ವಿಚ್ಛೇದನದ ಬಳಿಕವೂ ಮಾಜಿ ಮೈದುನ ಜೊತೆ ಉತ್ತಮ ಬಾಂಡಿಂಗ್; ಸಮಂತಾ ನಡೆ ಬಗ್ಗೆ ಬಿಸಿಬಿಸಿ ಚರ್ಚೆ

By ಫಿಲ್ಮಿಬೀಟ್ ಡೆಸ್ಕ್

ಬಹುಭಾಷಾ ನಟಿ ಸಮಂತಾ ಯಾವುದಾದರೂ ಒಂದು ಸುದ್ದಿಯಲ್ಲಿ ಇರುತ್ತಾರೆ. ಪ್ರತಿ ದಿನ ಸೋಶಿಯಲ್ ಮೀಡಿಯಾದಲ್ಲಿ ಈ ನಟಿಯ ಬಗ್ಗೆನೇ ಚರ್ಚೆಯಾಗುತ್ತಲೇ ಇರುತ್ತೆ. ಅದರಲ್ಲೂ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ಸಮಂತಾ ಬಗ್ಗೆ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿಯೇ ಚರ್ಚೆಯಾಗುತ್ತಿರೋದನ್ನು ಅವರ ಅಭಿಮಾನಿಗಳು ಗಮನಿಸುತ್ತಲೇ ಬಂದಿದ್ದಾರೆ.

ನಾಗ ಚೈತನ್ಯ ಜೊತೆ ವಿಚ್ಚೇದನದ ಬಳಿಕ ಸಮಂತಾ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸಮಂತಾ ವಿರುದ್ಧ ಟೀಕೆಗಳನ್ನು ಮಾಡಿದ್ದರು. ನೋವುನಲ್ಲೂ ಎದುರಾದ ಟೀಕೆಗಳನ್ನು ಸಹಿಸಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಮಂತಾ ಯತ್ನಿಸಿದ್ದು ಗೊತ್ತೇ ಇದೆ.

Samantha is still in touch with Akhil Akkineni after her divorce from his brother Naga Chaitanya

ಹೀಗಿರುವಾಗ ಸಮಂತಾ ಮತ್ತೆ ಅಕ್ಕಿನೇನಿ ಕುಟುಂಬವನ್ನು ಸೇರಿಕೊಳ್ಳಬಹುದಾ? ಅನ್ನೋ ಚಿಕ್ಕ ಆಸೆ ಅಭಿಮಾನಿಗಳಲ್ಲಿದೆ. ಅದಕ್ಕೆ ಸರಿಯಾಗಿ ಸಮಂತಾ ತನ್ನ ಮೈದುನ, ನಟ ಅಖಿಲ್ ಅಕ್ಕಿನೇನಿ ಹುಟ್ಟು ಹಬ್ಬಕ್ಕೆ ಶುಭಕೋರಿದ್ದರು. ಇದನ್ನು ನೋಡಿದ ಬಳಿಕ ಇಬ್ಬರ ಅಭಿಮಾನಿಗಳು ಪಾಸಿಟಿವ್ ಆಗಿ ಚರ್ಚೆ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ ಸಮಂತಾ ನಡೆಯ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿದೆ.

ನಾಗ ಚೈತನ್ಯ ಜೊತೆ ವಿಚ್ಚೇದನ ಪಡೆದ ಬಳಿಕ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಸಮಂತಾ ವಿರುದ್ಧ ತಿರುಗಿಬಿದ್ದಿದ್ದರು. ಇದೇ ವೇಳೆ ಸಮಂತಾ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡರೆ ಕಿಡಿಕಾರುತ್ತಿದ್ದರು. ನಾಗ ಚೈತನ್ಯ ವಿರುದ್ಧ ಮಾತಾಡಿದರೂ ಕಣ್ಣು ಕೆಂಪಗೆ ಮಾಡಿಕೊಳ್ಳುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಮಂತಾಗೆ ತಿರುಗೇಟು ಕೊಡುತ್ತಿದ್ದರು.

Samantha is still in touch with Akhil Akkineni after her divorce from his brother Naga Chaitanya

ಇತ್ತ ಸಮಂತಾ ಕೂಡ ಕರಣ್ ಜೋಹರ್ ನಡೆಸಿಕೊಡುತ್ತಿದ್ದ 'ಕಾಫಿ ವಿತ್ ಕರಣ್'ನಲ್ಲಿ ಅತಿಥಿಯಾಗಿ ಹೋಗಿದ್ದ ವೇಳೆ ನಾಗ ಚೈತನ್ಯ ಬಗ್ಗೆ ಮಾತಾಡಿದ್ದರು. ಸಮಂತಾ ಇಬ್ಬರನ್ನೂ ಒಂದು ಕೋಣೆಯಲ್ಲಿ ಕೂಡಿ ಹಾಕಿದರೆ, ಒಬ್ಬರನ್ನೊಬ್ಬರು ಸಾಯಿಸುವಷ್ಟು ಕಿತ್ತಾಡಬಹುದು ಎಂದು ಹೇಳಿಕೊಂಡಿದ್ದರು. ಆ ವೇಳೆ ಇಬ್ಬರ ಫ್ಯಾನ್ಸ್ ನಡುವೆ ಚಿಕ್ಕದೊಂದು ಟ್ವಿಟರ್ ವಾರ್ ನಡೆದಿತ್ತು.

ಈಗ ಏಪ್ರಿಲ್ 8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾಜಿ ಮೈದುನನಿಗೆ ಸಮಂತಾ ವಿಶ್ ಮಾಡಿದ್ದರು. ಹಾಗೇ ಆತನ ಪ್ರೀತಿಯ ನಾಯಿಯೊಂದಿಗೆ ಇರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಇನ್ನೊಂದು ಕಡೆ ಸಮಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅಖಿಲ್ ಅಕ್ಕಿನೇನಿ ಕೂಡ ಟೇಕ್ ಕೇರ್ ಅಂತ ಸಂದೇಶ ಕಳುಹಿಸಿದ್ದರು. ಈ ಎರಡು ಉದಾಹರಣೆಗಳನ್ನು ಇಟ್ಟುಕೊಂಡು ಅಖಿಲ್ ಅಕ್ಕಿನೇನಿ ಜೊತೆ ಹಾಗೂ ಅಕ್ಕಿನೇನಿ ಕುಟುಂಬದ ಜೊತೆ ಹಳೆಯ ಬಾಂಡಿಂಗ್ ಇನ್ನೂ ಹಾಗೇ ಇದೆ ಎಂದು ಚರ್ಚೆ ಮಾಡುತ್ತಿದ್ದಾರೆ.

ಇತ್ತ ನಾಗ ಚೈತನ್ಯ ಹೆಸರು ಹೇಳಲೂ ಇಷ್ಟ ಪಡದ ಸಮಂತಾ, ಕುಟುಂಬದಿಂದಲೂ ದೂರ ಇರಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದ್ರೀಗ ಮಾಜಿ ಮೈದುನನಿಗೆ ಶುಭ ಕೋರಿದ ಬಳಿಕ ನಾಗ ಚೈತನ್ಯ ಅಭಿಮಾನಿಗಳಿಗೆ ಯಾವ ರೀತಿ ಸ್ಪಂದಿಸಬೇಕು ಅನ್ನೋದು ಗೊತ್ತಾಗದೆ ಗೊಂದಲಕ್ಕೆ ಬಿದ್ದಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Samantha and Akhil Akkineni relationship is becoming hot topic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X