ಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ ಆದರೆ ಈಗ ನಾನು ಡ್ರ್ಯಾಗನ್ ; ಸಮಂತಾ...!
ಸಮಂತಾ ಮೊದಲಿನಂತೆ ಇಲ್ಲ. ಸಿಕ್ಕಾಪಟ್ಟೆ ಬದಲಾಗಿದ್ದಾರೆ ಅನ್ನುವುದು ಅನೇಕರ ಅಭಿಪ್ರಾಯ. ಯಾಕೆಂದರೆ ನಾಗಚೈತನ್ಯ ಅವರಿಂದ ದೂರವಾದ ನಂತರ ಸ್ಯಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಒಂದಾದ ಮೇಲೊಂದರಂತೆ ಗ್ಲಾಮರಸ್ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಬ್ಲೇಜರ್ ಬಟನ್ ತೆಗೆದು ಬ್ಲ್ಯಾಕ್ ಡ್ರೆಸ್ ನಲ್ಲಿ ಕ್ಯಾಮರಾ ಗೆ ಸ್ಯಾಮ್ ಫೋಸ್ ಕೊಟ್ಟಿದ್ದಾರೆ. ತಮ್ಮ ನಲ್ಮೆಯ ಅಭಿಮಾನಿಗಳಿಗಾಗಿ ತಮ್ಮ ಈ ಹೊಸ ರೂಪವನ್ನೂ ಹಂಚಿಕೊಂಡಿದ್ದಾರೆ
ಸಮಂತಾ ಅವರ ಈ 'ಬ್ಲ್ಯಾಕ್' ಮ್ಯಾಜಿಕ್ ಗೆ ಅನೇಕರು ಮೂಕವಿಸ್ಮಿತರಾಗಿದ್ದಾರೆ. ಇನ್ನೂ ಸಮಂತಾ ಅವರ ಈ ಹಾಟ್ ಅವತಾರ ಕಂಡು ಕೆಲವರು ಕಣ್ಣು ತಂಪಾದರೆ, ಎಂದಿನಂತೆ ಇನ್ನು ಹಲವರ ಕಣ್ಣು ಕೆಂಪಾಗಿದೆ. ಯಾಕಮ್ಮ ಹೀಗೆ ಆದೆ ಅನ್ನುವ ಅಭಿಪ್ರಾಯ ವ್ಯಕ್ತವಾಗ್ತಾ ಇದೆ. ನಮಗೆ ನಮ್ಮ ಹಳೆಯ ಸಮಂತಾ ಬೇಕು ಎಂಬ ಪ್ರತಿಭಟನೆಯ ಕೂಗು ಕೂಡ ಕೇಳಿ ಬರುತ್ತಿದೆ. ಆದ್ರೇ ಈ ಕಮೆಂಟ್ ಗಳಿಗೆಲ್ಲ ಸಮಂತಾ ತಲೆ ಕೆಡಿಸಿಕೊಂಡಿಲ್ಲ. ಕೆಡಿಸಿಕೊಂಡಿದ್ದರೆ ವಿಚ್ಚೇದನದ ನಂತರ ಸಮಂತಾ ಫೋಟೊ ಬಿಡಿ ನೆಮ್ಮದಿಯಾಗಿ ಬದುಕಲು ಆಗ್ತಾ ಇರಲಿಲ್ಲ ಅನ್ನುವುದು ಬೇರೆ ವಿಷಯ.

