For Quick Alerts
  ALLOW NOTIFICATIONS  
  For Daily Alerts

  ಅಕ್ಕಿನೇನಿ ಕುಟುಂಬದ ಅವಾರ್ಡ್ ಫಂಕ್ಷನ್ ಗೆ ಸಮಂತಾ ಚಕ್ಕರ್: ಕಾರಣ ಬಯಲು.!

  |

  ತೆಲುಗು ಸಿನಿ ಅಂಗಳದ ಪ್ರಖ್ಯಾತ ನಟ ದಿವಂಗತ ಅಕ್ಕಿನೇನಿ ನಾಗೇಶ್ವರ ರಾವ್ ಪರಂಪರೆಯನ್ನ ಉಳಿಸಲು ಅಕ್ಕಿನೇನಿ ಕುಟುಂಬ 'ಎ.ಎನ್.ಆರ್ ನ್ಯಾಷನಲ್ ಅವಾರ್ಡ್ಸ್' ಸ್ಥಾಪಿಸಿತು. ಪ್ರತಿ ವರ್ಷ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ 'ಎ.ಎನ್.ಆರ್.ನ್ಯಾಷನಲ್ ಅವಾರ್ಡ್'ಗಳನ್ನ ಅಕ್ಕಿನೇನಿ ಫ್ಯಾಮಿಲಿ ನೀಡುತ್ತಾ ಬಂದಿದೆ.

  ಅದರಂತೆ ಈ ವರ್ಷ 'ಎ.ಎನ್.ಆರ್.ನ್ಯಾಷನಲ್ ಅವಾರ್ಡ್' ಪಾಲಾಗಿದ್ದು ಬಾಲಿವುಡ್ ಬ್ಯೂಟಿ ನಟಿ ರೇಖಾ ಮತ್ತು ದಿವಂಗತ ನಟಿ ಶ್ರೀದೇವಿಗೆ. ಇತ್ತೀಚೆಗಷ್ಟೇ 'ಎ.ಎನ್.ಆರ್.ನ್ಯಾಷನಲ್ ಅವಾರ್ಡ್' ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ನಡೆಯಿತು.

  ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಕ್ಕಿನೇನಿ ಕುಟುಂಬ, ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ಸಾಕ್ಷಿ ಆಗಿದ್ದರು. ಆದ್ರೆ, ಅಕ್ಕಿನೇನಿ ನಾಗಾರ್ಜುನ ಸೊಸೆಯಾಗಿ ಟಾಲಿವುಡ್ ನಟಿ ಸಮಂತಾ ಮಾತ್ರ 'ಎ.ಎನ್.ಆರ್.ನ್ಯಾಷನಲ್ ಅವಾರ್ಡ್' ಫಂಕ್ಷನ್ ಗೆ ಚಕ್ಕರ್ ಹಾಕಿದ್ದರು. ಇದರಿಂದ ಅಭಿಮಾನಿಗಳಿಗೆ ಸಿಟ್ಟು ಬಂದಿದ್ದು ನಿಜ. ಆದ್ರೆ, ಸಮಂತಾ ಹಾಗೆ ಚಕ್ಕರ್ ಹಾಕುವುದಕ್ಕೂ ಒಂದು ಕಾರಣ ಇತ್ತು. ಅದೇನಪ್ಪಾ ಅಂದ್ರೆ....

  ಲಂಡನ್ ನಲ್ಲಿದ್ದಾರೆ ಸಮಂತಾ

  ಲಂಡನ್ ನಲ್ಲಿದ್ದಾರೆ ಸಮಂತಾ

  ಕಳೆದ ಕೆಲ ದಿನಗಳಿಂದ ಟಾಲಿವುಡ್ ಬ್ಯೂಟಿ ಸಮಂತಾ ಅಕ್ಕಿನೇನಿ ಲಂಡನ್ ನಲ್ಲಿದ್ದಾರೆ. ಹಾಗಂತ ಅವರೇನು ಲಂಡನ್ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿಲ್ಲ. 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ಎಂಬ ವೆಬ್ ಸೀರೀಸ್ ನ ಶೂಟಿಂಗ್ ಗಾಗಿ ಸಮಂತಾ ಲಂಡನ್ ಗೆ ಹಾರಿದ್ದಾರೆ. ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಾರಣ ಸಮಂತಾ 'ಎ.ಎನ್.ಆರ್.ನ್ಯಾಷನಲ್ ಅವಾರ್ಡ್ಸ್' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿಲ್ಲ.

