ಡಿವೋರ್ಸ್ ಬಳಿಕ ಸಮಂತಾ ಯಶಸ್ಸಿನ ಏಣಿ, ನಾಗಚೈತನ್ಯಗೆ ಇನ್ನೂ ಒಲಿಯದ ಅದೃಷ್ಟ!
ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದವರು. ಆದರೆ ಯಶಸ್ವಿ ದಾಂಪತ್ಯ ನಡೆಸುವಲ್ಲಿ ಈ ಜೋಡಿ ವಿಫಲ ಆಗಿದೆ. ಹತ್ತು ವರ್ಷದ ಪ್ರೀತಿಗೆ ಮದುವೆ ಆದ ನಾಲ್ಕೇ ವರ್ಷದಲ್ಲಿ ಅಂತ್ಯ ಹಾಡಿದ್ದಾರೆ. ಸದ್ಯ ವಿಚ್ಛೇದನ ಪಡೆದು ದೂರಾಗಿದ್ದಾರೆ.
ಕಳೆದ ವರ್ಷದ ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಸುದ್ದಿಯಲ್ಲಿತ್ತು. ಇವರಿಬ್ಬರ ವಿಚ್ಛೇದನದ ಸುದ್ದಿ ಈ ವರ್ಷವೂ ಮುಂದುವರೆದಿದೆ. ವಿಚ್ಛೇದನದ ಬಳಿಕ ನಟಿ ಸಮಂತಾ ಮತ್ತು ನಾಗಚೈತನ್ಯ ಜೋಡಿ ಬೇರೆ, ಬೇರೆ ದಾರಿ ಹಿಡಿದಿದೆ.
ಇಬ್ಬರೂ ಮದುವೆಗೂ ಮೊದಲಿನಿಂದಲೇ ಸಿನಿಮಾರಂಗದಲ್ಲಿ ಹೆಸರು ಮಾಡಿವರು. ವಿಚ್ಛೇದನದ ಬಳಿಕವೂ ಸಮಂತಾ ಜೋಡಿಯ ಸಿನಿಮಾ ಜರ್ನಿ ಮುಂದುವರೆದಿದೆ. ಇಬ್ಬರೂ ತಮ್ಮದೇ ಆದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಆದರೆ ಇವರಲ್ಲಿ ಹೆಚ್ಚು ಸಕ್ಸಸ್ ಒಲಿದ್ದು ಮಾತ್ರ ನಟಿ ಸಮಂತಾಗೆ.

ಸಕ್ಸಸ್ ಹಾದಿಯಲ್ಲಿ ಸಮಂತಾ!
ವಿಚ್ಛೇದನದ ಬಳಿಕ ನಟಿ ಸಂಮತಾ ಕೆಲವು ದಿನಗಳು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಸ್ನೇಹಿತರ ಜೊತೆಗೆ ಪ್ರವಾಸದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆಗ ಇನ್ನೇನು ಸಮಂತಾ ಸಿನಿಮಾ ಜರ್ನಿ ಮುಗಿದೇ ಹೋಯ್ತು. ಮತ್ತೆ ಆಕೆ ಸಿನಿಮಾಗಳನ್ನು ಮಾಡುವುದಿಲ್ಲ ಎನ್ನಲಾಗಿತ್ತು. ಆದರೆ ಎಲ್ಲಾ ಊಹೇಗಳನ್ನು ಸುಳ್ಳು ಮಾಡಿದ ನಟಿ ಸಮಂತಾ ಮಾತ್ರ ಫೀನಿಕ್ಸ್‌ನಂತೆ ಎದ್ದು ಬಂದರು. ಸಿನಿಮಾರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಸಮಂತಾಗೆ ಯಶಸ್ಸು ಒಲಿದಿದೆ.

