"ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡಿರಬೇಕು, ತಪ್ಪು ಹೇಳಬಾರದು"; ಸಮಂತಾ ಮೇಲೆ ಡಾಕ್ಟರ್ ಕೆಂಡಾಮಂಡಲ

ಟಾಲಿವುಡ್ ನಟಿ ಸಮಂಯಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ವಿರುದ್ಧ ಹೋರಾಡುವ ಪ್ರಯತ್ನ ಮುಂದುವರೆಸಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದನ್ನು ಕಮ್ಮಿ ಮಾಡಿದ್ದಾರೆ. ವರ್ಕೌಟ್‌ ಮಾಡಿ ದೇಹ ದಂಡಿಸುವುದರ ಜೊತೆಗೆ ವೈದ್ಯಕೀಯ ಚಿಕಿತ್ಸೆ, ಥೆರಪಿಗಳ ಮೊರೆ ಹೋಗಿದ್ದಾರೆ.

ಮೈಯೋಸಿಟಿಸ್‌ನಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿ ಸಮಂತಾ ಕೆಲ ವೈದ್ಯ ಪದ್ಧತಿಯ ಬಗ್ಗೆ ಅರಿತುಕೊಂಡಿದ್ದಾರೆ. ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಏನೆಲ್ಲಾ ಕಾರಣವಾಗಬಹುದು? ಅದರಿಂದ ಹೊರ ಬರುವುದು ಹೇಗೆ? ಎನ್ನುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಅದನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಪಾಡ್‌ಕಾಸ್ಟ್‌ ಸಂದರ್ಶನ ನಡೆಸುತ್ತಿದ್ದಾರೆ.

Samantha misleading and misinforming over 3 cr followers doctor post goes viral

ಇತ್ತೀಚೆಗೆ ವೆಲ್‌ನೆಸ್ ಕೋಚ್ ಜೊತೆ ಸ್ಯಾಮ್ ಪಾಡ್‌ಕಾಸ್ಟ್ ಮಾಡಿದ್ದರು. ದೇಹದಲ್ಲಿನ ಲಿವರ್ ಅನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆಯಿತು. ಆದರೆ ಚರ್ಚೆ, ಮಾಹಿತಿ ಬಗ್ಗೆ ವೈದ್ಯರೊಬ್ಬರು ಚಕಾರ ಎತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 3 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಸಮಂತಾ ಅವರನ್ನೆಲ್ಲ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ಸಮಂತಾ ಹೇಳುತ್ತಿರುವುದೆಲ್ಲಾ ಬರೀ ಸುಳ್ಳು ಎಂದು ಎಕ್ಸ್‌(ಟ್ವಿಟ್ಟರ್) ವೇದಿಕೆಯಲ್ಲಿ ವೈದ್ಯರೊಬ್ಬರು ಸುದೀರ್ಘ ಪೋಸ್ಟ್ ಮಾಡಿದ್ದಾರೆ. ಲಿವರ್ ಡಿಟಾಕ್ಸ್ (ಲಿವರ್ ಸ್ವಚ್ಛಗೊಳಿಸುವ) ವಿಷಯದ ಕುರಿತು ಸಮಂತಾ ಹೇಳಿರುವ ಎಲ್ಲಾ ವಿಷಯಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. ಸಮಂತಾ ಜೊತೆಗಿರುವ ಕೋಚ್‌ಗೆ ಮನುಷ್ಯನ ದೇಹ ಹೇಗೆ ಕೆಲಸ ಮಾಡುತ್ತೆ ಅಂತ ತಿಳುವಳಿಕೆ ಇಲ್ಲ. ಇಮ್ಯೂನ್ ಸಿಸ್ಟಂ ಕಡಿಮೆ ಆದಾಗ ಕೆಲವು ಗಿಡಮೂಲಿಕೆಗಳಿಂದ ವಾಸಿಯಾಗುತ್ತೆ ಅಂತ ಏನೋ ಹೇಳುತ್ತಿದ್ದಾನೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ.