  ಗರ್ಭಿಣಿ ವದಂತಿ ಬಗ್ಗೆ ಸಮಂತಾ ಕೊಟ್ಟ ಪ್ರತಿಕ್ರಿಯೆಗರ್ಭಿಣಿ ವದಂತಿ ಬಗ್ಗೆ ಸಮಂತಾ ಕೊಟ್ಟ ಪ್ರತಿಕ್ರಿಯೆ

  ಭಾರತಕ್ಕೆ ಸಮಂತಾ ಬರುವುದು ಯಾವಾಗ.?

  ಭಾರತಕ್ಕೆ ಸಮಂತಾ ಬರುವುದು ಯಾವಾಗ.?

  ಇದೇ ಮೊಟ್ಟ ಮೊದಲ ಬಾರಿಗೆ ವೆಬ್ ಸೀರೀಸ್ ಗಾಗಿ ಸಮಂತಾ ಬಣ್ಣ ಹಚ್ಚಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ವೆಬ್ ಸೀರೀಸ್ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಅದು ಕಂಪ್ಲೀಟ್ ಆಗುವವರೆಗೂ ಸಮಂತಾಗೆ ಬಿಡುಗಡೆಯ ಭಾಗ್ಯವಿಲ್ಲ. ಹೀಗಾಗಿ, ಭಾರತಕ್ಕೆ ಸಮಂತಾ ವಾಪಸ್ ಬರೋಕೆ ಇನ್ನೂ ಸ್ವಲ್ಪ ಟೈಮ್ ಬೇಕು.

  ನಾಗಾರ್ಜುನ ಮಾತಿಗೆ ನಾಚಿ ನೀರಾದ ನಟಿ ರೇಖಾನಾಗಾರ್ಜುನ ಮಾತಿಗೆ ನಾಚಿ ನೀರಾದ ನಟಿ ರೇಖಾ

  ಟೆರರಿಸ್ಟ್ ಆಗಿ ಸಮಂತಾ.?

  ಟೆರರಿಸ್ಟ್ ಆಗಿ ಸಮಂತಾ.?

  'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2' ವೆಬ್ ಸೀರೀಸ್ ನಲ್ಲಿ ಸಮಂತಾ ಅಕ್ಕಿನೇನಿ ಟೆರರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ. ಈ ವೆಬ್ ಸೀರೀಸ್ ನಿಂದ ಸಮಂತಾಗೆ ಪ್ಯಾನ್ ಇಂಡಿಯಾ ಸ್ಟಾರ್ ಸ್ಟೇಟಸ್ ಸಿಗುವ ಸಾಧ್ಯತೆ ಇದೆ ಎಂಬ ಟಾಕ್ ಟಾಲಿವುಡ್ ನಲ್ಲಿದೆ. ಇದರ ಹೊರತಾಗಿ ಸಮಂತಾ ಕೈಯಲ್ಲಿ 96 ತೆಲುಗು ಅವತರಣಿಕೆಯ ಚಿತ್ರವಿದೆ.

  ರೇಖಾ ಮತ್ತು ಶ್ರೀದೇವಿಗೆ ಪ್ರಶಸ್ತಿ

  ರೇಖಾ ಮತ್ತು ಶ್ರೀದೇವಿಗೆ ಪ್ರಶಸ್ತಿ

  ಅಂದ್ಹಾಗೆ, ತೆಲುಗು ಚಿತ್ರರಂಗದಿಂದ ಸಿನಿ ಪಯಣ ಶುರು ಮಾಡಿ ಬಹುಭಾಷಾ ರಾಣಿಯರಾಗಿ ಮೆರೆದ ಇಬ್ಬರು ಸ್ಟಾರ್ ನಟಿಯರಾದ ರೇಖಾ ಮತ್ತು ಶ್ರೀದೇವಿಗೆ ಈ ವರ್ಷ 'ಎ.ಎನ್.ಆರ್ ನ್ಯಾಷನಲ್ ಅವಾರ್ಡ್ಸ್' ನೀಡಲಾಯಿತು. ಪ್ರಶಸ್ತಿ ಪಡೆದ ರೇಖಾ ಸಂತಸ ವ್ಯಕ್ತಪಡಿಸಿದರು. ಇನ್ನೂ ದಿವಂಗತ ನಟಿ ಶ್ರೀದೇವಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಬೋನಿ ಕಪೂರ್ ಭಾವುಕರಾದರು.

  English summary
  Telugu Actress Samantha Akkineni missed ANR National Awards 2019 due to this reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X