ಊ ಅಂಟಾವಾ ಹಾಡಿನಿಂದ ಮಸ್ತ್ ಕಮ್‌ಬ್ಯಾಕ್!
ಡಿವೋರ್ಸ್ ಬಳಿಕ ಸಮಂತಾ ತೆರೆಯ ಮೇಲೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಪುಷ್ಪ ಸಿನಿಮಾದ ಮೂಲಕ. ಪುಷ್ಪ ಸಿನಿಮಾದ ವಿಶೇಷ ಹಾಡಿನಲ್ಲಿ ಅಲ್ಲು ಅರ್ಜುನ್ ಜೊತೆಗೆ ಹೆಜ್ಜೆ ಹಾಕುವ ಮೂಲಕ ಸಿನಿರಸಿಕರ ಮನಸನ್ನು ಸಮಂತಾ ಮತ್ತೆ ಗೆದ್ದರು. ಇದೊಂದೇ ಹಾಡಿನಿಂದ ಸಮಂತಾಗೆ ಇರುವ ಕ್ರೇಜ್ ಮತ್ತಷ್ಟು ಹೆಚ್ಚಾಯ್ತು. ಬಳಿಕ ನಯನತಾರ, ವಿಜಯ್ ಸೇತುಪತಿ ಜೊತೆಗೆ ಸಮಂತಾ 'ಕಾತುವಾಕುಲ ರೆಂಡು ಕಾದಲ್' ಸಿನಿಮಾದಲ್ಲಿ ನಟಿಸಿದರು. ಇನ್ನು ಶಾಕುಂತಲಂ, ಯಶೋಧ ಸಿನಿಮಾಗಳು ರಿಲೀಸ್ ತಯಾರಿಯಲ್ಲಿದ್ದು, ಖುಷಿ ಚಿತ್ರವನ್ನು ಮಾಡ್ತಿದ್ದಾರೆ. ಜೊತೆಗೆ ಬಾಲಿವುಡ್‌ಗೂ ಎಂಟ್ರಿ ಕೊಡ್ತಿದ್ದಾರೆ,.

ನಾಗಚೈತನ್ಯಗೆ ಒಲಿಯದ ಅದೃಷ್ಟ!
ಇನ್ನು ನಾಗಚೈತನ್ಯ ಕೂಡ ವಿಚ್ಛೇದನದ ಬಳಿಕ ಸಾಲು-ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ. ಬಂಗಾರ್‌ರಾಜು ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಇನ್ನು ಇತ್ತೀಚೆಗೆ ರಿಲೀಸ್ ಆದ 'ಥ್ಯಾಂಕ್ಯೂ' ಸಿನಿಮಾ ಕೂಡ ಅಷ್ಟಕಷ್ಟೇ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಇನ್ನು ನಾಗಚೈತನ್ಯ ಕೂಡ ಬಾಲಿವುಡ್‌ನ 'ಲಾಲ್ ಸಿಂಗ್ ಚೆಡ್ಡ' ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ನೋಡಬೇಕು. ಇದರ ಬಳಿಕ ಮತ್ತೊಂದು ಸಿನಿಮಾ ವೆಂಕಟ್ ಪ್ರಭು ಜೊತೆಗೆ ನಿಗದಿ ಆಗಿದೆ.

2021ರಲ್ಲಿ ದೂರಾದ ಜೋಡಿ!
ಕಳೆದ ವರ್ಷ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಜೋಡಿ ದೂರಾಯ್ತು. ಈ ವಿಚಾರದ ಬಗ್ಗೆ ಅಧಿಕೃತ ಹೇಳಿಕೆ ಬರುವ ಮೊದಲೇ ಹಲವು ಗಾಸಿಪ್‌ಗಳು ಹಬ್ಬಿದ್ದವು. ಕೊನೆಗೂ ಆ ಸುದ್ದಿ ನಿಜವಾಯ್ತು. 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ತಮ್ಮ ವಿಚ್ಛೇದನದ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ಇದು ಅವರ ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಶಾಕ್ ನೀಡಿತ್ತು. ಈಗ ಈ ಜೋಡಿ ತಮ್ಮದೇ ಆದ ದಾರಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ.


Click it and Unblock the Notifications











