ನಾಗಾರ್ಜುನಗೆ ಸಮಂತಾ ಮಾಡಿದ ಟ್ವೀಟ್ ವೈರಲ್: ಕಾರಣ?

By ಫಿಲ್ಮಿಬೀಟ್ ಡೆಸ್ಕ್

ಸಮಂತಾ ಹಾಗೂ ನಾಗ ಚೈತನ್ಯ ನಡುವಿನ ಸಂಬಂಧ ಹಳಸಿದೆ ಎನ್ನಲಾಗಿದೆ. ಈ ಬಗ್ಗೆ ಹಲವಾರು ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಸಮಂತಾ, ಚೈತನ್ಯ ಮೌನ ಈ ಸುದ್ದಿಗಳಿಗೆ ಪುಷ್ಠಿ ನೀಡುವಂತೆಯೇ ಇದೆ.

ಸಮಂತಾ ಹಾಗೂ ನಾಗ ಚೈತನ್ಯ 2017ರಲ್ಲಿ ವಿವಾಹವಾದರು. ನಾಲ್ಕು ವರ್ಷದ ದಾಂಪತ್ಯದ ಬಳಿಕ ಈಗ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಹಲವಾರು ಸುದ್ದಿಗಳು ಈ ಬಗ್ಗೆ ಹರಿದಾಡುತ್ತಿವೆ. ಸುದ್ದಿಗಳು ಸುಳ್ಳೆಂದಾಗಲಿ, ಸತ್ಯವೆಂದಾಗಲಿ ಸಮಂತಾ ಅಥವಾ ನಾಗ ಚೈತನ್ಯ ಯಾರೂ ಈವರೆಗೆ ಸ್ಪಷ್ಟನೆ ನೀಡಿಲ್ಲ.

ಆದರೆ ಇದೀಗ ಸಮಂತಾ ಮಾಡಿರುವ ಟ್ವೀಟ್ ಬೇರೆಯದ್ದನ್ನೇ ಹೇಳುತ್ತಿದೆ. ತಮ್ಮ ಮಾವ ನಾಗಾರ್ಜುನ ವಿಡಿಯೋ ಒಂದನ್ನು ಹಂಚಿಕೊಂಡು ಸಮಂತಾ ಶುಭಾಶಯಗಳನ್ನು ಹೇಳಿದ್ದಾರೆ. ಈ ಟ್ವೀಟ್ ಬಹುವಾಗಿ ವೈರಲ್ ಆಗಿದೆ.

ನಾಗಾರ್ಜುನ, ತಮ್ಮ ಹೊಸ ಸಿನಿಮಾ 'ಬಂಗಾರ್ರಾಜು' ಕುರಿತಾಗಿ ವಿಡಿಯೋ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಬಹಳ ಸುಂದರವಾಗಿದೆ. ನಾಗಾರ್ಜುನ ಮಾಡಿರುವ ವಿಡಿಯೋ ಟ್ವಿಟ್ ಅನ್ನು ತಮ್ಮ ಖಾತೆಯಿಂದ ಹಂಚಿಕೊಂಡಿರುವ ಸಮಂತಾ, ''ಇದು ಬಹಳ ಸುಂದರವಾಗಿದೆ ನಾಗಾರ್ಜುನ ಮಾಮ'' ಎಂದಿದ್ದಾರೆ. ಸಮಂತಾ, ನಾಗಾರ್ಜುನ ಅವರನ್ನು ಮಾವ ಎಂದು ಕರೆದಿರುವುದು ಹಲವು ಗಾಳಿಸುದ್ದಿಗಳಿಗೆ ಉತ್ತರ ನೀಡಿದಂತಾಗಿದೆ. ಸಮಂತಾ ಟ್ವೀಟ್‌ ಮಾಡಿದ ಕೂಡಲೇ ವಿಚ್ಛೇಧನದ ಸುದ್ದಿಗಳು ಕೇವಲ ಗಾಳಿಸುದ್ದಿಗಳು ಎನ್ನುವಂತೆಯೂ ಇಲ್ಲ. ಅದಕ್ಕೆ ಕಾರಣವೂ ಇದೆ.

ಸಮಂತಾ ಟ್ವೀಟ್‌ಗೆ ಪ್ರತಿಕ್ರಿಯಿಸದ ನಾಗಾರ್ಜುನ

ಸಮಂತಾ ಟ್ವೀಟ್‌ಗೆ ಪ್ರತಿಕ್ರಿಯಿಸದ ನಾಗಾರ್ಜುನ

ಸಮಂತಾ, ನಾಗಾರ್ಜುನ ಅವರಿಗೆ ಮಾವ ಎಂದು ಟ್ವೀಟ್ ಮಾಡಿದ್ದಾರೆ ನಿಜ ಆದರೆ ನಾಗಾರ್ಜುನ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ದಿನಗಳ ಹಿಂದೆ ನಾಗಾರ್ಜುನ ಹುಟ್ಟುಹಬ್ಬಕ್ಕೆ ಸಹ ಸಮಂತಾ ಟ್ವೀಟ್ ಮಾಡಿ ಶುಭಾಶಯ ಕೋರಿದ್ದರು. ಸಮಂತಾರ ಟ್ವೀಟ್‌ಗೆ ನಾಗಾರ್ಜುನ ಪ್ರತಿಕ್ರಿಯೆ ನೀಡಿರಲಿಲ್ಲ. ಬೇರೆಲ್ಲ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ್ದ ನಾಗಾರ್ಜುನ, ಸಮಂತಾ ಟ್ವೀಟ್ ಅನ್ನು ನಿರ್ಲಕ್ಷ್ಯ ಮಾಡಿದ್ದರು. ಇದು ಸಮಂತಾ-ನಾಗ ಚೈತನ್ಯ ಸಂಬಂಧ ಹಳಸಿರುವ ಸುದ್ದಿಗಳಿಗೆ ಇನ್ನಷ್ಟು ಇಂಬು ನೀಡಿತ್ತು.

