ನಟಿ ಸಮಂತಾ ರುತ್‌ಪ್ರಭ್ ವಿರುದ್ಧ ಕನ್ನಡಿಗ ಗರಂ!

ನಟಿ ಸಮಂತಾ ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪಾಡ್‌ಕಾಸ್ಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಜನರ ಆರೋಗ್ಯ, ಜೀವನಶೈಲಿ, ಆಹಾರ ಶೈಲಿಯ ಬಗ್ಗೆ ಸಾಕಷ್ಟು ಟಿಪ್ಸ್‌ಗಳನ್ನು ನೀಡುತ್ತಿದ್ದಾರೆ. ಆದರೆ ಈ ಬಗ್ಗೆ ಕೆಲವರಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಆಕೆಯನ್ನು ಜೈಲಿಗೆ ಹಾಕುವಂತೆ ಖ್ಯಾತ ವೈದ್ಯ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ ಹೇಳಿದ್ದು ಭಾರೀ ಸುದ್ದಿ ಆಗಿತ್ತು.

ಬರೀ ವೈದ್ಯರು ಮಾತ್ರವಲ್ಲ, ಕೆಲ ಸೆಲೆಬ್ರೆಟಿಗಳು ಕೂಡ ಈ ಬಗ್ಗೆ ದನಿ ಎತ್ತಿದ್ದಾರೆ. ಅರ್ಧಂಬರ್ಧ ತಿಳಿದುಕೊಂಡು ಏನೇನೋ ಮಾತನಾಡಬಾರದು. ನುರಿತ ವೈದ್ಯರಿಂದ ಸಲಹೆ ಸೂಚನೆ ನೀಡಿದರೆ ಪರವಾಗಿಲ್ಲ. ಕೆಲ ಡಯಟೀಷನ್, ಅಲ್ಪ ಸ್ವಲ್ಪ ತಿಳಿದುಕೊಂಡ ವೈದ್ಯರನ್ನು ಅತಿಥಿಯಾಗಿ ಕರೆಸಿ ಕಾರ್ಯಕ್ರಮದಲ್ಲಿ ಸಮಂತಾ ಮಾತನಾಡಿಸುತ್ತಾರೆ. ಅವರ ಸಲಹೆಗಳು ಕೆಲವೊಮ್ಮೆ ಪ್ರಾಣಾಂತಕವಾಗಬಹುದು ಎನ್ನುವ ಆರೋಪಗಳು ಕೇಳಿಬರ್ತಿದೆ.

Samantha is health illiterate Grammy Award-winning music composer slams Actress

ಇದೀಗ ಗ್ರ್ಯಾಮಿ ಪ್ರಶಸ್ತಿ ವಿಜೇತ, ಕನ್ನಡಿಗ, ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಮಂತಾರನ್ನು ಟೀಕಿಸಿದ್ದಾರೆ. ಸಮಂತಾ ಆರೋಗ್ಯ ಮತ್ತು ವಿಜ್ಞಾನದ ಅನಕ್ಷರಸ್ಥಳು ಎಂದು ಆಕೆಯ ಮೇಲೆ ಗರಂ ಆಗಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸಮಂತಾ ವಿರುದ್ಧ ಕಿಡಿಕಾರಿದ್ದಾರೆ. "ಪ್ರಭಾವಿ ಸೆಲೆಬ್ರಿಟಿಗಳಿಂದ ವೈದ್ಯಕೀಯ ವಿಚಾರಗಳ ಬಗ್ಗೆ ಮಾಹಿತಿ ನೀಡುವುದು ಬಹಳ ಅಪಾಯಕಾರಿ. ಈ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯು ಸಹ ಮಾರಕವಾಗಬಹುದು. ಇದು ಅತ್ಯಂತ ಬೇಜವಾಬ್ದಾರಿ" ಎಂದು ರಿಕ್ಕಿ ಕೇಜ್ ಹೇಳಿದ್ದಾರೆ.

"ಔಷಧಿಯ ಪರ್ಯಾಯ ಮೂಲಗಳನ್ನು ನಿರಂತರವಾಗಿ ಹುಡುಕುತ್ತಿರುವ ಅನೇಕ ಜನರಿದ್ದಾರೆ. ಸಾಂಪ್ರದಾಯಿಕ ಔಷಧವು ಕೆಲಸ ಮಾಡುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಅಂತಹವರಿಗೆ ಸಮಂತಾ ಹೇಳಿಕೆ ಇಂಪ್ರೆಸ್ ಮಾಡುತ್ತದೆ. ವಿಶೇಷವಾಗಿ ಸೆಲೆಬ್ರಿಟಿಗಳು ಏನನ್ನಾದರೂ ಅಪ್‌ಲೋಡ್ ಮಾಡಿದಾಗ, ಜನರು ಅದನ್ನು ಅನುಸರಿಸುತ್ತಾರೆ. ಆದರೆ ಇಂತಹ ವೈದ್ಯಕೀಯ ವಿಧಾನಗಳನ್ನು ಅನುಮೋದಿಸುವುದನ್ನು ತಡೆಯಲು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು" ಎಂದು ರಿಕಿ ಕೇಜ್ ಆಗ್ರಹಿಸಿದ್ದಾರೆ.