ಸೆಲೆಬ್ರಿಟಿಗಳಿಗೆ ಫಾಲೋವರ್ಸ್ ಇದ್ದರೆ ಸಾಕು. ಆರೋಗ್ಯ, ಔಷಧದ ಬಗ್ಗೆ ಕಿಂಚಿತ್ತೂ ತಿಳುವಳಿಕೆ ಇಲ್ಲದಿದ್ದರೂ ಅವರನ್ನು ಹೆಲ್ತ್ ಪಾಡ್‌ಕಾಸ್ಟ್‌ನಲ್ಲಿ ಕೂರಿಸಲಾಗುತ್ತಿದೆ. ದಾಂಡೇಲಿಯನ್ ಸಸ್ಯವು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ.

ನಾನು ಒಂದು ದಶಕದಿಂದ ರಿಜಿಸ್ಟರ್ ಹೆಪಟಾಲಜಿಸ್ಟ್ ಆಗಿ ಲಿವರ್ ಸಮಸ್ಯೆಗೆ ಚಿಕಿತ್ಸೆ ನೀಡುತ್ತಿದ್ದೇನೆ. ಅವರು ಹೇಳಿದ್ದನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ದಾಂಡೇಲಿಯನ್ ಅನ್ನು ಹಂದಿಗಳು ಮತ್ತು ಇಲಿಗಳಂತಹ ಪ್ರಾಣಿಗಳ ಮೇಲೆ ಪರೀಕ್ಷಿಸಲಾಗಿದೆ ಆದರೆ ಇನ್ನೂ ಮಾನವರ ಮೇಲೆ ಪರೀಕ್ಷಿಸಲಾಗಿಲ್ಲ. ಸಮಂತಾಗೆ ವೈದ್ಯಕೀಯ ವಿಚಾರಗಳ ಬಗ್ಗೆ ಗೊತ್ತಿಲ್ಲದಿದ್ದರೆ ಬಾಯಿ ಮುಚ್ಚಿಕೊಂಡಿರಬೇಕು. ಸಮಂತಾ ಅಭಿಮಾನಿಗಳು ಅವರ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿ. ಆದರೆ ಇಂತಹ ವಿಷಯಗಳನ್ನು ನಂಬಬೇಡಿ" ಎಂದು ವೈದ್ಯರು ಸುದೀರ್ಘ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಅಭಿಮಾನಿಗಳು ಈ ವಿಚಾರದಲ್ಲಿ ಸಮಂತಾ ಪರ ಮಾತನಾಡುತ್ತಿದ್ದಾರೆ. ಆಕೆಯನ್ನು ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅದಕ್ಕೂ ವೈದ್ಯರು ಸ್ಪಷ್ಟನೆ ನೀಡುತ್ತಿದ್ದಾರೆ. ಒಟ್ಟಾಗಿ ಸ್ಯಾಮ್ ಪಾಡ್‌ಕಾಸ್ಟ್ ಬಗ್ಗೆ ವೈದ್ಯರ ಆಕ್ರೋಶ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಸಮಂತಾ ಕರಿಯರ್ ವಿಚಾರಕ್ಕೆ ಬಂದರೆ 'ಖುಷಿ' ಬಳಿಕ ಆಕೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಮಯೋಸೈಟಿಸ್ ವಿರುದ್ಧ ಹೋರಾಡುತ್ತಲೇ ಆಕೆ ಈ ಸಿನಿಮಾ ಚಿತ್ರೀಕರಣ, ಪ್ರಚಾರದಲ್ಲಿ ಭಾಗಿ ಆಗಿದ್ದರು. ಇನ್ನು 'ಶಾಕುಂತಲಂ' ಸಿನಿಮಾ ಸೋತಿತ್ತು. ಸದ್ಯ ಹಿಂದಿಯ 'ಸಿಟಾಡೆಲ್' ವೆಬ್‌ ಸೀರಿಸ್‌ನಲ್ಲಿ ಮಾತ್ರ ಸ್ಯಾಮ್ ನಟಿಸುತ್ತಿದ್ದಾರೆ. ವರುಣ್ ಧವನ್ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ. ಶೀಘ್ರದಲ್ಲೇ ಅಮೇಜಾನ್‌ಪ್ರೈಂನಲ್ಲಿ 'ಸಿಟಾಡೆಲ್' ಸ್ಟ್ರೀಮಿಂಗ್ ಆಗಲಿದೆ.

More from Filmibeat

English summary
Doctor slammed actress Samantha Ruth Prabhu's health podcast;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X