ಸ್ಯಾಮ್ 'ಬ್ಲ್ಯಾಕ್' ಮ್ಯಾಜಿಕ್ ; ಒಳ ಉಡುಪಿಲ್ಲದೇ ಎದೆ ಮೇಲೆ ಕೈ ಇಟ್ಟುಕೊಂಡ ಸಮಂತಾ ..!
ನೋ ಡೌಟ್.. ಸಮಂತಾ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ನಾಗಚೈತನ್ಯ ಜೊತೆ ಕಾಣಿಸಿಕೊಂಡಿದ್ದ ಸಮಂತಾ ಬೇರೆ. ಈಗ ಕಾಣ್ತಿರುವ ಸಮಂತಾ ಬೇರೆ. ಹಾವ-ಭಾವ-ವೇಷಭೂಷಣ ಎಲ್ಲವನ್ನೂ ಬದಲಿಸಿಕೊಂಡಿರುವ ಈ ಸಮಂತಾ ದಿನ ಉರುಳಿದಂತೆ ಸಾಮಾಜಿಕ ಜಾಲತಾಣದ ಮೂಲಕ ಅನೇಕರನ್ನ ಸೆಳೆಯುತ್ತಿದ್ದಾರೆ. ಆಕರ್ಷಿಸುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ ಒಳ ಒಡುಪಿಲ್ಲದೇ ಸಮಂತಾ ಎದೆ ಮೇಲೆ ಕೈ ಇಟ್ಟುಕೊಂಡು, ಪಡ್ಡೆ ಹುಡುಗರ ಎದೆ ಬಡಿತವನ್ನ ಹೆಚ್ಚಿಸಿದ್ದಾರೆ.
ಸಮಂತಾ ಅವರ ಈ ಬ್ಲ್ಯಾಕ್ ಮ್ಯಾಜಿಕ್ ಗೆ ಅನೇಕರು ಮೂಕವಿಸ್ಮಿತರಾಗಿದ್ದಾರೆ. ಸಮಂತಾ ಸೌಂದರ್ಯ ಕಂಡು ಯಾವುದೇ ಮುಚ್ಚು ಮರೆಯಿಲ್ಲದೇ ತಮ್ಮ ಮನದ ಮಾತುಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಕೆಲವರ ತಾಪಮಾನ ಏರಿಕೆಯಾದರೆ, ಇನ್ನೂ ಹಲವರು ಅವರು ಅವರಾಗಿ ಉಳಿದಿಲ್ಲ.

ಇನ್ನೂ ಸಮಂತಾ ಅವರ ಈ ಹಾಟ್ ಅವತಾರ ಕಂಡು ಬಹುತೇಕರ ಕಣ್ಣು ತಂಪಾದರೆ, ಎಂದಿನಂತೆ ಇನ್ನು ಹಲವರ ಕಣ್ಣು ಕೆಂಪಾಗಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು, ಮಡಿವಂತಿಗೆ ಬಿಟ್ಟು ಪೋಸ್ ಕೊಟ್ಟಿದ್ದೀರಾ ಅಂದ್ಮೇಲೆ ಎದೆಯ ಮೇಲೆ ಯಾಕೆ ಕೈಯಿಟ್ಟುಕೊಂಡಿದ್ದೀರಾ ಎಂದು ಪ್ರಶ್ನೆಯನ್ನ ಕೇಳುತ್ತಿದ್ದಾರೆ.
ಅಂದ್ಹಾಗೇ ಕರ್ಲಿ ಹೇರ್ಸ್ಟೈಲ್ ನಲ್ಲಿ ಕ್ಯಾಮರಾದಲ್ಲಿ ಬಂಧಿಯಾದ ಸಮಂತಾ ಅವರ ಈ ಬಾಸ್ ಲೇಡಿ ಅವತಾರವನ್ನ ಕೇವಲ ಇಪ್ಪತ್ತೇ ನಿಮಿಷದಲ್ಲಿ ಅರವತ್ತು ಸಾವಿರಕ್ಕೂ ಅಧಿಕ ಜನ ಇಷ್ಟ ಪಟ್ಟಿದ್ದಾರೆ. ಒಟ್ಟು ಲೈಕ್ ಗಳ ಸಂಖ್ಯೆ ಹೆಚ್ಚು ಕಡಿಮೆ ಆರು ಲಕ್ಷದ ಮೇಲೀದೆ. ಸುರೇಶ್ ರೈನಾ, ವರುಣ್ ಧವನ್, ರಕುಲ್ ಪ್ರೀತ್ ಸಿಂಗ್, ತಮನ್ನಾ, ಸೇರಿ ಇನ್ನೂ ಅನೇಕ ಸೆಲೆಬ್ರೀಟಿಗಳು ಸಮಂತಾ ಅವರ ಈ ಬದಲಾದ ರೂಪವನ್ನ ಮೆಚ್ಚಿಕೊಂಡಿದ್ದಾರೆ