ಸಮಂತಾ ಟ್ವೀಟ್‌ಗೆ ನಾಗ ಚೈತನ್ಯ ಪ್ರತಿಕ್ರಿಯೆ

ಸಮಂತಾ ಟ್ವೀಟ್‌ಗೆ ನಾಗ ಚೈತನ್ಯ ಪ್ರತಿಕ್ರಿಯೆ

ಮಾವ ನಾಗಾರ್ಜುನಗೆ ಮಾತ್ರವಲ್ಲ ಪತಿ ನಾಗ ಚೈತನ್ಯಗೂ ಸಮಂತಾ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ನಾಗ ಚೈತನ್ಯ ತಮ್ಮ ಮುಂದಿನ ಸಿನಿಮಾ 'ಲವ್ ಸ್ಟೋರಿ' ಸಿನಿಮಾದ ಕುರಿತಾಗಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅನ್ನು ಶೇರ್ ಮಾಡಿದ್ದ ಸಮಂತಾ ಸಿನಿಮಾಕ್ಕೆ ಶುಭ ಕೋರಿದ್ದರು. ಸಮಂತಾರ ಟ್ವೀಟ್‌ಗೆ ಪ್ರತಿಕ್ರಿಯ ನೀಡಿದ ನಾಗ ಚೈತನ್ಯ 'ಥ್ಯಾಂಕ್ಸ್ ಸ್ಯಾಮ್' ಎಂದಿದ್ದರು. ಆದರೆ ಆ ಟ್ವೀಟ್‌ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ ಅಭಿಮಾನಿಗಳು 'ಹೃದಯದ ಇಮೋಜಿ ಎಲ್ಲಿ?' ಎಂದು ಪ್ರಶ್ನೆ ಮಾಡಿದ್ದರು.

ಹೆಸರು ಬದಲಾಯಿಸಿದ್ದ ಸಮಂತಾ

ಹೆಸರು ಬದಲಾಯಿಸಿದ್ದ ಸಮಂತಾ

ಕೆಲ ದಿನಗಳ ಹಿಂದೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಪಕ್ಕ ಇದ್ದ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿ ಕೇವಲ 'ಎಸ್' ಎಂದಷ್ಟೆ ಉಳಿಸಿಕೊಂಡರು ಆಗಲಿಂದಲೂ ಸಮಂತಾ ಹಾಗೂ ನಾಗಚೈತನ್ಯ ಸಂಬಂಧದ ಕುರಿತ ಅನುಮಾನಗಳು ಆರಂಭವಾದವು. ಎರಡು ದಿನ ಹಿಂದೆಯಷ್ಟೆ ಸಮಂತಾ ತಿರುಪತಿಗೆ ಭೇಟಿ ನೀಡಿದ್ದರು ಸಮಂತಾ, ಆಗ ಮಾಧ್ಯಮದವರು ಸಮಂತಾ ಹಾಗೂ ನಾಗಚೈತನ್ಯ ಸಂಬಂಧದ ಪ್ರಶ್ನೆ ಮಾಡಿದರು. ಇದಕ್ಕೆ ಸಿಟ್ಟಿನಿಂದಲೇ ಉತ್ತರಿಸಿದ ಸಮಂತಾ, 'ನಾನು ದೇವಸ್ಥಾನಕ್ಕೆ ಬಂದಿದ್ದೀನಿ ನಿಮಗೇನು ತಲೆ ಕೆಟ್ಟಿದೆಯೇ?' ಎಂದಿದ್ದರು.

ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾಗೂ ವೆಬ್ ಸರಣಿಯಲ್ಲಿ ಭಾರಿ ಯಶಸ್ಸನ್ನು ಸಮಂತಾ ಪಡೆದುಕೊಂಡಿದ್ದಾರೆ. ಇನ್ನು ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಸಿನಿಮಾ ಇದೇ ಸೆಪ್ಟೆಂಬರ್ 24 ಕ್ಕೆ ಬಿಡುಗಡೆ ಆಗಲಿದೆ. ಅಮೀರ್ ಖಾನ್‌ ಜೊತೆಗೆ ಹಿಂದಿ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದು, ಆ ಸಿನಿಮಾವು ಡಿಸೆಂಬರ್25 ಕ್ಕೆ ಬಿಡುಗಡೆ ಆಗಲಿದೆ. ಇವೆರಡರ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಾಗ ಚೈತನ್ಯ ನಟಿಸುತ್ತಿದ್ದಾರೆ.

More from Filmibeat

English summary
Amidst rumors about Samantha's personal life, she mentioned her father-in-law Nagarjuna as Mama in her reply to Nagarjuna Tweet. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X