಬಗ್ಗೆ ಇಲ್ಲ ಸಲ್ಲದ, ಹೇಯ ಆರೋಪಗಳನ್ನು ಮಾಡಲಾಯಿತು. ಸಮಂತಾ ಸಹ ಆರಂಭದಲ್ಲಿ ಇದರಿಂದ ತೀವ್ರವಾಗಿ ಬೇಸರ ಪಟ್ಟುಕೊಂಡಿದ್ದರು. ಆದರೆ ಬಳಿಕ ಅಂಥಹಾ ಕೆಟ್ಟ ಟ್ರೋಲ್‌ಗಳನ್ನು ಎದುರಿಸಲು ಆರಂಭಿಸಿದರು. ತಮ್ಮ ವಿರುದ್ಧ ಕೀಳು ಅಭಿರುಚಿಯ ಹೇಳಿಕೆ ಕೊಟ್ಟವರ ವಿರುದ್ಧ ದೂರು ಸಹ ನೀಡಿದರು. ಗೆಳೆಯರೊಟ್ಟಿಗೆ ಪ್ರವಾಸ ಹೋಗಿ ವಿಚ್ಛೇದನದ ನೋವನ್ನು ಮರೆತು ಸಿನಿಮಾ, ನಟನೆ ಕಡೆಗೆ ಪುನಃ ಆಸಕ್ತಿ ಕೇಂದ್ರೀಕರಿಸಿಕೊಂಡರು.

ಸಮಂತಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ನಯನತಾರಾ ಜೊತೆ 'ಕಾತುವಾಕ್ಕು ರೆಂಡು ಕಾದಲ್', ತೆಲುಗಿನ 'ಶಾಕುಂತಲಾ', ಹರಿ ಶಂಕರ್ ನಿರ್ದೇಶನದ 'ಯಶೋಧ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಾಲಿವುಡ್ ನಿರ್ದೇಶಕರೊಟ್ಟಿಗೆ 'ಅರೇಂಜ್‌ಮೆಂಟ್ಸ್ ಆಫ್ ಲವ್' ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರ ಜೊತೆಗೆ ಶಾರುಖ್ ಖಾನ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಹಿಂದಿಯ ಜನಪ್ರಿಯ ನಟಿ ತಾಪ್ಸಿ ಪನ್ನು ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿಯೂ ಸಮಂತಾ ನಟಿಸಲಿದ್ದಾರೆ. ಒಟ್ಟಿನಲ್ಲಿ ವಿಚ್ಛೇದನದ ಬಳಿಕ ಸಮಂತಾರ ವೃತ್ತಿ ಜೀವನದ ಗ್ರಾಫ್ ಏರುತ್ತಲೇ ಸಾಗುತ್ತಿದೆ.

More from Filmibeat

English summary
Actress Samantha introduced her two friends through Instagram. She shared photo with comedian Vennela Kishore and Rahul Ravindra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X