ಇನ್ನೂ ಈ ಚೆಂದದ ಫೋಟೋಗಳಿಗೆ ಸಮಂತಾ, ಶೀರ್ಷಿಕೆಯೊಂದನ್ನ ಕೊಟ್ಟಿದ್ದಾರೆ. ''ಡಿಸ್ನಿಯ ರಾಜಕುಮಾರಿಯಾಗಿ ಸೋತಿದ್ದೇನೆ. ಆದರೆ ಈಗ ನಾನು ಡ್ರ್ಯಾಗನ್'' ಎಂದು ಬರೆದುಕೊಂಡಿದ್ದಾರೆ. ಫೋಟೋಗಳ ಜೊತೆ ಸಮಂತಾ ಗೀಚಿರುವ ಈ ಸಾಲುಗಳ ಬಗ್ಗೆಯೂ ಚರ್ಚೆ ಈಗ ಶುರುವಾಗಿದೆ. ಒಳಾರ್ಥ, ಗೂಡಾರ್ಥಗಳನ್ನ ತಿಳಿದುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ.
ಅಂದ್ಹಾಗೇ ಸಮಂತಾ ಸದ್ಯಕ್ಕೆ ಸಿಟಾಡೆಲ್ ವೆಬ್ ಸರಣಿಯ ಪ್ರಸಾರದ ದಿನವನ್ನ ಎದುರು ನೋಡುತ್ತಿದ್ದಾರೆ. ಹಾಲಿವುಡ್ ನಲ್ಲಿ ಇದಕ್ಕೆ ಸಿಟಾಡೆಲ್ ಎಂದು ಕರೆದರೆ, ಇಂಡಿಯನ್ ವರ್ಷನ್ ನಲ್ಲಿ ಅದಕ್ಕೆ ಹನಿ ಬನಿ ಎಂದು ಕರೆಯಲಾಗಿದೆ. ಇನ್ನೂ ಈ ವೆಬ್ ಸರಣಿಯ ಮೇಲೆ ಸಮಂತಾಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ತಾನು ಚಿತ್ರಕ್ಕಾಗಿ ಪಟ್ಟಿರುವ ಕಷ್ಟ ತನ್ನೆಲ್ಲ ಅಭಿಮಾನಿಗಳಿಗಷ್ಟೇ ಅಲ್ಲದೇ, ಎಲ್ಲ ಭಾಷೆಯ ಸಿನಿ ಪ್ರಿಯರಿಗೂ ಇಷ್ಟವಾಗುತ್ತೆ ಅನ್ನುವ ನಂಬಿಕೆ ಸಮಂತಾಗೆ ಇದೆ. ಇದಕ್ಕೆ ಪೂರಕವಾಗಿ ಈಗಾಗಲೇ ಸರಣಿಯ ಕೆಲವು ದೃಶ್ಯ ನೋಡಿದ್ದೇನೆ. ಅದ್ಭುತವಾಗಿದೆ. 22 ತಿಂಗಳ ಕಷ್ಟ ಕಾಣುತ್ತಿದೆ. ಜನರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ ಎಂದು ಹಿಂದೊಮ್ಮೆ ಹೇಳಿದ್ದರು ಸಮಂತಾ.
ಬಾಲಿವುಡ್ ಹೀರೋ ವರುಣ್ ಧವನ್ ಈ ಚಿತ್ರದ ನಾಯಕ. ಫ್ಯಾಮಿಲಿಮ್ಯಾನ್ ಸರಣಿ ನಿರ್ದೇಶಿಸಿದ್ದ ರಾಜ್ & ಡಿಕೆ ಇದರ ಸಾರಥಿ.ಹಾಲಿವುಡ್ ಸರಣಿಯ ಹಿಂದಿ ರಿಮೇಕ್ ಆಗಿರುವ ಸಿಟಾಡೆಲ್ ಹನ್ನಿ ಬನ್ನಿಯ ಕಥೆ ಅಮೆಜಾನ್ ನಲ್ಲಿ ಸದ್ಯದಲ್ಲಿಯೇ ಅನಾವರಣವಾಗಲಿದೆ.

ಸಮಂತಾಗೆ ಮೈಯೋಸಿಟಿಸ್ ಕಾಯಿಲೆ
ಇನ್ನೂ, ಸಮಂತಾ ಮೈಯೋಸಿಟಿಸ್ ಎಂಬ ಆಟೋ ಇಮ್ಯೂನ್ ಸ್ಥಿತಿಯಿಂದ ಬಳಲುತ್ತಿದ್ದಾರೆ. ಕಾಯಿಲೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆಯನ್ನೂ ಕೂಡ ಪಡೆದು ಬಂದಿದ್ದಾರೆ. ಒಂದರ್ಥದಲ್ಲಿ ಕಳೆದ ಎರಡು ವರ್ಷಗಳಿಂದ ಸಮಂತಾ ಪಡಬಾರದ ಕಷ್ಟ ಪಟ್ಟಿದ್ದಾರೆ. ನೋವನ್ನೆಲ್ಲ ಒಬ್ಬರೇ ಸಹಿಸಿಕೊಂಡೇ ಬಂದಿದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಸಮಂತಾ ತಮ್ಮ ಮಾದಕ ಮೈಮಾಟದಿಂದ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ತಮ್ಮ ಈ ಹೊಸ ಲುಕ್ ನಿಂದ ಕಿಕ್ ಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನ ಸಮಂತಾ ಅಭಿನಯದ ಸಿಟಾಡೆಲ್ ಹನಿ ಬನಿ ಪ್ರಸಾರವಾಗಲಿದೆ. ಆಗ ಎಲ್ಲೆಲ್ಲಿ ಕಿಚ್ಚು ಹತ್ತಿಕೊಳ್ಳುತ್ತೋ ಗೊತ್ತಿಲ್ಲ


Click it and Unblock the Notifications