ಸಮಂತಾ ಪಾಡ್‌ಕಾಸ್ಟ್ ವಿರುದ್ಧ ಲಿವರ್ ಡಾಕ್ ಎಂಬ ವೈದ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಂತಾ ಸುಳ್ಳು ಮಾಹಿತಿಯೊಂದಿಗೆ ಜನರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ, ಇಂತಹ ಸಲಹೆ ನೀಡಿದ ಸಮಂತಾ ಅವರನ್ನು ಜೈಲಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸಮಂತಾ ಪ್ರತಿಕ್ರಿಯಿಸಿ ಸುದೀರ್ಘ ಪತ್ರ ಬರೆದಿದ್ದರು. ಈ ಬಗ್ಗೆ ವೈದ್ಯರಾದ ಲಿವರ್ ಡಾಕ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿದ್ದರು. ಇನ್ನು ಸಮಂತಾ ಪೋಸ್ಟ್‌ಗೆ ರಿಕ್ಕಿ ಕೇಜ್ ಸಹ ಕಾಮೆಂಟ್ ಮಾಡಿದ್ದರು.

"ಬೇಗ ಚೆತರಿಸಿಕೊಳ್ಳಿ. ನೀವು ಬಹಳಷ್ಟು ಅನುಭವಿಸಿದ್ದೀರಿ ಹಾಗೂ ಚೆನ್ನಾಗಿರಬೇಕು. ವೈದ್ಯಕೀಯ ಸಲಹೆಯ ಕುರಿತು, ವೈದ್ಯಕೀಯೇತರ ವೃತ್ತಿಪರರು ವಿಶೇಷವಾಗಿ ಪ್ರಭಾವ ಹೊಂದಿರುವ ಪ್ರಸಿದ್ಧ ವ್ಯಕ್ತಿಗಳಿಂದ ಹಂಚಿಕೊಳ್ಳದಿರುವುದು ಉತ್ತಮ, ಹೆಚ್ಚು-ಆದ್ದರಿಂದ ನೀವು ಸಾಕುಪ್ರಾಣಿಗಳಿಗೆ ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆಯ ಅನಾರೋಗ್ಯಕರ ಆಹಾರಗಳನ್ನು ಸಹ ಅನುಮೋದಿಸುತ್ತೀರಿ. ಇದು ಹಣಕ್ಕಾಗಿ ಮಾಡಲ್ಪಟ್ಟಿದೆ ಎಂದು ನಾವು ಅರ್ಥಮಾಡಿಕೊಂಡಾಗ, ನೀವು ಹೊಗಳಿದ ಎಲ್ಲದರ ಬಗ್ಗೆ ಅನುಮಾನ ಬರುವುದು ಸಹಜ"

"ನೀವು ಮಾರಣಾಂತಿಕ ಚಿಕಿತ್ಸೆಗಳ ಪರವಾಗಿ ಮಾತನಾಡಿದಾಗ, ಇದು ತುಂಬಾ ಅಪಾಯಕಾರಿ ಪ್ರದೇಶಕ್ಕೆ ಕಾಲಿಡುತ್ತಿದೆ. ವಿಶೇಷವಾಗಿ ಕ್ಲಿನಿಕಲ್ ಪ್ರಯೋಗಗಳು ಮತ್ತು ಪೀರ್ ರಿವ್ಯೂಡ್ ಸಿಸ್ಟಮ್‌ಗಳ ಮೂಲಕ ಹೋಗದ ಚಿಕಿತ್ಸೆಗಳು ಇತ್ಯಾದಿ. ಆದ್ದರಿಂದ ನಿಮ್ಮ ಮೇಲೆ ಆರೋಪ ಮಾಡಿದ ವೈದ್ಯರು ಮಾತುಗಳು ಕಠಿಣವಾಗಿರಬಹುದು. ಆದರೆ ಅವರು ಹೇಳಿದ್ದರಲ್ಲಿ ಎಲ್ಲವೂ ತಪ್ಪಲ್ಲ. ಅರೆಬೆಂದ ಸಲಹೆಯೊಂದಿಗೆ ಜನರ ಬದುಕಿನೊಂದಿಗೆ ಆಟವಾಡುವಂತಿಲ್ಲ. ವಿಶೇಷವಾಗಿ ದೊಡ್ಡ ಪ್ರಭಾವ ಹೊಂದಿರುವ ನಿಮ್ಮೊಂದಿಗೆ ಜನ ಸಂಪರ್ಕ ಸಾಧಿಸುವುದು, ಇದಕ್ಕೆ ವೈದ್ಯರ ಜವಾಬ್ದಾರಿಯಲ್ಲ. ಚಿಕಿತ್ಸೆಯನ್ನು ಸಮರ್ಥಿಸುವವರು ನೀವೇ ಆಗಿರುವುದರಿಂದ ಅವರು ನಿಮಗೆ ಸರಿಯಾಗಿ ಪ್ರತಿಕ್ರಿಯಿಸುತ್ತಾರೆ" ಎಂದು ರಿಪ್ಲೇ ಮಾಡಿದ್ದರು.

More from Filmibeat

English summary
After doctors celebs slams samantha for he health advice
Read more about: samantha tollywood ricky kej
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X