ಬದಲಾವಣೆ ಜಗದ ನಿಯಮ ಎಂಬ ಘೋಷವಾಕ್ಯದಡಿ ಇಷ್ಟೊಂದು ಬದಲಾಗಿರುವ ಸಮಂತಾ, ಸದ್ಯಕ್ಕೆ ಸಿಟಾಡೆಲ್ ವೆಬ್ ಸರಣಿಯ ಪ್ರಸಾರದ ದಿನವನ್ನ ಎದುರು ನೋಡುತ್ತಿದ್ದಾರೆ. ಹಾಲಿವುಡ್ ನಲ್ಲಿ ಇದಕ್ಕೆ ಸಿಟಾಡೆಲ್ ಎಂದು ಕರೆದರೆ, ಇಂಡಿಯನ್ ವರ್ಷನ್ ನಲ್ಲಿ ಅದಕ್ಕೆ ಹನಿ ಬನಿ ಎಂದು ಕರೆಯಲಾಗಿದೆ. ಇನ್ನೂ ಈ ವೆಬ್ ಸರಣಿಯ ಮೇಲೆ ಸಮಂತಾಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ತಾನು ಚಿತ್ರಕ್ಕಾಗಿ ಪಟ್ಟಿರುವ ಕಷ್ಟ ತನ್ನೆಲ್ಲ ಅಭಿಮಾನಿಗಳಿಗಷ್ಟೇ ಅಲ್ಲದೇ, ಎಲ್ಲ ಭಾಷೆಯ ಸಿನಿ ಪ್ರಿಯರಿಗೂ ಇಷ್ಟವಾಗುತ್ತೆ ಅನ್ನುವ ನಂಬಿಕೆ ಸಮಂತಾಗೆ ಇದೆ. ಇದಕ್ಕೆ ಪೂರಕವಾಗಿ ಈಗಾಗಲೇ ಸರಣಿಯ ಕೆಲವು ದೃಶ್ಯ ನೋಡಿದ್ದೇನೆ. ಅದ್ಭುತವಾಗಿದೆ. 22 ತಿಂಗಳ ಕಷ್ಟ ಕಾಣುತ್ತಿದೆ. ಜನರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ ಎಂದು ಹಿಂದೊಮ್ಮೆ ಹೇಳಿದ್ದರು ಸಮಂತಾ.
ಬಾಲಿವುಡ್ ಹೀರೋ ವರುಣ್ ಧವನ್ ಈ ಚಿತ್ರದ ನಾಯಕ. ಫ್ಯಾಮಿಲಿಮ್ಯಾನ್ ಸರಣಿ ನಿರ್ದೇಶಿಸಿದ್ದ ರಾಜ್ & ಡಿಕೆ ಇದರ ಸಾರಥಿ.ಹಾಲಿವುಡ್ ಸರಣಿಯ ಹಿಂದಿ ರಿಮೇಕ್ ಆಗಿರುವ ಸಿಟಾಡೆಲ್ ಹನ್ನಿ ಬನ್ನಿಯ ಕಥೆ ಅಮೆಜಾನ್ ನಲ್ಲಿ ಸದ್ಯದಲ್ಲಿಯೇ ಅನಾವರಣವಾಗಲಿದೆ.

ಸಮಂತಾಗೆ ಮೈಯೋಸಿಟಿಸ್ ಕಾಯಿಲೆ..!
ಇನ್ನೂ, ಸಮಂತಾ ಮೈಯೋಸಿಟಿಸ್ ಎಂಬ ಆಟೋ ಇಮ್ಯೂನ್ ಸ್ಥಿತಿಯಿಂದ ಬಳಲುತ್ತಿದ್ದಾರೆ. ಕಾಯಿಲೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆಯನ್ನೂ ಕೂಡ ಪಡೆದು ಬಂದಿದ್ದಾರೆ. ಒಂದರ್ಥದಲ್ಲಿ ಕಳೆದ ಎರಡು ವರ್ಷಗಳಿಂದ ಸಮಂತಾ ಪಡಬಾರದ ಕಷ್ಟ ಪಟ್ಟಿದ್ದಾರೆ. ನೋವನ್ನೆಲ್ಲ ಒಬ್ಬರೇ ಸಹಿಸಿಕೊಂಡೇ ಬಂದಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಸಮಂತಾ ತಮ್ಮ ಮಾದಕ ಮೈಮಾಟದಿಂದ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ತಮ್ಮ ಈ ಹೊಸ ಲುಕ್ ನಿಂದ ಕಿಕ್ ಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನ ಸಮಂತಾ ಅಭಿನಯದ ಸಿಟಾಡೆಲ್ ಹನಿ ಬನಿ ಪ್ರಸಾರವಾಗಲಿದೆ. ಆಗ ಎಲ್ಲೆಲ್ಲಿ ಕಿಚ್ಚು ಹತ್ತಿಕೊಳ್ಳುತ್ತೋ ಗೊತ್ತಿಲ್ಲ


Click it and Unblock the Notifications











