'ಶಾಕುಂತಲಂ' ಔಟ್ ಪುಟ್ ಚೆನ್ನಾಗಿಲ್ಲ: ಸಿಟ್ಟಿಗೆದ್ದ ಸಮಂತಾ!
ಸಮಂತಾ ಅಭಿನಯದ 'ಶಾಕುಂತಲಂ' ಸಿನಿಮಾ ಸಮಂತಾ ಸಿನಿಮಾ ಬದುಕಿನಲ್ಲಿ ವಿಭಿನ್ನವಾಗಿ ನಿಲ್ಲಲಿದೆ. ಶಾಕುಂತಲೆ ಪಾತ್ರದಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ. ಆದರೆ ಸಮಂತಾ ಕೋಪಕ್ಕೆ ಈ ಚಿತ್ರ ಕಾರಣ ಆಗಿ ಬಿಟ್ಟಿದೆ. ಅದು ಯಾಕೆ ಎನ್ನುವುದನ್ನು ಮುಂದೆ ಓದಿ.
ಸಮಂತಾ ಅಭಿನಯದ ಪೌರಾಣಿಕ 'ಶಾಕುಂತಲಂ' ಸಿನಿಮಾ ಬಹಳ ಹಿಂದೆಯೇ ಸುದ್ದಿಯಲ್ಲಿತ್ತು. ಇದರಲ್ಲಿ ಸ್ಟಾರ್ ನಾಯಕಿ ಸಮಂತಾ 'ಶಕುಂತಲೆ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅದ್ಭುತವಾದ ಸಿನಿಮಾ ಆಗಲಿದೆ ಎನ್ನುವ ಸುಳಿವು ಕೊಟ್ಟಿತ್ತು ಚಿತ್ರದ ಫಸ್ಟ್ ಲುಕ್. ಸದ್ಯ ಚಿತ್ರ ಪೂರ್ಣಗೊಂಡಿದ್ದು, 'ಶಾಕುಂತಲಂ' ಚಿತ್ರದ ಮೊದಲ ಔಟ್ ಪುಟ್ ಹೊರ ಬಂದಿದೆ.
ಸಮಂತಾ ಸಿನಿಮಾದ ಮೊದಲ ಔಟ್ ಪುಟ್ ನೋಡಿ ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರಂತೆ. ಅಂದುಕೊಂಡ ಮಟ್ಟಿಗೆ ಸಿನಿಮಾ ಮೂಡಿ ಬಂದಿಲ್ಲವಂತೆ. ಹಾಗಾಗಿ ಸಮಂತಾ ಈ ಚಿತ್ರದ ಬಗ್ಗೆ ಬೇಸರಗೊಂಡಿದ್ದಾರಂತೆ. ಹಾಗಾಗಿ ಸಿನಿಮಾದ ತಂಡದಿಂದ ದೂರ ಉಳಿದಿದ್ದು, ಯಾವುದೇ ಪ್ರಚಾರ ಕಾರ್ಯಕ್ಕೂ ಮುಂದಾಗುತ್ತಿಲ್ಲ.

ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದ ಪೋಸ್ಟರ್‌ಗಳು ಈಗಾಗಲೇ ಗಮನ ಸೆಳೆದಿವೆ. ಶಾಕುಂತಲೇ ರೂಪದಲ್ಲಿರುವ ನಟಿ ಸಮಂತಾಳನ್ನು ಜನ ಮೆಚ್ಚಿ ಕೊಂಡಾಡಿದ್ದರು. ಚಿತ್ರತಂಡ ಕೂಡ ಸಿನಿಮಾ ಬಹುತೇಕ ಮುಗಿದು ಬಿಟ್ಟಿದೆ. ಇನ್ನೇನು ರಿಲೀಸ್ ದಿನಾಂಕ ಪ್ರಕಟ ಆಗುತ್ತದೆ ಎನ್ನಲಾಗಿತ್ತು.
ಸಿನಿಮಾ ಮುಗಿದಿದ್ದರೆ ಇಷ್ಟು ಹೊತ್ತಿಗಾಗಲೇ ಚಿತ್ರದ ಮತ್ತಷ್ಟು ತುಣುಕುಗಳನ್ನು ರಿಲೀಸ್ ಮಾಡಬೇಕಿತ್ತು. ಒಂದು ವೇಳೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿದ್ದರೂ, ಸಾಮಾನ್ಯವಾಗಿ ನಿರ್ಮಾಪಕರು ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಾರೆ. ಆದರೆ ಇನ್ನು ಕೂಡ ಸಿನಿಮಾದ ಕೆಲಸಗಳ ಬಾಕಿ ಇರುವ ಕಾರಣ ನಿರ್ಮಾಪಕರು ಯಾವುದೇ ರೀತಿಯ ಪ್ರಚಾರ ಆರಂಭಿಸಿಲ್ಲ.
ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವುದರಿಂದ ಹಿಡಿದು, ಟೀಸರ್‌ಗಳು ಮತ್ತು ಲಿರಿಕಲ್ ಸಾಂಗ್ ರಿಲೀಸ್ ಆಗಿಲ್ಲ. ಆದರೆ 'ಶಾಕುಂತಲಂ' ಚಿತ್ರದ ಶೂಟಿಂಗ್ ಒಂದು ವರ್ಷ ಹಿಂದೆಯೇ ಮುಗಿದೆ ಎನ್ನಲಾಗಿತ್ತು. ಆದರೂ ರಿಲೀಸ್ ಬಗ್ಗೆ ಮಾತ್ರ ಯಾವುದೇ ಚಕಾರ ಎತ್ತುತ್ತಿಲ್ಲ.

ಇನ್ನು ನಿರ್ದೇಶಕ ಗುಣಶೇಖರ್ ಚಿತ್ರದ ಅಂತಿಮ ಔಟ್‌ಪುಟ್ ಬಗ್ಗೆ ಸಹ ನಿರ್ಮಾಪಕ ದಿಲ್ ರಾಜು ಕೂಡ ಬೇಸರ ವ್ಯಕ್ತ ಪಡಿಸಿದ್ದಾರಂತೆ. ವದಂತಿಗಳು ಏನೇ ಇರಲಿ. ಆರು ತಿಂಗಳ ಹಿಂದೆ ಕೇವಲ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಚಿತ್ರ ಶೀಘ್ರದಲ್ಲೇ ಥಿಯೇಟರ್‌ಗಳಿಗೆ ಬರಲಿದೆ ಎಂದು ಸ್ಟಾರ್ ನಟಿಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಸಿನಿಮಾದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











